Naman Dhir: 16 ಬೌಂಡರಿ, 12 ಸಿಕ್ಸರ್, 173 ರನ್! ಟಿ20ಯಲ್ಲಿ ಚರಿತ್ರೆ ಸೃಷ್ಟಿಸಿದ ಮುಂಬೈ ಇಂಡಿಯನ್ಸ್ ಪ್ಲೇಯರ್ | ಕ್ರೀಡಾ ಸುದ್ದಿ | ACTPnews

ಪಂಜಾಬ್ ಟಿ20ಯಲ್ಲಿ  ಶತಕ ಸಿಡಿಸಿ ಅಬ್ಬರಿಸಿದ ನಮನ್ ಧೀರ್


Last Updated:



ಇನ್ನಿಂಗ್ಸ್​ನ ಕೊನೆಯ ಓವರ್​​ನಲ್ಲಿ ಔಟ್ ಆದ ಅವರು ಕೇವಲ 3 ರನ್​ಗಳಿಂದ ತಮ್ಮ ಟಿ20 ಕ್ರಿಕೆಟ್​​ನಲ್ಲಿ ಹೆಚ್ಚು ರನ್​ಗಳಿಸಿದ್ದ ವಿಶ್ವದಾಖಲೆಯನ್ನ ಮಿಸ್ ಮಾಡಿಕೊಂಡರು. ಕ್ರಿಸ್​ ಗೇಲ್ ಐಪಿಎಲ್​​ನಲ್ಲಿ 175 ರನ್​ಗಳಿಸಿದ್ದ ದಾಖಲೆ ಜಸ್ಟ್ ಮಿಸ್ ಮಾಡಿಕೊಂಡರು.

ಪಂಜಾಬ್ ಟಿ20ಯಲ್ಲಿ  ಶತಕ ಸಿಡಿಸಿ ಅಬ್ಬರಿಸಿದ ನಮನ್ ಧೀರ್
ಪಂಜಾಬ್ ಟಿ20ಯಲ್ಲಿ ಶತಕ ಸಿಡಿಸಿ ಅಬ್ಬರಿಸಿದ ನಮನ್ ಧೀರ್

ಐಪಿಎಲ್‌ನಲ್ಲಿ (IPL 2027) ಮುಂಬೈ ಇಂಡಿಯನ್ಸ್ (Mumbai Indians) ಪರ ಆಡುವ ನಮನ್ ಧೀರ್ (Naman Dhir), ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ (Sher-E-Punjab T20 League, 2026) ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಅಮೃತಸರ ಪರ ಆಡುವ ಈ ಬಲಗೈ ಬ್ಯಾಟ್ಸ್‌ಮನ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ನಮನ್ ಧೀರ್ ಮೊಹಾಲಿ ಕಿಂಗ್ಸ್ ವಿರುದ್ಧ ವಿಧ್ವಂಸಕ ಪ್ರದರ್ಶನ ನೀಡಿ, ತಮ್ಮ 37 ಎಸೆತಗಳಲ್ಲಿ ಶತಕ ತಲುಪಿದರು. ಇದರೊಂದಿಗೆ, ನಮನ್ ಧೀರ್ ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ಗೌರವಕ್ಕೂ ಪಾತ್ರರಾದರು. ಈ ಹಿಂದೆ, ಈ ದಾಖಲೆಯನ್ನು ಅನ್ಮೋಲ್‌ಪ್ರೀತ್ ಸಿಂಗ್ ಹೊಂದಿದ್ದರು, ಅವರು 39 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು, ಆದರೆ ನಮನ್ ಈಗ ಅವರನ್ನು ಹಿಂದಿಕ್ಕಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports