Last Updated:
ರೂಪಾ ರೆಡ್ಡಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಮಯವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಅವರ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದು. ಚಾಕುವಿನಿಂದ 27 ಬಾರಿ ಇರಿದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ.
ತೆಲಂಗಾಣ (ಜು.19): ಪಾಠ ಹೇಳಿಕೊಡುವ ಗುರುಗಳನ್ನ ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗ್ತಿದೆ. ಶಿಕ್ಷಕರನ್ನ ಪೂಜಿಸೋದು ಬಿಡಿ, ಗೌರವ ಕೊಟ್ರೆ ಸಾಕು ಅನ್ನೋ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಇದರ ನಡುವೆಯೇ ತೆಲಂಗಾಣದಲ್ಲಿ (Telangana) ಶಾಕಿಂಗ್ ಘಟನೆ ನಡೆದಿದ್ದು, ಶಾಲೆಯ ಪ್ರಿನ್ಸಿಪಾಲರನ್ನೇ (Principal) ವಿದ್ಯಾರ್ಥಿಗಳೇ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. 10ನೇ ಕ್ಲಾಸ್ ವಿದ್ಯಾರ್ಥಿಗಳು (Student) ಶಾಲಾ ಪ್ರಾಂಶುಪಾಲರನ್ನೇ ಟಾರ್ಗೆಟ್ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ಯಾಕೆ?














