Last Updated:
ನಂದಮೂರಿ ಬಾಲಕೃಷ್ಣ (Nandamuri Balakrishna) ಹಾಗೂ ನಿರ್ದೇಶಕ ಗೋಪಿಚಂದ್ ಮಲಿನೇನಿ (Gopichand Malineni) ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ ಟೈಟಲ್ ಕೊನೆಗೂ ಬಹಿರಂಗವಾಗಿದೆ.
ಟಾಲಿವುಡ್‌ನ ಮಾಸ್ ಹೀರೋ ನಂದಮೂರಿ ಬಾಲಕೃಷ್ಣ (Nandamuri Balakrishna) ಹಾಗೂ ನಿರ್ದೇಶಕ ಗೋಪಿಚಂದ್ ಮಲಿನೇನಿ (Gopichand Malineni) ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ ಟೈಟಲ್ ಕೊನೆಗೂ ಬಹಿರಂಗವಾಗಿದೆ. ವೀರ ಸಿಂಹ ರೆಡ್ಡಿ ಬಳಿಕ ಮತ್ತೊಮ್ಮೆ ಒಂದಾಗಿರುವ ಈ ಜೋಡಿ, ಈ ಬಾರಿ ರೆಟ್ರೋ ಹಿನ್ನೆಲೆಯ ಪಕ್ಕಾ ಮಾಸ್ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ದಾದಾ ಎಂಬ ವಿಭಿನ್ನ ಟೈಟಲ್ ಗಮನ ಸೆಳೆಯುತ್ತಿದೆ.














