Last Updated:
ಪಾಕಿಸ್ತಾನವು ಮೇ 2025 ರಲ್ಲಿ ಭಾರತವನ್ನು ಸೋಲಿಸಿದೆ ಮತ್ತು ಪಾಕಿಸ್ತಾನದ ಸಾರ್ವಭೌಮತ್ವ ಅಥವಾ ಭದ್ರತೆಗೆ ಭವಿಷ್ಯದಲ್ಲಿ ಎದುರಾಗುವ ಯಾವುದೇ ಸವಾಲನ್ನು ಇನ್ನೂ ಹೆಚ್ಚಿನ ಬಲದಿಂದ ಎದುರಿಸಲಾಗುವುದು ಎಂದು ಶಹಬಾಜ್ ಹೇಳಿದ್ದಾರೆ. ಶಹಬಾಜ್ ಷರೀಫ್ ಅವರ ಈ ಹೇಳಿಕೆಯು ಯಾವತ್ತಿನಂತೆ ಈ ಬಾರಿಯೂ ಪಾಕಿಸ್ತಾನಿ ಸಾರ್ವಜನಿಕರಿಗೆ ಸಮಾಧಾನ ಕೊಟ್ಟಿದೆ.
ಇಸ್ಲಮಾಬಾದ್(ಆ.14): ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಭಾರತದ ವಿರುದ್ಧ ಮತ್ತೊಮ್ಮೆ ಆಕ್ರಮಣಕಾರಿ ಹೇಳಿಕೆ ನೀಡಿದ್ದಾರೆ. ಇಸ್ಲಾಮಾಬಾದ್ನಲ್ಲಿ “ಯಾದ್ಗರ್-ಎ-ಫತೇ” ಸ್ಮಾರಕದ ಉದ್ಘಾಟನೆಯ ಸಂದರ್ಭದಲ್ಲಿ, ಪಾಕಿಸ್ತಾನವು ಮೇ 2025 ರಲ್ಲಿ ಭಾರತವನ್ನು ಸೋಲಿಸಿದೆ ಮತ್ತು ಪಾಕಿಸ್ತಾನದ ಸಾರ್ವಭೌಮತ್ವ ಅಥವಾ ಭದ್ರತೆಗೆ ಭವಿಷ್ಯದಲ್ಲಿ ಎದುರಾಗುವ ಯಾವುದೇ ಸವಾಲನ್ನು ಇನ್ನೂ ಹೆಚ್ಚಿನ ಬಲದಿಂದ ಎದುರಿಸಲಾಗುವುದು ಎಂದು ಶಹಬಾಜ್ ಹೇಳಿದ್ದಾರೆ. ಶಹಬಾಜ್ ಷರೀಫ್ ಅವರ ಈ ಹೇಳಿಕೆಯು ಯಾವತ್ತಿನಂತೆ ಈ ಬಾರಿಯೂ ಪಾಕಿಸ್ತಾನಿ ಸಾರ್ವಜನಿಕರಿಗೆ ಸಮಾಧಾನ ಕೊಟ್ಟಿದೆ.














