Last Updated:
ವಿರಾಟ್ ಕೊಹ್ಲಿ 2022 ರಲ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದರು. ಆ ಸಮಯದಲ್ಲಿ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ್ದು ಸಂಚಲನ ಮೂಡಿಸಿತ್ತು. ವಿರಾಟ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಟೆಸ್ಟ್ ನಾಯಕತ್ವ ತೊರೆದಿದ್ದೇಕೆ ಎಂಬುದನ್ನು ವಿವರಿಸಿದರು.
ಎಲ್ಲೆಡೆ ಫ್ರಾಂಚೈಸಿ (Franchise) ಟಿ20 ಲೀಗ್ಗಳು (Leagues) ಜನಪ್ರಿಯತೆ ಗಳಿಸುತ್ತಿರುವ ಈ ಸಮಯದಲ್ಲಿ, ಅಭಿಮಾನಿಗಳನ್ನು ಟೆಸ್ಟ್ (Test) ಕ್ರಿಕೆಟ್ (Cricket) ಗೆ ಆಕರ್ಷಿಸುವ ಮತ್ತು ಅವರನ್ನು ಆಟಕ್ಕೆ ಅಂಟಿಕೊಳ್ಳುವಂತೆ ಮಾಡಿದ ಕೀರ್ತಿ ಟೀಮ್ ಇಂಡಿಯಾ (Team India) ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಗೆ ಸಲ್ಲುತ್ತದೆ. ಜನವರಿ 2022 ರಲ್ಲಿ ಅವರು ಅನಿರೀಕ್ಷಿತವಾಗಿ ಟೆಸ್ಟ್ ನಾಯಕತ್ವವನ್ನು ತೊರೆಯುತ್ತಿರುವುದಾಗಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದರು. ವಿರಾಟ್ ಸುಮಾರು 7 ವರ್ಷಗಳ ಕಾಲ ಭಾರತೀಯ ಟೆಸ್ಟ್ ತಂಡ (Team) ವನ್ನು ಮುನ್ನಡೆಸಿದರು.
ವಿರಾಟ್ ಕೊಹ್ಲಿ ಅವರು ಆಡಿದ 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆಲ್ಲುವ ಮೂಲಕ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದರು. ಕ್ರಿಕೆಟ್ನ ದೀರ್ಘ ಸ್ವರೂಪದ ನಾಯಕತ್ವವನ್ನು ತೊರೆಯುವುದು ಆ ಸಮಯದಲ್ಲಿ ಒಂದು ಸಂಚಲನವಾಗಿತ್ತು. ವಿರಾಟ್ ಇತ್ತೀಚೆಗೆ ಟೆಸ್ಟ್ ನಾಯಕತ್ವ ತೊರೆದಿದ್ದೇಕೆ? ಎಂಬುದನ್ನು ವಿವರಿಸಿದ್ದಾರೆ.
ನಾನು ಯಾವಾಗಲೂ ಭಾರತೀಯ ಕ್ರಿಕೆಟ್ ತಂಡವನ್ನು ಉನ್ನತ ಸ್ಥಾನದಲ್ಲಿಡುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೆ. ಆದರೆ ನಾಯಕತ್ವವು ನನ್ನ ಮೇಲೆ ಎಷ್ಟು ಮಾನಸಿಕ ಹೊರೆಯನ್ನು ಹೇರಿದೆ ಎಂದು ನನಗೆ ಆಗ ತಿಳಿದಿರಲಿಲ್ಲ. ಬ್ಯಾಟಿಂಗ್ ಮತ್ತು ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸುವುದು ಇವೆರಡೂ ನನ್ನ ವೈಯಕ್ತಿಕ ಜೀವನದ ಮೇಲೆ ಭಾರೀ ಪರಿಣಾಮ ಬೀರಿದವು.
ನಾಯಕತ್ವದಿಂದ ಕೆಳಗಿಳಿದ ನಂತರ ನಾನು ಕಠಿಣ ಹಂತವನ್ನು ಎದುರಿಸಿದೆ. ಆ ಸಮಯದಲ್ಲಿ, ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ನನ್ನ ಬೆಂಬಲಕ್ಕೆ ನಿಂತರು. ನಾನು ಅವರಿಬ್ಬರೊಂದಿಗೂ ಸಾಕಷ್ಟು ಮಾತನಾಡಲು ಪ್ರಾರಂಭಿಸಿದೆ. ಅವರು ನನ್ನ ಬಗ್ಗೆ ತುಂಬಾ ಕಾಳಜಿ ವಹಿಸಿದರು. ಅವರು ನನಗೆ ಅವರ ಪರವಾಗಿ ಆಡಲು ಉತ್ಸಾಹ ತುಂಬಿದರು. ಅಲ್ಲಿಯವರೆಗೆ ನಾನು ಸಾಧಿಸಿದ ಸಾಧನೆಗಳು ಮತ್ತು ದಾಖಲೆಗಳನ್ನು ಅವರು ನನಗೆ ನೆನಪಿಸಿದರು” ಎಂದು ದ್ರಾವಿಡ್ ಬಗ್ಗೆ ವಿರಾಟ್ ಮಾತನಾಡಿದ್ದಾರೆ.













