Last Updated:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಫುಡ್ ಟೆಕ್ನಾಲಜಿ, ಬಯೋಟೆಕ್ನಾಲಜಿ, ಡೈರಿ ಟೆಕ್ನಾಲಜಿ, ಮೈಕ್ರೋಬಯಾಲಜಿ, ಕೆಮಿಸ್ಟ್ರಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಾಗುವ ನಿರೀಕ್ಷೆಯಿದೆ. ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದೆ.
ಬೆಂಗಳೂರು: ಸರ್ಕಾರಿ ನೌಕರಿಗಾಗಿ (Government Job) ಚಾತಕ ಪಕ್ಷಿಯಂತೆ ಕಾಯುತ್ತಿರುವ ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಇದೊಂದು ಅಕ್ಷರಶಃ ಬಂಪರ್ ಆಫರ್! ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ‘ಆಹಾರ ಸುರಕ್ಷತಾ ವಿಭಾಗ’ದಲ್ಲಿ ಬಹಳ ವರ್ಷಗಳಿಂದ ಧೂಳು ಹಿಡಿಯುತ್ತಿದ್ದ ಬರೋಬ್ಬರಿ 84 ವಿವಿಧ ವೃಂದದ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ (Direct Recruitment) ಮೂಲಕ ಭರ್ತಿ ಮಾಡಲು ರಾಜ್ಯ ಸರ್ಕಾರ ಅಧಿಕೃತ ಗ್ರೀನ್ ಸಿಗ್ನಲ್ ಕೊಟ್ಟಿದೆ! ಸದ್ಯದಲ್ಲೇ KEA ಅಧಿಕೃತ ವೆಬ್ಸೈಟ್ನಲ್ಲಿ ವಿಸ್ತೃತ ಅಧಿಸೂಚನೆ ಪ್ರಕಟವಾಗಲಿದ್ದು, ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರು ಈ ಬೃಹತ್ ಅವಕಾಶವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬಾರದು!
ಇದಕ್ಕೂ ಇದೇ ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಕಳೆದ ಜುಲೈ 8 ರಂದು ಕೇವಲ ಕಲ್ಯಾಣ ಕರ್ನಾಟಕ (HK) ವೃಂದದ 22 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದ್ದರು. ಆದರೆ, ಇದೀಗ ಆ ಹಳೆಯ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿ (Withdrawn), ಅದರ ಬದಲಾಗಿ ರಾಜ್ಯಾದ್ಯಂತ ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ ವೃಂದವನ್ನು (HK) ಒಳಗೊಂಡಂತೆ ಒಟ್ಟು 84 ಹುದ್ದೆಗಳ ಸಮಗ್ರ ನೇಮಕಾತಿಗೆ ಅಸ್ತು ಎಂದಿರುವುದು ನಿಜಕ್ಕೂ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ನೇಮಕಾತಿಗೆ ವಯೋಮಿತಿ ಎಷ್ಟಿರಬೇಕು?
ಈ ಬೃಹತ್ ನೇಮಕಾತಿಗೆ ವಯೋಮಿತಿ ಎಷ್ಟಿರಬೇಕು ಎಂಬ ಕುತೂಹಲವೇ? ನಿರೀಕ್ಷಿತ ಅಂದಾಜಿನ ಪ್ರಕಾರ, ಸಾಮಾನ್ಯ (General) ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 35-38 ವರ್ಷ, ಒಬಿಸಿ (2A, 2B, 3A, 3B) ವರ್ಗದವರಿಗೆ 18 ರಿಂದ 38-40 ವರ್ಷ ಹಾಗೂ ಎಸ್ಸಿ/ಎಸ್ಟಿ (SC/ST) ವರ್ಗದ ಅಭ್ಯರ್ಥಿಗಳಿಗೆ 18 ರಿಂದ 40-43 ವರ್ಷಗಳವರೆಗೆ ಅವಕಾಶವಿರಲಿದೆ. ಜೊತೆಗೆ ಕರ್ನಾಟಕ ಸರ್ಕಾರದ ನಿಯಮಾನುಸಾರ ವಿಕಲಚೇತನರು (PwBD) ಹಾಗೂ ಮಾಜಿ ಸೈನಿಕರಿಗೆ (Ex-SM) ವಯೋಮಿತಿ ಸಡಿಲಿಕೆ ಕೂಡ ಸಿಗಲಿದೆ! ಆಹಾರ ಸುರಕ್ಷತಾಧಿಕಾರಿ (FSO) ಹುದ್ದೆಗಳು ಅತ್ಯಂತ ಬೇಡಿಕೆ ಹಾಗೂ ಆಕರ್ಷಕ ವೇತನ ಶ್ರೇಣಿಯನ್ನು ಹೊಂದಿರುವುದರಿಂದ ಪೈಪೋಟಿ ತೀವ್ರವಾಗಿರಲಿದೆ, ಈ ಹುದ್ದೆಗೆ 60 ಸಾವಿರದಿಂದ 97 ಸಾವಿರದವರೆಗೆ ಆಕರ್ಷಕ ಸಂಬಳವಿದೆ.
Bangalore [Bangalore],Bangalore,Karnataka














