Ramayana: ರಾಮಾಯಣದಲ್ಲಿ ಶೂರ್ಪನಖಿಯ ಪತಿಯ ಹೆಸರೇನು? ತಂಗಿಯ ಗಂಡನನ್ನೇ ರಾವಣ ಕೊಂದಿದ್ದೇಕೆ? | | ACTPnews

ವಿವೇಕ್​ ಒಬೆರಾಯ್​


Last Updated:

ಶೂರ್ಪನಕಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಮಿಂಚಿದ್ದಾರೆ. ಆದ್ರೆ, ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ ಪಾತ್ರವೇನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ವಿವೇಕ್​ ಒಬೆರಾಯ್​
ವಿವೇಕ್​ ಒಬೆರಾಯ್​

ಇತ್ತೀಚಿಗೆ ಬಿಡುಗಡೆಗೊಂಡ ರಾಮಾಯಣ ಚಿತ್ರದ (Ramayana Movie) ಟ್ರೇಲರ್ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ರಾಕಿಂಗ್ ಸ್ಟಾರ್ ಯಶ್ (Yash) ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಹಾಗೇ ರಣಬೀರ್ ಕಪೂರ್ (Ranbir Kapoor) ಮತ್ತು ಸಾಯಿ ಪಲ್ಲವಿ ಅವರ ರಾಮ ಮತ್ತು ಸೀತೆಯ ಪಾತ್ರದ ಝಲಕ್ ಸಿನಿ ಪ್ರೇಮಿಗಳ ಗಮನ ಸೆಳೆದಿದೆ. ಶೂರ್ಪನಕಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಮಿಂಚಿದ್ದಾರೆ. ಆದ್ರೆ, ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ ಪಾತ್ರವೇನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಚಿತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರು ಪ್ರಮುಖ ರಾಕ್ಷಸ ಯೋಧ ‘ವಿದ್ಯುಜ್ಜಿಹ್ವ’ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪೌರಾಣಿಕ ಕಥೆಯ ಪ್ರಕಾರ, ವಿದ್ಯುಜ್ಜಿಹ್ವನು ಕಾಲಕೇಯ ರಾಕ್ಷಸ ಕುಲದ ಒಬ್ಬ ಪರಾಕ್ರಮಿ ಯೋಧನಾಗಿದ್ದನು. ಇನ್ನು ಕೆಲವು ಕಥೆಗಳ ಪ್ರಕಾರ, ವಿದ್ಯುಜ್ಜಿಹ್ವ ಕಾಲಕೇಯ ಎಂಬ ರಾಜನ ಸೇನೆಯ ಮುಖ್ಯಸ್ಥರಾಗಿದ್ದರು. ರಾಕ್ಷಸ ಕುಲಕ್ಕೆ ಸೇರಿದವರಾಗಿದ್ದು, ರಾವಣನ ಶತ್ರುಗಳಾಗಿದ್ದರು ಎಂದು ಉಲ್ಲೇಖವಾಗಿದೆ.
ಇದನ್ನೂ ಓದಿ: Ramayana Movie: ರಾಮಾಯಣ ಟ್ರೈಲರ್ ಮೆಚ್ಚಿದ ಪಾಕ್ ಮಂದಿ

ಕಾಲಕೇಯ ವಂಶವು ಆಗಾಗ್ಗೆ ದೇವತೆಗಳೊಂದಿಗೆ ಮತ್ತು ಕೆಲವೊಮ್ಮೆ ಇತರ ರಾಕ್ಷಸ ರಾಜರೊಂದಿಗೂ ಸಂಘರ್ಷ ನಡೆಸುತ್ತಿತ್ತು. ಶೂರ್ಪನಕಿಯು ವಿದ್ಯುಜ್ಜಿಹ್ವನೊಂದಿಗೆ ಗಾಂಧರ್ವ ಪ್ರೇಮ ವಿವಾಹವಾಗಿದ್ದಳು. ಆದರೆ ಅವಳ ಸಹೋದರ ರಾವಣನಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ‘ರಾಮಾಯಣ’ದ ವಿವಿಧ ಆವೃತ್ತಿಗಳಲ್ಲಿ ಈ ಸಂಬಂಧದ ಬಗ್ಗೆ ಭಿನ್ನ ಉಲ್ಲೇಖಗಳು ಕಂಡುಬರುತ್ತವೆ.

ಕೆಲವು ಐತಿಹ್ಯಗಳ ಪ್ರಕಾರ, ರಾವಣನು ಶೂರ್ಪನಕಿಯ ಮದುವೆಯಿಂದ ಸಂತೋಷವಾಗಿರಲಿಲ್ಲ. ಏಕೆಂದರೆ ವಿದ್ಯುಜ್ಜಿಹ್ವನು ಭೂಮಿ ಮತ್ತು ಸ್ವರ್ಗ ಎರಡರ ಮೇಲೂ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದ್ದನು. ಕೌಟುಂಬಿಕ ಪ್ರತಿಷ್ಠೆ, ಪರಸ್ಪರ ವೈಷಮ್ಯ ಮತ್ತು ವಿವಿಧ ಪಕ್ಷಗಳ ಕಾರಣದಿಂದ ರಾವಣನು ಅವರಿಬ್ಬರ ಸಂಬಂಧವನ್ನು ವಿರೋಧಿಸಿದ್ದನು.

ಕೆಲವು ಕಥೆಗಳ ಪ್ರಕಾರ ರಾವಣನು ವಿದ್ಯುಜ್ಜಿಹ್ವನನ್ನು ದ್ವೇಷಿಸುತ್ತಿದ್ದನು. ಒಮ್ಮೆ ವಿಶ್ವ ಪ್ರದಕ್ಷಿಣೆಯ ಅಭಿಯಾನದಲ್ಲಿದ್ದಾಗ ರಾವಣನು ಮೊದಲು ದಕ್ಷಿಣದ ಅನೇಕ ರಾಜ್ಯಗಳನ್ನು ಗೆದ್ದನು. ನಂತರ ಆತ ಭೂಮಿ ಮತ್ತು ಸ್ವರ್ಗದ ಮೇಲೆ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದನು. ಆ ಬಳಿಕ ಆತ ಪಾತಾಳಕ್ಕೆ ತಲುಪಿದನು. ಅಲ್ಲಿ ರಾವಣ ಮತ್ತು ವಿದ್ಯುಜ್ಜಿಹ್ವನ ಭೇಟಿಯಾಯಿತು. ವಿದ್ಯುಜ್ಜಿಹ್ವನು ರಾವಣನಿಗೆ ಬೆಂಬಲ ನೀಡಲು ನಿರಾಕರಿಸಿ ಯುದ್ಧ ಮಾಡಲು ನಿರ್ಧರಿಸಿದನು.

ಆಗ ಇಬ್ಬರ ನಡುವೆ ಭೀಕರ ಯುದ್ಧ ನಡೆಯಿತು ಮತ್ತು ಯುದ್ಧದಲ್ಲಿ ವಿದ್ಯುಜ್ಜಿಹ್ವನು ಹತನಾದನು. ಶೂರ್ಪನಕಿಗೆ ತನ್ನ ಪತಿಯ ಮೃತ್ಯುವಿನ ಸುದ್ದಿ ತಿಳಿದಾಗ, ಅತ್ಯಂತ ದುಃಖವಾಯಿತು. ತನ್ನ ಸಹೋದರ ರಾವಣನ ಮೇಲೆ ಕೋಪಗೊಂಡಳು. ಕೋಪದ ಭರದಲ್ಲಿ ರಾವಣನಿಗೆ, ಯಾವ ಗರ್ವವು ತನ್ನ ಸಂಸಾರವನ್ನು ನಾಶಪಡಿಸಿತೋ, ಅದೇ ಗರ್ವವೇ ನಿನ್ನ ಸಾವಿಗೆ ಕಾರಣವಾಗುತ್ತದೆ ಎಂದು ಶಾಪ ನೀಡಿದಳು.

‘ರಾಮಾಯಣ’ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಈ ಎರಡೂ ಭಾಗಗಳ ಬಜೆಟ್ ಬರೋಬ್ಬರಿ 4000 ಕೋಟಿ ರೂಪಾಯಿಗಳಷ್ಟಿದೆ ಎಂದು ತಿಳಿದುಬಂದಿದೆ. ಈ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರದಲ್ಲಿದ್ದರೆ, ಸಾಯಿ ಪಲ್ಲವಿ ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

ರಾಮಾಯಣ ಚಿತ್ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ಈ ಸಿನಿಮಾ ತೆರೆ ಕಾಣುತ್ತಿದೆ. ಎರಡನೇ ಭಾಗ 2027 ರ ದೀಪಾವಳಿಗೆ ತೆರೆ ಕಾಣುತ್ತಿದೆ. ನಿತೇಶ್ ತಿವಾರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಮಿತ್ ಮಲ್ಹೋತ್ರಾ ಈ ಚಿತ್ರವನ್ನ ನಿರ್ಮಿಸಿದ್ದಾರೆ. ನಿರ್ಮಾಣದಲ್ಲಿ ಯಶ್ ಕೂಡ ಸಾಥ್ ಕೊಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports