Last Updated:
ಉತ್ತರಾಖಂಡದ ಋಷಿಕೇಶ ಜಿಲ್ಲೆಯಲ್ಲಿ ಮೃತ ವ್ಯಕ್ತಿ ಮತ್ತೆ ಜೀವಂತವಾಗಿರುವ ಘಟನೆ ನಡೆದಿದ್ದು, ಇಡೀ ಕುಟುಂಬ ಅಚ್ಚರಿಗೊಂಡಿದೆ. ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಆ ವ್ಯಕ್ತಿ ಪುನರುತ್ಥಾನಗೊಂಡಿದ್ದಾರೆ ಎನ್ನಲಾಗಿದೆ.
ಸ್ಮಶಾನದಲ್ಲಿ ಅಂತ್ಯಕ್ರಿಯೆಯ ಚಿತೆ ಸಿದ್ಧವಾಗಿದ್ದಾಗ ಒಂದು ಫೋನ್ ಕಾಲ್ (Phone Call) ಬಂದು ಇಡೀ ಕುಟುಂಬವನ್ನು ಅಚ್ಚರಿಗೊಳಿಸಿದೆ. ಉತ್ತರಾಖಂಡದ (Uttarakhand) ಋಷಿಕೇಶದಿಂದ ಈ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಜೀವಂತವಾದ ಘಟನೆ ನಡೆದಿದೆ. ಮೃತರ ಕುಟುಂಬವು ಅಂತ್ಯಕ್ರಿಯೆಗಾಗಿ ಶವವನ್ನು ಸಾಗಿಸುತ್ತಿದ್ದಾಗ ಮತ್ತು ಈಗಾಗಲೇ ಸ್ಮಶಾನದಲ್ಲಿ ಅಂತ್ಯಕ್ರಿಯೆ ಸಕಲ ಸಿದ್ಧತೆ ಮಾಡಿಕೊಂಡಾಗ ಈ ವಿಚಾರ ತಿಳಿದುಬಂದಿದೆ.














