Last Updated:
ಕರಾವಳಿ ಚಿತ್ರದಲ್ಲಿ ಮಹಾಬಲ ಪಾತ್ರದ ಮೂಲಕ ಮಿತ್ರ ಎಲ್ಲರ ದಿಲ್ ಕದ್ದಿದ್ದಾರೆ. ಇದೀಗ ಮತ್ತೊಂದು ಚಿತ್ರದಲ್ಲಿ ಅಂತಹದ್ದೆ ಹೊಸ ಭರವಸೆ ಮೂಡಿಸಿದ್ದಾರೆ. ಇದರ ಇನ್ನಷ್ಟು ಅಧಿಕೃತ ವಿವರ ಇಲ್ಲಿದೆ ಓದಿ.
ಕರಾವಳಿ ಚಿತ್ರದಲ್ಲಿ ಮಿತ್ರ (Karavali Movie Mithra) ಅದ್ಭುತವಾಗಿಯೇ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಮಹಾಬಲ (Mahabala) ಅನ್ನುವ ರೋಲ್ ಮಾಡಿದ್ದಾರೆ. ಈ ಒಂದು ಪಾತ್ರದ ಸುತ್ತವೇ ಇಡೀ ಕತೆ ಇದೆ. ರಾಜ್ ಬಿ ಶೆಟ್ಟಿ, ಪ್ರಜ್ವಲ್ ದೇವರಾಜ್ ಸೇರಿದಂತೆ ಇತರ ಪಾತ್ರಗಳು ಈ ಮಹಾಬಲನ ಸುತ್ತವೇ ಇವೆ. ಆದರೆ, ವಿಷಯ ಈಗ ಇದಲ್ಲ ಬಿಡಿ. ಮಹಾಬಲ ಮಿತ್ರ ಇನ್ನೂ ಒಂದು ಚಿತ್ರ ಮಾಡಿದ್ದಾರೆ. ಇದು ಮಹಾನ್ (Mahaan) ಅನ್ನುವ ಚಿತ್ರವೇ ಆಗಿದೆ. ಇಲ್ಲೂ ಒಂದು ಒಳ್ಳೆ ಪಾತ್ರವೇ ಸಿಕ್ಕಿದೆ. ಇಲ್ಲೂ ಗ್ರೇ ಹೇರ್ ಸ್ಟೈಲ್ (Grey Hair Style) ಅಲ್ಲಿಯೇ ಇದ್ದಾರೆ. ಶಿವಯ್ಯ ಅನ್ನುವ ಈ ರೋಲ್ ಕೂಡ ಮಹತ್ವದ್ದೇ ಆಗಿದೆ. ಈ ಪಾತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಿಳಿ ಗಡ್ಡದ ಶಿವಯ್ಯ
ಚಿತ್ರ ತಂಡ ಆ ಪ್ರಶ್ನೆಗಳಿಗೆ ಇದೀಗ ಉತ್ತರ ಕೊಟ್ಟಿದೆ. ಮಹಾನ್ ಚಿತ್ರದಲ್ಲಿ ಮಿತ್ರ ಒಂದು ಅದ್ಭುತ ಪಾತ್ರ ಮಾಡಿದ್ದಾರೆ ಅಂತಲೇ ಹೇಳಿಕೊಂಡಿದೆ. ಇದರೊಟ್ಟಿಗೆ ಪಾತ್ರದ ಪೋಸ್ಟರ್ ಕೂಡ ಹೊರ ಬಂದಿದೆ.
ಈ ಚಿತ್ರದಲ್ಲಿ ಮಿತ್ರ ‘ಶಿವಯ್ಯ’ ಅನ್ನುವ ಪಾತ್ರ ಮಾಡಿದ್ದಾರೆ. ಈ ಒಂದು ಪಾತ್ರಕ್ಕೂ ಬಿಳಿ ಗಡ್ಡ ಬಿಟ್ಟಿದ್ದಾರೆ. ತಲೆಗೂದಲು ಕೂಡ ವೈಟ್ ಆ್ಯಂಡ್ ವೈಟ್ ಆಗಿಯೇ ಇವೆ.
ಆದರೆ, ಈ ಒಂದು ಪಾತ್ರಕ್ಕೆ ಮುಂಗೋಪ ಜಾಸ್ತಿ ಇರುತ್ತದೆ. ನಾಯಕ ವಿಜಯ್ ರಾಘವೇಂದ್ರ ಅವರ ಜೊತೆಗೆ ಸಾಗುವ ಪಾತ್ರ ಇದಾಗಿದೆ.
ಈ ಚಿತ್ರದಲ್ಲಿ ನಾಯಕನ ಸೋದರಮಾವನ ಪಾತ್ರವನ್ನೆ ಮಿತ್ರ ಇಲ್ಲಿ ಮಾಡಿದ್ದಾರೆ. ನಾಯಕನಿಗೂ ಮತ್ತು ಮಾವನಿಗೂ ವಯಸ್ಸಿನ ಅಂತರ ಜಾಸ್ತಿನೇ ಇರುತ್ತದೆ.
ಮಹಾನ್ ಚಿತ್ರದ ನಾಯಕಿ
ಆದರೆ, ಇವರು ಸ್ನೇಹಿತರ ರೀತಿನೇ ಇರ್ತಾರೆ. ನಾಯಕ ನಟ ವಿಜಯ್ ರಾಘವೇಂದ್ರ ಇಲ್ಲಿ ರೈತನ ಪಾತ್ರ ಮಾಡಿದ್ದಾರೆ. ಈ ನಾಯಕನ ಜೊತೆಗೇನೆ ಮಿತ್ರ ಪಾತ್ರವೂ ಸಾಗುತ್ತದೆ. ಆ ರೀತಿನೇ ಚಿತ್ರದ ಈ ಒಂದು ಪಾತ್ರವನ್ನ ಡೈರೆಕ್ಟರ್ ಪಿ.ಸಿ.ಶೇಖರ್ ಬರೆದಿದ್ದಾರೆ.
ಈ ಚಿತ್ರದಲ್ಲಿ ರಾಧಿಕಾ ನಾರಾಯಣ್ ಅಭಿನಯಿಸಿದ್ದಾರೆ. ಇವರು ವಿಜಯ್ ರಾಘವೇಂದ್ರ ಅವರಿಗೆ ಜೋಡಿ ಆಗಿದ್ದಾರೆ. ನರ್ಸ್ ಪಾತ್ರವನ್ನೆ ಮಾಡಿದ್ದಾರೆ.
ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ‘ಮಹಾನ್’ ರೋಲ್ ಮಾಡಿದ್ದಾರೆ. ಇವರೇ ಈ ಚಿತ್ರದಲ್ಲಿ ಮಹಾನ್ ಅನ್ನೋದು ಗೊತ್ತಾಗಿದೆ. ವಿಶೇಷವೆಂದ್ರೆ ಈ ಸಿನಿಮಾದಲ್ಲಿ ಶಿವಣ್ಣ ‘ಲಾಯರ್’ ಪಾತ್ರವನ್ನೆ ಮಾಡಿದ್ದಾರೆ.
ಈ ಚಿತ್ರದಲ್ಲಿ ನಮ್ರತಾ ಗೌಡ ಸೇರಿದಂತೆ ಇನ್ನು ಹಲವು ಕಲಾವಿದರು ನಟಿಸಿದ್ದಾರೆ. ಪ್ರಕಾಶ್ ಬೂದೂರು ಈ ಚಿತ್ರವನ್ನ ನಿರ್ಮಿಸಿದ್ದಾರೆ. ಸದ್ಯಕ್ಕೆ ಈ ಚಿತ್ರದ ಮಿತ್ರ ಹಾಗೂ ರಾಧಿಕಾ ನಾರಾಯಣ್ ಪಾತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka














