Last Updated:
ಡಿಪ್ಲೊಮಾ ಫಾರ್ಮಸಿ ಹಾಗೂ GNM ಪೂರ್ಣಗೊಳಿಸಿದವರಿಗೆ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ಅವಕಾಶ ಬಂದಿದೆ. KEA ಮೂಲಕ ESIS ಇಲಾಖೆಯ 233 ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 30 ಕೊನೆಯ ದಿನ.
ಬೆಂಗಳೂರು: ಡಿಪ್ಲೊಮಾ ಇನ್ ಫಾರ್ಮಸಿ ಹಾಗೂ ನರ್ಸಿಂಗ್ ಕೋರ್ಸ್ (Farmacy And Nursing Course) ಮುಗಿಸಿ, ಸರ್ಕಾರಿ ಕೆಲಸದ (Government Job) ನಿರೀಕ್ಷೆಯಲ್ಲಿರುವ ವೈದ್ಯಕೀಯ ವೃತ್ತಿಪರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮುಖಾಂತರ ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ (Employees’ State Insurance Scheme – Medical Services / ESIS) ಖಾಲಿ ಇರುವ ಒಟ್ಟು 233 ಫಾರ್ಮಸಿ ಆಫೀಸರ್ ಹಾಗೂ ನರ್ಸಿಂಗ್ ಆಫೀಸರ್ (ಶುಶ್ರೂಷಾಧಿಕಾರಿ) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.














