Last Updated:
Chinmoy Krishna Das: ಬಾಂಗ್ಲಾದ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್‌ಗೆ ತಾಯಿಯ ಮರಣದ ನಂತರ ಐದು ಗಂಟೆಗಳ ಪೆರೋಲ್ ಸಿಕ್ಕಿದೆ. ಈ ವೇಳೆ ತಾಯಿಯನ್ನು ನೆನೆದು ಚಿನ್ಮಯ್ ದಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ನಡೆದ ಒಂದು ಮನಕಲಕುವ ಘಟನೆಯ ವಿಡಿಯೋ ಇದೀಗ ವೈರಲ್ (Viral Vedio) ಆಗಿದೆ. ಹಿಂದೂ ಸನ್ಯಾಸಿ (Hindu Monk) ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರಿಗೆ ತಾಯಿಯ ಅಂತಿಮ ಸಂಸ್ಕಾರಕ್ಕೆ (mother’s funeral) ಐದು ಗಂಟೆಗಳ ಪೆರೋಲ್ (parole) ನೀಡಲಾಗಿದೆ. ಸುಮಾರು ಎರಡು ವರ್ಷಗಳಿಂದ ಜೈಲಿನಲ್ಲಿರುವ ಈ ಸನ್ಯಾಸಿ, ತಾಯಿಯನ್ನು ಕೊನೆಯ ಬಾರಿಗೆ ನೋಡಲು ಸಹ ಅವಕಾಶ ಪಡೆಯಲಿಲ್ಲ. ಆದರೆ ತಾಯಿಯ ಮರಣದ ನಂತರ ಅವರಿಗೆ ಐದು ಗಂಟೆಗಳ ಪೆರೋಲ್ ಸಿಕ್ಕಿದೆ. ಈ ವೇಳೆ ತಾಯಿಯನ್ನು ನೆನೆದು ಚಿನ್ಮಯ್ ದಾಸ್ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.














