Last Updated:
ಶಾಂತಿ ಕ್ರಾಂತಿ ಚಿತ್ರ ಮತ್ತೆ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಸಾಕಷ್ಟು ಸದ್ದು ಮಾಡ್ತಿದೆ. ಈ ಹಿನ್ನೆಲೆ ಬಾಲಾಜಿ ವೀರಸ್ವಾಮಿ ಅವರು ರೀ- ರಿಲೀಸ್ ಬಗ್ಗೆ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ಶಾಂತಿ ಕ್ರಾಂತಿ ರೀ-ರಿಲೀಸ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಸ್ಯಾಂಡಲ್ವುಡ್ನ ಕನಸುಗಾರ ವಿ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರವನ್ನು ಮತ್ತೆ ರಿಲೀಸ್ ಮಾಡಿ ಎಂಬ ಕೂಗು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅದೆಷ್ಟೋ ಸಿನಿ ಪ್ರೇಮಿಗಳು ಈ ಚಿತ್ರವನ್ನು ರಿಲೀಸ್ ಮಾಡಿದ್ರೆ, ಥಿಯೇಟರ್ಗೆ ಬರುತ್ತೇವೆ ಎಂದು ಕಾದು ಕುಳಿತಿದ್ದಾರೆ. ಆದ್ರೆ, ಶಾಂತಿ ಕ್ರಾಂತಿ ಚಿತ್ರದ ರೀ ರಿಲೀಸ್ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ಅವರು ಕೊನೆಗೂ ಮೌನ ಮುರಿದಿದ್ದಾರೆ.














