Last Updated:
ಮಾಜಿ ಆಟಗಾರರಾದ ಅಶ್ವಿನ್ ಸೇರಿದಂತೆ ಹಲವಾರು ದಿಗ್ಗಜರು ಭುವನೇಶ್ವರ್ಗೆ ಅವಕಾಶ ನೀಡಬೇಕು, ದಕ್ಷಿಣ ಆಫ್ರಿಕಾದಲ್ಲಿ ಅವರ ಬೌಲಿಂಗ್ ನಡೆಯಲಿದೆ ಎಂದು ಬಿಸಿಸಿಐಗೆ (BCCI) ಮನವಿ ಮಾಡುತ್ತಿದ್ದಾರೆ. ಇದೀಗ ಸ್ವತಃ ಭುವನೇಶ್ವರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಹಲವಾರು ದಿನಗಳಿಂದ 2027ರ ಏಕದಿನ ವಿಶ್ವಕಪ್ಗೆ (ODI World Cup) ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ಗೆ (Bhuvneshwar Kumar) ಅವಕಾಶ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ. ಮಾಜಿ ಆಟಗಾರರಾದ ಅಶ್ವಿನ್ ಸೇರಿದಂತೆ ಹಲವಾರು ದಿಗ್ಗಜರು ಭುವನೇಶ್ವರ್ಗೆ ಅವಕಾಶ ನೀಡಬೇಕು, ದಕ್ಷಿಣ ಆಫ್ರಿಕಾದಲ್ಲಿ ಅವರ ಬೌಲಿಂಗ್ ನಡೆಯಲಿದೆ ಎಂದು ಬಿಸಿಸಿಐಗೆ (BCCI) ಮನವಿ ಮಾಡುತ್ತಿದ್ದಾರೆ. ಆದರೆ ಭಾರತ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಏಕದಿನ ವಿಶ್ವಕಪ್ ತಂಡಕ್ಕೆ ಸೇರುವ ಸಾಧ್ಯತೆಗಳ ಬಗ್ಗೆ ಕೇಳಿದಾಗ ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸಲು ನಿರಾಕರಿಸಿದ್ದಾರೆ. ಭವಿಷ್ಯದಲ್ಲಿ ಏನಾಗಲಿದೆ ಎಂದು ಊಹಿಸುವ ಬದಲು, ಪ್ರಸ್ತುತ ಆಡುವುದು ಮತ್ತು ಉತ್ತಮ ಪ್ರದರ್ಶನ ನೀಡುವುದರ ಮೇಲೆ ತಮ್ಮ ಗಮನವಿದೆ ಎಂದು ಭುವನೇಶ್ವರ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.














