Last Updated:
ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅನ್ನೋದು ಯಾಕೆ ಬಂತು.? ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ದೋಸ್ತಿ ಸೀಕ್ರೇಟ್ ಏನು? ರಮೇಶ್ ಅವರ ಮುಂದಿನ ಪ್ಲಾನ್ ಏನು? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಮೇಶ್ ಅರವಿಂದ್ (Ramesh Aravind) ಅವರು ಮಲ್ಟಿಟ್ಯಾಲೆಂಟೆಡ್ ಅನ್ನುವುದು ಗೊತ್ತೇ ಇದೆ. ನಿರ್ದೇಶನ ಮಾಡ್ತಾರೆ. ನಟನೆ ಕೂಡ ಮಾಡ್ತಾರೆ. ನಿರೂಪಣೆಯನ್ನು ಮಾಡ್ತಾರೆ. ಇವರ ಮಾತುಗಳನ್ನ ಕೇಳಿದರೆ ಮೋಟಿವೇಟ್ (Motivate) ಕೂಡ ಆಗುತ್ತೇವೆ. ರಮೇಶ್ ಅರವಿಂದ್ ತುಂಬಾನೆ ಪಾಸಿಟಿವ್ ವ್ಯಕ್ತಿ ಆಗಿದ್ದಾರೆ. ಇವರು ಹಾಸ್ಯಭರತಿ ಚಿತ್ರಗಳನ್ನ ಶುರು ಮಾಡಿದ್ದು ಯಾವಾಗ? ಇವರಿಗೆ ಅರವಿಂದ್ (Aravind) ಅಂತ ಹೆಸರು ಬಂದಿದ್ದು ಯಾಕೆ? ರಮೇಶ್ ಅರವಿಂದ್ ಅವರು ತಮಿಳು ಮತ್ತು ತೆಲುಗುದಲ್ಲಿ (Telugu Tamil) ಅದೆಷ್ಟು ಸಿನಿಮಾ ಮಾಡಿದ್ದಾರೆ. ಈ ಎಲ್ಲ ಕುತೂಹಲಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ. ಇದನ್ನ ಸ್ವತಃ ರಮೇಶ್ ಅರವಿಂದ್ ಅವರು ಹಂಚಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ರಮೇಶ್ ಅರವಿಂದ್…
ಹೀರೋ ಆಗಿ ಹೆಚ್ಚು ಕಡಿಮೆ 45 ಚಿತ್ರಗಳನ್ನು ಇಲ್ಲಿ ಮಾಡಿದ್ದಾರೆ. ತೆಲುಗು ಭಾಷೆಯಲ್ಲಿ 12 ಸಿನಿಮಾ ಮಾಡಿದ್ದಾರೆ. ಆದರೆ, ಅಮೃತವರ್ಷಿಣಿ ಆದ್ಮೇಲೆ ಚಿತ್ರಗಳು ಹಿಟ್ ಆದವು. ಇವರ ಬೇಡಿಕೆನೂ ಹೆಚ್ಚಾಗ್ತಾ ಬಂತು. ಅದಕ್ಕೇನೆ ರಮೇಶ್ ರವಿಂದ್ ಅವರು ಚೆನ್ನೈಯಿಂದ ವಾಪಸ್ ಬೆಂಗಳೂರಿಗೆ ಬಂದ್ರು.
ರಮೇಶ್ ಅರವಿಂದ್ ಅವರು ಮೂಲ ಹೆಸರು ಜಿ.ರಮೇಶ್ ಅಂತಲೇ ಇದೆ. ಅಂದ್ರೆ, ಇವರ ತಂದೆ ಹೆಸರು ಗೋವಿಂದಾಚಾರ್ಯ ಅಂತಲೇ ಇದೆ.
ಆದರೆ, ರಮೇಶ್ ಅವರಿಗೆ ಅರವಿಂದ್ ಅನ್ನೋದು ಎಲ್ಲಿ ಬಂತು ಗೊತ್ತಾ? ಹೌದು, ರಮೇಶ್ ಅನ್ನುವವರು ಅದ್ಯಾಗಲೇ ತಮಿಳಿನಲ್ಲಿ ಒಬ್ಬ ನಟರಿದ್ದರು.
ಹಾಗಾಗಿಯೇ ರಮೇಶ್ ಅವರಿಗೆ ಅರವಿಂದ್ ಅನ್ನೋದನ್ನು ಸೇರಿಸಿದರು. ಹಾಗಾಗಿಯೇ ಜಿ.ರಮೇಶ್ ಅವರು ಮುಂದೆ ರಮೇಶ್ ಅರವಿಂದ್ ಆದರು. ಅದೇ ಹೆಸರು ಶಾಶ್ವತವಾಗಿಯೇ ಉಳಿದಿದೆ.
ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ಅವರು ಸ್ನೇಹಿತರೇ ಆಗಿದ್ದರು. ಇವರ ಸ್ನೇಹ 10 ರಿಂದ 15 ವರ್ಷ ದಿಂದಲೂ ಇದ್ದೇ ಇತ್ತು. ಆದರೆ, ಅನೇಕರಿಗೆ ಈ ವಿಷಯ ಗೊತ್ತಿರಲಿಲ್ಲ ನೋಡಿ.
ಆದರೆ, ಕಮಲ್ ಹಾಸನ್ ಅವರು ರಮೇಶ್ ಅರವಿಂದ್ ಅಲ್ಲಿರೋ ಆ ಡೈರೆಕ್ಟರ್ ಅನ್ನ ಕಂಡಿದ್ದರು. ಅದಕ್ಕೇನೆ ರಾಮ ಶಾಮ ಭಾಮ ಚಿತ್ರ ಮಾಡುವಂತೆ ಪ್ರೋತ್ಸಾಹಿಸಿದರು.
10 ವರ್ಷದ ಬಳಿಕ …
ಹಾಗೆ ಕೆ.ಬಾಲಚಂದರ್ ಹಾಗೂ ಕಮಲ್ ಹಾಸನ್ ಅವರು ತುಂಬಾನೆ ವಿರಳ ವ್ಯಕ್ತಿತ್ವದ ವ್ಯಕ್ತಿಗಳೇ ಆಗಿದ್ದಾರೆ. ಇವರು ಪ್ರತಿಭಾವಂತರಿಗೆ ಅವಕಾಶ ಮಾಡಿಕೊಡ್ತಾರೆ ಅನ್ನೋದನ್ನ ರಮೇಶ್ ಅರವಿಂದ್ ಹೇಳಿಕೊಂಡಿದ್ದಾರೆ.
ರಾಮ ಶಾಮ ಭಾಮ ಚಿತ್ರ ಚೆನ್ನಾಗಿ ಹೋಯಿತು. ಜನ ಈ ಚಿತ್ರವನ್ನ ಸ್ವೀಕಿರಿಸಿದರು. ಈ ಚಿತ್ರ ಆದ 10 ವರ್ಷದ ಬಳಿಕ ಉತ್ತಮ್ ವಿಲನ್ ಸಿನಿಮಾ ಮಾಡಿದೇವು.
ರಮೇಶ್ ಅರವಿಂದ್ ಅವರಿಗೆ ಸ್ಟ್ಯಾಂಡಪ್ ಕಾಮಿಡಿ ತುಂಬಾನೆ ಇಷ್ಟ ಆಗುತ್ತವೆ. ಅದನ್ನ ನೋಡ್ತಾನೇ ಇರ್ತಾರೆ. ಈ ರೀತಿಯ ಒಂದು ಶೋ ಕೂಡ ಮಾಡ್ಬೇಕು ಅಂತಲೂ ಇವರಿಗೆ ಪ್ಲಾನ್ ಇದೆ.
ಆದರೆ, ಅದು ಯಾವಾಗ ಅನ್ನೋದನ್ನ ಹೇಳಿಕೊಂಡಿಲ್ಲ. ಹಾಗೆ ತಮ್ಮ ಚಿತ್ರ ಜೀವನದ ಈ ಎಲ್ಲ ವಿಶೇಷಗಳನ್ನ ರಮೇಶ್ ಅರವಿಂದ್ ಅವರು Allrounders ಯುಟ್ಯೂಬ್ ಚಾನೆಲ್ನ ಪಾಡ್ಕಾಸ್ಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













