Vijay-Jason Sanjay: ಮಗನಿಗಾಗಿ ಇಡೀ ರಾತ್ರಿ ಹುಡುಕಿದ್ರಂತೆ ನಟ ವಿಜಯ್! ಜೇಸನ್ ಹೇಳಿದ್ರು ಆ ದಿನದ ಘಟನೆ | Jason sanjay reveals about the day he went out of the home | | ACTPnews

ವಿಜಯ್-ಜೇಸನ್ ಸಂಜಯ್


Last Updated:

Jason Sanjay: ಜೇಸನ್ ಸಂಜಯ್​ಗಾಗಿ ರಾತ್ರಿ ಇಡೀ ಹುಡುಕಾಡಿದ್ರಾ ತಮಿಳುನಾಡು ಸಿಎಂ ವಿಜಯ್? ಆ ದಿನ ನಡೆದಿದ್ದೇನು?

ವಿಜಯ್-ಜೇಸನ್ ಸಂಜಯ್
ವಿಜಯ್-ಜೇಸನ್ ಸಂಜಯ್

ವಿಜಯ್ (Vijay) ಅವರ ಮುದ್ದಿನ ಮಗ ಜೇಸನ್ ಸಂಜಯ್  (Jason Sanjay) ತಮ್ಮ ಮೊದಲ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದಾರೆ. ಸಂದೀಪ್ ಕಿಶನ್ ಅಭಿನಯಿಸಿದ ಸಿಗ್ಮಾ  (Sigma) ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ನಿರ್ದೇಶಿಸಿದ್ದು ವಿಜಯ್ ಅವರ ಮಗ. ಈ ನಿಟ್ಟಿನಲ್ಲಿ ಜೇಸನ್ ಸದ್ಯ ಪ್ರಚಾರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನದಲ್ಲಿ ಭಾಗವಹಿಸಿದ್ದರು.

ಬಿಟೈಂಡ್ ವುಡ್ಸ್ ಜೊತೆ ಮಾತನಾಡಿದ ವಿಜಯ್ ಮಗ ಜೇಸನ್ ಅವರು ಹಲವಾರು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದರು. ಏನದು ಗೊತ್ತಾ?

ಯಾರಿಗೂ ಹೇಳದೆ ಮಾಡಿದ ಕೆಲಸಗಳ ಬಗ್ಗೆ ಕೇಳಿದಾಗ ಉತ್ತರಿಸಿದ್ದಾರೆ ಜೇಸನ್ ಸಂಜಯ್. ಯಾರಿಗೂ ಹೇಳದೆ ಜೇಸನ್ ಏನು ಮಾಡುತ್ತಿದ್ದರು ಗೊತ್ತಾ? ನಾನು ಏನೇ ಮಾಡಿದರೂ ಅಮ್ಮನ ಬಳಿ ಸಿಕ್ಕಿ ಹಾಕಿಕೊಳ್ತೀನಿ. ಇಲ್ಲವಾದರೆ ಸುಮಾರು 6 ತಿಂಗಳಾದ ನಂತರ ಅವರ ಮೂಡ್ ಚೆನ್ನಾಗಿದ್ದಾಗ ನೋಡಿ ಹೇಳುತ್ತಿದ್ದೆ ಎಂದಿದ್ದಾರೆ.

ನೈಟ್ ಡ್ರೈವ್

ನೈಟ್ ಎಲ್ಲರೂ ಮಲಗಿದ ನಂತರ ರಾತ್ರಿ ಕಾರು ತೆಗೆದುಕೊಂಡು ಹೊರಗೆ ಹೋಗಿದ್ದೆ. ಮರುದಿನ ಸುಮಾರು 10 ಗಂಟೆಗೆ ಬಂದೆ. ಮೊಬೈಲ್ ಬ್ಯಾಟರಿ ಖಾಲಿ ಆಗಿ ಸ್ವಿಚ್ ಆಫ್ ಆಗಿತ್ತು. ಎಲ್ಲರೂ ಹೆದರಿದ್ದರು. ಎಲ್ಲರೂ ಹುಡುಕೋಕೆ ಶುರು ಮಾಡಿದ್ದರು. ನನ್ನ ಮೊಬೈಲ್​​ನಲ್ಲಿ ಯಾವಾಗಲೂ 5 ಪರ್ಸೆಂಟ್ ಚಾರ್ಜ್ ಇರುತ್ತದೆ. ಅದಕ್ಕಿಂತ ಹೆಚ್ಚಿರೋದೆ ಇಲ್ಲ. ಪೊಲೀಸ್ ಕಂಪ್ಲೇಟ್ ಒಂದು ಕೊಟ್ಟಿರಲಿಲ್ಲ ಎಂದು ಜೇಸನ್ ಸಂಜಯ್ ಹೇಳಿದ್ದಾರೆ.

ಮಟನ್ ಬಿರಿಯಾನಿ ಇಷ್ಟ

ನಾನು ಬೇರೆ ಬೇರೆ ಜಾನರ್ ಸಿನಿಮಾ ಮಾಡಬೇಕೆಂದು ಇಷ್ಟಪಡುತ್ತೇನೆ. ಆದರೆ ಒಂದು ಫ್ರೇಮ್ ನೋಡುವಾಗ ಇದು ಜೇಸನ್ ಸಿನಿಮಾ ಎನ್ನಬೇಕು ಎಂದಿದ್ದಾರೆ. ಮಟನ್ ಬಿರಿಯಾನಿ ತುಂಬಾ ಇಷ್ಟ, ಪ್ಯಾರೆಡೈಸ್ ಬಿರಿಯಾನಿ ಇಷ್ಟ.

ಜೇಸನ್​ಗೆ ಬಂತು ಮೆಸೇಜ್

ನನಗೆ ಇತ್ತೀಚೆಗೆ ಒಂದು ಡಿಎಂ ಬಂತು. ಪ್ರೊಫೈಲ್ ಫೋಟೋ ಇಲ್ಲ. ಹೆಸರೂ ಇಲ್ಲ. ನಿಮಗೆ ನನ್ನನ್ನು ಗೊತ್ತು, ತುಂಬಾ ಸಲ ನನ್ನನ್ನು ಭೇಟಿ ಮಾಡಿದ್ದೀರಿ. ನೇರವಾಗಿ ಹೇಳೋಕಾಗದ ವಿಷಯ ನಾನು ಇಲ್ಲಿ ಹೇಳುತ್ತೇನೆ ಎಂದು ಮೆಸೇಜ್ ಹಾಕಿದ್ದರು. ಇದು ಇಂಟ್ರೆಸ್ಟಿಂಗ್ ಡಿಎಂ ಎಂದಿದ್ದಾರೆ.

ಕೆಜಿಎಫ್ ಇಷ್ಟ

ತಿರುಚಿತ್ರಾಂಬಲಂ ನನಗೆ ತುಂಬಾ ಇಷ್ಟ. ಇತ್ತೀಚಿನ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನನಗೆ ತುಂಬಾ ಇಷ್ಟ ಎಂದಿದ್ದಾರೆ. ಕೆಜಿಎಫ್ ತುಂಬಾ ಇಷ್ಟ. ತುಂಬಾ ರಾ ಆಗಿ ತೋರಿಸಿದ್ದಾರೆ. ಆ ಸಿನಿಮಾದ ಟೋನ್ ಇಷ್ಟ. ಒಂದು ಐತಿಹಾಸಿಕ ಸೆಟ್ಟಿಂಗ್. ಅದು ನನಗೆ ಇಷ್ಟ ಎಂದಿದ್ದಾರೆ.

ನನಗೆ ಡ್ರಾಮಾ ಸಿನಿಮಾಗಳು ಇಷ್ಟ. ಕಾಮಿಡಿ, ಫ್ಯಾಮಿಲಿ, ತುಂಬಾ ಪಾತ್ರಗಳು ಇವೆಲ್ಲವೂ ಇಷ್ಟ ಎಂದಿದ್ದಾರೆ. ಮೂರು ಪೇರ್, ಮೂರು ಕಾದಲ್ ಸಿನಿಮಾ ಹಾಡುಗಳಿಗೆ ತುಂಬಾ ಇಷ್ಟ ಎಂದಿದ್ದಾರೆ.

CM Vijay son jason sanjay spekas about his debut directorial

ವಿಜಯ್-ಜೇಸನ್

ರಿಮೇಕ್ ಅಥವಾ ಒರಿಜಿನಲ್ ಸಿನಿಮಾನ ಅಂತ ಕೇಳಿದರೆ ಒರಿಜಿನಲ್ ಎಂದಿದ್ದಾರೆ ಜೇಸನ್. ಇನ್ನು ರೊಮ್ಯಾನ್ಸ್​ಗಿಂತ ಆ್ಯಕ್ಷನ್ ಇಷ್ಟ ಎಂದಿದ್ದಾರೆ. ಮಾಸ್ ಬೇಸ್ ಫಿಲ್ಮ್​​ಗಿಂತ ಮಲ್ಟಿ ಸ್ಟಾರ್ ಬೇಸ್ ಫಿಲ್ಮ್ ಇಷ್ಟ ಎಂದಿದ್ದಾರೆ. ನಾನು ಎಲ್ಲಾ ಪಾತ್ರಗಳನ್ನು ಸಮಾನವಾಗಿ ನೋಡುತ್ತೇನೆ ಎಂದಿದ್ದಾರೆ.

ಒಟಿಟಿಗಿಂತ ಥಿಯೇಟರ್ ಇಷ್ಟ, ಇಂಟ್ರೋಗಿಂತ ಇಂಟರ್​ವಲ್ ಇಷ್ಟ ಎಂದಿದ್ದಾರೆ. ಮಣಿ ಸರ್ ಜೊತೆ ಕೆಲಸ ಮಾಡುವುದು ಅವರ ಕನಸು ಎಂದಿದ್ದಾರೆ.

ಒಬ್ಬ ನಟನಿಗೆ ಎಂಫತಿ ಇರಲೇಬೇಕು. ಕೆಲವು ಪಾತ್ರಗಳಿಗೆ ನೀವು ಪರ್ಸನಲ್ ಆಗಿ ರಿಲೇಟ್ ಮಾಡಬಹುದು, ಎಲ್ಲಾ ಪಾತ್ರಗಳಿಗೆ ಆಗಲ್ಲ. ಹೀಗಿರುವಾಗ ಎಂಫತಿ ಎನ್ನುವುದು ತುಂಬಾ ಬೇಕು ಎಂದಿದ್ದಾರೆ. ಸ್ಕ್ರಿಪ್ಟ್ ಬೇಸ್ಡ್ ಸಿನಿಮಾ ನಂಬುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Jason Sanjay: ಯಶ್ KGF ಸಿನಿಮಾ ಬಗ್ಗೆ ಸಿಎಂ ವಿಜಯ್ ಮಗ ಜೇಸನ್ ಏನಂದ್ರು?

ಸಂದೀಪ್ ಕಿಶನ್ ಅವರ ಹಲವಾರು ಸಿನಿಮಾ ನೋಡಿದ್ದೇನೆ. ಅವರು 15 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ. ಅವರು ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಾರೆ. ಕಥೆಯ ಬಗ್ಗೆ ಮಾತನಾಡಿದೆ. ಕಥೆ ಹೇಳಿದಾಗ ಅವರು ಊಟ ಆರ್ಡರ್ ಮಾಡಿದರು. ನಾನು ಊಟ ಮಾಡಿದೆ. ಆ ನಂತರ ಅವರು ಕೆಲಸದ ರೀತಿ ಹೇಳಿದರು. ನಂತರ ಓಕೆ ಆಯಿತು ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed