Last Updated:
ಅಣ್ಣಾವ್ರು ರಾವಣನ ರೋಲ್ ಮಾಡಿದ್ದಾರೆ. ಶ್ರೀರಾಮನ ಪಾತ್ರದಲ್ಲೂ ನಟಿಸಿದ್ದಾರೆ. ಅಷ್ಟೆ ಯಾಕೆ ಆಂಜನೇಯನ ರೋಲ್ ಕೂಡ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ರಾಮಾಯಣ ಟ್ರೈಲರ್ ಹೆಚ್ಚು ವೈರಲ್ ಆಗಿದೆ. ಎಲ್ಲರೂ ಈ ಬಗ್ಗೆ ಮಾತನಾಡುತ್ತಿದ್ದಾರೆ. ಕಾಮೆಂಟ್ ಹೊಡೆಯೋರು ಇದ್ದಾರೆ. ಇದರ ನಡುವೆ ಒಂದು ಪ್ರಶ್ನೆ ಬರುತ್ತದೆ. ಈ ಹಿಂದೆ ಕನ್ನಡದಲ್ಲಿ ರಾವಣ (Ravana) ರೋಲ್ ಯಾರು ಮಾಡಲೇ ಇಲ್ವೇ? ಈ ಪ್ರಶ್ನೆಗೆ ಉತ್ತರವೂ ಇದೆ. ರಾವಣನ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ವಜ್ರಮುನಿ ಅವರೂ ಅಭಿನಯಿಸಿದ್ದಾರೆ. ಆದರೆ ಇವರ ನಡುವೆ ರಾಜಕುಮಾರ್ (Rajkumar) ವಿಶೇಷ ಅನಿಸುತ್ತಾರೆ. ರಾಮ, (Ram) ರಾವಣ ಮತ್ತು ಆಂಜನೇಯ ಹೀಗೆ ಮೂರು ಪಾತ್ರಗಳನ್ನ ಇವರು ಪ್ರತ್ಯೇಕ ಮೂರು ಸಿನಿಮಾಗಳಲ್ಲಿ ಮಾಡಿದ್ದಾರೆ. ಈ ವಿಶೇಷತೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.
ಭೂಕೈಲಾಸ ಚಿತ್ರದಲ್ಲಿ ರಾವಣನ ಪಾತ್ರ
ಈ ಪಾತ್ರವನ್ನು ಕೂಡ ಜನ ಮೆಚ್ಚಿದ್ದರು. ರಾವಣನಾಗಿಯೇ ರಾಜಕುಮಾರ್ ಇಲ್ಲಿ ಅಬ್ಬರಿಸಿದ್ದರು. ಆ ರೀತಿಯ ಈ ಪಾತ್ರ ಅಣ್ಣಾವ್ರಿಗೆ ಹೆಸರು ತಂದುಕೊಟ್ಟಿತ್ತು.
ರಾಮಾಂಜನೇಯ ಯುದ್ಧ ಚಿತ್ರ ಡಿಸೆಂಬರ್-17,1963 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ರಾಜಕುಮಾರ್ ಅವರು ಶ್ರೀರಾಮನ ಪಾತ್ರ ಮಾಡಿದ್ದರು.
ರಾಮನ ಪರಮ ಭಕ್ತ ಆಂಜನೇಯನ ಪಾತ್ರವನ್ನ ನಟ ಉದಯಕುಮಾರ್ ಮಾಡಿದ್ದರು. ಇವರ ಈ ಚಿತ್ರವನ್ನ ಎಂ.ನಾಗೇಶ್ವರ್ ರಾವ್ ಹಾಗೂ ಎಂ.ಎಸ್.ನಾಯಕ್ ಡೈರೆಕ್ಷನ್ ಮಾಡಿದ್ದರು.
ಅಣ್ಣಾವ್ರು ಆಂಜನೇಯನ ರೋಲ್ ಕೂಡ ಮಾಡಿದ್ದಾರೆ. ದೂರದ ಬೆಟ್ಟ ಚಿತ್ರದಲ್ಲಿ ಹಳ್ಳಿ ಯುವಕರು ನಾಟಕ ಮಾಡುತ್ತಾರೆ. ಲಂಕಾ ದಹನ ಅನ್ನುವ ನಾಟಕವನ್ನೆ ಇವರು ಮಾಡುತ್ತಾರೆ.
ರಾಮನ ಪಾತ್ರದಲ್ಲಿ ಅಣ್ಣಾವ್ರು
ಈ ಒಂದು ದೃಶ್ಯ ಶೂಟ್ ಕೂಡ ಆಗಿದೆ. ಚಿತ್ರದ ಫೈನಲ್ ಕಾಪಿಯಲ್ಲೂ ಇತ್ತು. ಆದರೆ, ಅಣ್ಣಾವ್ರು, ವರದರಾಜ್, ಡೈರೆಕ್ಟರ್ ಸಿದ್ದಲಿಂಗಯ್ಯನವರು ಈ ಚಿತ್ರವನ್ನ ನೋಡಿದ್ದಾರೆ. ಆದರೆ, ಲಂಕಾ ದಹನ ನಾಟಕದ ದೃಶ್ಯ ತೆಗೆಯಬೇಕು ಅಂತಲೂ ಅನಿಸಿದೆ. ಹಾಗಾಗಿಯೇ ಇದನ್ನ ತೆಗೆದಿದ್ದಾರೆ.
ಈ ಚಿತ್ರದಲ್ಲಿ ಲಂಕಾ ದಹನ ನಾಟಕದ ಆಂಜನೇಯನ ಪಾತ್ರದಲ್ಲಿ ಹಾಸ್ಯವು ಇದೆ. ಕಾರಣ, ಹಳ್ಳಿ ಯುವಕರು ಈ ಒಂದು ನಾಟಕ ಮಾಡುವಾಗ ಆಗುವ ಆಬಾಸಗಳನ್ನೆ ಇಲ್ಲಿ ಹಾಸ್ಯ ರೂಪದಲ್ಲಿಯೇ ಚಿತ್ರೀಕರಣ ಮಾಡಿದ್ದರು.
ಅಣ್ಣಾವ್ರ ಆಂಜನೇಯನ ರೋಲ್(ಚಿತ್ರ ಕೃಪೆ: ಪ್ರಗತಿ ಅಶ್ವತ್ಥ್ ನಾರಾಯಣ್ ಫೇಸ್ ಬುಕ್ ಪೇಜ್)
ಚಿತ್ರ ನೋಡಿದ್ಮೇಲೆ ರಾಜಕುಮಾರ್, ವರದಾಜ್, ಸಿದ್ದಲಿಂಗಯ್ಯನವರಿಗೆ ಈ ದೃಶ್ಯ ಬೇಡ ಅನಿಸಿದೆ. ನಾವೆಲ್ಲ ರಂಗಭೂಮಿಯಿಂದಲೇ ಬಂದವರು. ಯುವಕರ ನಾಟಕ ಪ್ರೇಮವನ್ನ ನಾವು ಪ್ರೋತ್ಸಾಹಿಸಬೇಕು ಹೊರತು, ಹಾಸ್ಯ ಮಾಡಬಾರದು ಅಂತಲೇ ಈ ದೃಶ್ಯ ತೆಗೆದಿದ್ದಾರೆ.
ಈ ವಿಚಾರವನ್ನ ಪ್ರಗತಿ ಅಶ್ವತ್ಥ್ ನಾರಾಯಣ್ ಅವರ ಫೇಸ್ ಬುಕ್ ಅಲ್ಲಿಯೇ ಬರೆದುಕೊಂಡಿದ್ದಾರೆ. ಇವರು ಈ ದೂರದ ಬೆಟ್ಟ ಚಿತ್ರಕ್ಕೆ ಸ್ಥಿರ ಛಾಯಾಗ್ರಾಹಕರಾಗಿಯೇ ಕೆಲಸ ಮಾಡಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka














