Kangana Ranaut: ಸೋನಾಕ್ಷಿ ಸಿನ್ಹಾಗೆ ಪರೋಕ್ಷ ಟಾಂಗ್ ಕೊಟ್ಟರಾ ಕಂಗನಾ? ಇನ್‌ಸ್ಟಾಗ್ರಾಮ್ ಪೋಸ್ಟ್‌ ಬಗ್ಗೆ ಭಾರೀ ಚರ್ಚೆ | | ACTPnews

ಕಂಗನಾ


Last Updated:

ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ನಕಲಿ ಸ್ಕ್ರೀನ್‌ಶಾಟ್‌ಗೆ ಸ್ಪಷ್ಟನೆ ನೀಡಿದ ಕಂಗನಾ, ಅದೇ ವೇಳೆ ಹೆಸರನ್ನು ಉಲ್ಲೇಖಿಸದೇ ಮತ್ತೊಬ್ಬ ನಟಿಯ ಉಡುಗೆ, ವರ್ತನೆ ಮತ್ತು ಅಭಿಪ್ರಾಯಗಳ ಬಗ್ಗೆ ತೀಕ್ಷ್ಣವಾಗಿ ಟೀಕಿಸಿದ್ದಾರೆ.

ಕಂಗನಾ
ಕಂಗನಾ

ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ನಕಲಿ ಸ್ಕ್ರೀನ್‌ಶಾಟ್‌ಗೆ ಸ್ಪಷ್ಟನೆ ನೀಡಿದ ಕಂಗನಾ, ಅದೇ ವೇಳೆ ಹೆಸರನ್ನು ಉಲ್ಲೇಖಿಸದೇ ಮತ್ತೊಬ್ಬ ನಟಿಯ ಉಡುಗೆ, ವರ್ತನೆ ಮತ್ತು ಅಭಿಪ್ರಾಯಗಳ ಬಗ್ಗೆ ತೀಕ್ಷ್ಣವಾಗಿ ಟೀಕಿಸಿದ್ದಾರೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ, ಅದು ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಉದ್ದೇಶಿಸಿಯೇ ಮಾಡಲಾಗಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಇತ್ತೀಚೆಗೆ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ಪ್ರಕರಣಕ್ಕೆ ಸಂಬಂಧಿಸಿದ ಪೋಸ್ಟ್ ಒಂದಕ್ಕೆ ಕಂಗನಾ ರಣಾವತ್ ಲೈಕ್ ಮಾಡಿದ್ದಾರೆ ಎಂಬ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸ್ಕ್ರೀನ್‌ಶಾಟ್ ಸಂಪೂರ್ಣ ನಕಲಿ ಎಂದು ಕಂಗನಾ ಸ್ಪಷ್ಟಪಡಿಸಿದ್ದು, ಸುಳ್ಳು ಮಾಹಿತಿಯನ್ನು ಹರಡದಂತೆ ಮನವಿ ಮಾಡಿದ್ದಾರೆ.

ನಕಲಿ ಸ್ಕ್ರೀನ್‌ಶಾಟ್ ಕುರಿತು ಪ್ರತಿಕ್ರಿಯೆ ನೀಡಿದ ಬಳಿಕ ಕಂಗನಾ ಮತ್ತೊಬ್ಬ ನಟಿಯ ಉಡುಗೆ ಮತ್ತು ವರ್ತನೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರ ಹೆಸರನ್ನೂ ಹೇಳದೇ, ಇತ್ತೀಚೆಗೆ ನಟಿಯೊಬ್ಬರು ಹಾಫ್ ಪ್ಯಾಂಟ್ ಮತ್ತು ತಲೆಕೆಳಗಾಗಿ ಕ್ಯಾಪ್ ಧರಿಸಿ ಪ್ರತಿಭಟನಾಕಾರರ ನಡವಳಿಕೆಯನ್ನು ಬೆಂಬಲಿಸುತ್ತಿರುವುದನ್ನು ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದರ ಜೊತೆಗೆ, ಆತ್ಮೀಯ ನಟಿಯೇ, ನಿನ್ನ ಸಂಗಾತಿ ನಿನಗೆ ಜೇಬುಗಳ್ಳನ ರೀತಿಯ ವ್ಯಕ್ತಿತ್ವವನ್ನು ನೀಡುತ್ತಿರುವಂತೆ ಕಾಣುತ್ತಿದೆ. ಹಿಂದೆ ನೀನು ತುಂಬಾ ಅಚ್ಚುಕಟ್ಟಾಗಿ ಮಾತನಾಡುತ್ತಿದ್ದೆ ಮತ್ತು ಡ್ರೆಸ್ ಮಾಡಿಕೊಳ್ಳುತ್ತಿದ್ದೆ. ಈಗ ಏನಾಯಿತು? ನಿನ್ನ ಅಭಿಪ್ರಾಯಗಳು ನಿನ್ನವೇ ಆಗಿರಲಿ. ಆದರೆ ಸ್ಟೈಲಿಂಗ್‌ನಲ್ಲಿ ಸುಧಾರಣೆ ಬೇಕಿದೆ. ಸಹಾಯ ಬೇಕಿದ್ದರೆ ನಾನು ಯಾವಾಗಲೂ ಸಿದ್ಧ ಎಂದು ಬರೆದಿದ್ದಾರೆ.

ಕಂಗನಾ ಯಾರ ಹೆಸರನ್ನೂ ಪ್ರಸ್ತಾಪಿಸದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಬಳಕೆದಾರರು ಈ ಪೋಸ್ಟ್ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಉದ್ದೇಶಿಸಿರಬಹುದು ಎಂದು ಊಹಿಸುತ್ತಿದ್ದಾರೆ. ಈ ಊಹಾಪೋಹಗಳಿಗೆ ಕಾರಣ, ಇತ್ತೀಚೆಗೆ ವಿದ್ಯಾರ್ಥಿ ಪ್ರತಿಭಟನೆಗಳ ಕುರಿತು ಸೋನಾಕ್ಷಿ ಸಿನ್ಹಾ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದ ಸಂಗತಿ.

ಇದನ್ನೂ ಓದಿ: Jason Sanjay: ಯಶ್ KGF ಸಿನಿಮಾ ಬಗ್ಗೆ ಸಿಎಂ ವಿಜಯ್ ಮಗ ಜೇಸನ್ ಏನಂದ್ರು?

ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಟಿ-ಶರ್ಟ್, ಶಾರ್ಟ್ಸ್ ಮತ್ತು ಕ್ಯಾಪ್ ಧರಿಸಿ ಹಂಚಿಕೊಂಡಿದ್ದ ವಿಡಿಯೋದಲ್ಲೂ ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ಬೆಂಬಲ ಸೂಚಿಸಿದ್ದರು. ಸರ್ಕಾರದ ವಿರುದ್ಧ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲೇ ಕಂಗನಾ ಅವರ ಇತ್ತೀಚಿನ ಪೋಸ್ಟ್ ಸೋನಾಕ್ಷಿಯನ್ನೇ ಉದ್ದೇಶಿಸಿರಬಹುದು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ.

ಕಂಗನಾ ಪೋಸ್ಟ್ ವೈರಲ್ ಆದ ಬಳಿಕ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಪರ-ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕಂಗನಾ ಅವರ ನಿಲುವನ್ನು ಬೆಂಬಲಿಸಿದರೆ, ಮತ್ತಷ್ಟು ಮಂದಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed