Yash: ರಾಕಿ ಭಾಯ್ ಅತಿ ದೊಡ್ಡ ಕನಸು, ‘ಲಕ್ಕಿ’ ಚಿತ್ರದಲ್ಲೂ ಇತ್ತು ಹಾಲಿವುಡ್ ಮಾತು! | | ACTPnews

ರಾಕಿ ಭಾಯ್ ಅತಿ ದೊಡ್ಡ ಕನಸು; 'ಲಕ್ಕಿ' ಚಿತ್ರದಲ್ಲೂ ಇತ್ತು ಹಾಲಿವುಡ್ ಮಾತು!


Last Updated:

ರಾಕಿಂಗ್ ಸ್ಟಾರ್ ಯಶ್ ಅತಿ ದೊಡ್ಡ ಕನಸು ಕಂಡಿದ್ದರು. ಆ ಕನಸು ಟಾಕ್ಸಿಕ್ ಮತ್ತು ರಾಮಾಯಣದ ಮೂಲಕವೇ ನನಸಾಗುತ್ತಿದೆ. ಆದರೆ, ಈ ಕನಸಿನ ಕತೆ ಇಂದು ನಿನ್ನೆಯದಲ್ಲ ಬಿಡಿ. ಲಕ್ಕಿ ಚಿತ್ರದಲ್ಲೂ ಅದರ ಝಲಕ್ ಬಂದು ಹೋಗಿತ್ತು. ಅದು ಹೇಗೆ ಅನ್ನೋದು ಇಲ್ಲಿದೆ ಓದಿ.

ರಾಕಿ ಭಾಯ್ ಅತಿ ದೊಡ್ಡ ಕನಸು; 'ಲಕ್ಕಿ' ಚಿತ್ರದಲ್ಲೂ ಇತ್ತು ಹಾಲಿವುಡ್ ಮಾತು!
ರಾಕಿ ಭಾಯ್ ಅತಿ ದೊಡ್ಡ ಕನಸು; ‘ಲಕ್ಕಿ’ ಚಿತ್ರದಲ್ಲೂ ಇತ್ತು ಹಾಲಿವುಡ್ ಮಾತು!

ರಾಕಿಂಗ್ ಸ್ಟಾರ್ ಯಶ್ (Yash) ಈ ಹಿಂದೇನೆ ದೊಡ್ಡ ಕನಸು ಕಂಡಿದ್ದರು. ಸೀರಿಯಲ್ ಟೈಮ್ (Serial Time) ಅಲ್ಲಿಯೇ ಹಾಲಿವುಡ್‌ (Hollywood) ರೇಂಜ್‌ನ ಯೋಚನೆ ಮಾಡಿದ್ದರು ಅನ್ನುವ ಮಾತು ಇದೆ. ಹಾಗೆ ಲಕ್ಕಿ ಸಿನಿಮಾದಲ್ಲಿ ಒಂದು ಸೀನ್ ಇದೆ. ಈ ಸೀನ್ ಅಲ್ಲಿ ಹಾಲಿವುಡ್ ಮಾತನ್ನೆ ಯಶ್ (Yash) ಆಡುತ್ತಾರೆ. ಇದಕ್ಕೆ ಹಾಸ್ಯದ ಟಚ್ ಇದೆ. ಆದರೆ, ಹಾಲಿವುಡ್ ಕನಸು ಇಲ್ಲಿ ಪಕ್ಕಾ ಕಾಣಿಸುತ್ತದೆ. ಚಿತ್ರದ ಈ ಸೀನ್‌ನ ವಿವರ ಹಾಗೂ ಸದ್ಯದ ಟಾಕ್ಸಿಕ್ ಚಿತ್ರದ ವಿಚಾರದ ಒಂದು ಸ್ಟೋರಿ ಇಲ್ಲಿದೆ ಓದಿ.

ಲಕ್ಕಿ ಸಿನಿಮಾ ಸೀನ್

ಲಕ್ಕಿ ಚಿತ್ರ 2012 ರಲ್ಲಿ ಬಂದಿತ್ತು. ಡಾಕ್ಟರ್ ಸೂರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ರಮ್ಯಾ ಇಲ್ಲಿ ಯಶ್‌ಗೆ ಜೋಡಿ ಆಗಿದ್ದರು. ಈ ಚಿತ್ರದಲ್ಲಿ ಯಶ್‌ ಲುಕ್‌ ವಿಶೇಷವಾಗಿಯೇ ಇತ್ತು. ಅಷ್ಟೆ ವಿಚಿತ್ರ ಕೂಡ ಅನಿಸುತ್ತಿತ್ತು.
yash hollywood dream in lucky movie time

ಹಾಲಿವುಡ್ ಕನಸು ನನಸು

ಹಾಸ್ಯ ನಾಯಕ ನಟ ಶರಣ್ ಇಲ್ಲಿ ಯಶ್‌ ಗೆಳೆಯನ ರೋಲ್ ಮಾಡಿದ್ದರು. ಹಾಗೆ ಯಶ್ ಕೆಲಸ ಇಲ್ಲದೆ ಅದ್ಯಾವುದೋ ಒಂದು ಜಾಹೀರಾತಿನ ಚಿತ್ರೀಕರಣಕ್ಕೆ ಹೋಗಿರುತ್ತಾರೆ. ಆಗಲೇ ಅಲ್ಲಿಗೆ ಬಂದ ಹುಡುಗಿಯರ ಮುಂದೆ ಹಾಲಿವುಡ್ ಕತೆ ಹೇಳ್ತಾನೆ ಇರ್ತಾರೆ ನೋಡಿ.

ಹಾಲಿವುಡ್‌ನಿಂದ ಬಂದೆ

ಲಕ್ಕಿ ಪಾತ್ರಧಾರಿ ಯಶ್ ಈ ಒಂದು ದೃಶ್ಯದಲ್ಲಿ ತಾನು ಹಾಲಿವುಡ್‌ನಿಂದ ಬಂದೆ ಅಂತಲೇ ಬಿಲ್ಡಪ್ ಕೊಡ್ತಾನೇ ಇರ್ತಾರೆ. ಅಲ್ಲಿರೋ ಬಿಳಿ ಜಿರ್ಲೆಗಳ ಜೊತೆಗೆ ಕೆಲಸ ಮಾಡಿ ಬೇಜಾರು ಆಗಿದೆ.

ಹಿಂದೆ ನಿಂತಿದ್ದಾರೆ ಅಂತ ಹೇಳಿದರೂ ಕೇಳೋದಿಲ್ಲ. ಆ ಡೈರೆಕ್ಟರ್ ಡಬ್ಬ ಅಂತಲೇ ಹೇಳ್ತಾರೆ. ಹೀಗೆ ಹೇಳುವ ಸಮಯದಲ್ಲಿಯೇ ಡೈರೆಕ್ಟರ್ ಬಂದು ‘ಲಕ್ಕಿ’ಯನ್ನ ಓಡಿಸೋ ಸೀನ್ ಕೂಡ ಇದಾಗಿದೆ. ಆದರೆ, ಒಂದು ಕಾಮಿಡಿ ಸೀನ್ ಅಲ್ಲೂ ಯಶ್ ಹಾಲಿವುಡ್‌ ಕನಸು ಹೊಳೆಯುತ್ತದೆ ಅಂತಲೂ ಹೇಳಬಹುದು.

ಹಾಲಿವುಡ್ ಕನಸು ನನಸು

ಯಶ್ ಆ ದಿನವೇ ಕಂಡ ಈ ಹಾಲಿವುಡ್ ಕನಸು ಈಗ ನನಸಾಗುತ್ತಿದೆ. ಟಾಕ್ಸಿಕ್ ಚಿತ್ರದ ಮೂಲಕವೇ ಅದನ್ನ ಈಡೇರಿಸಿಕೊಳ್ಳುತ್ತಿದ್ದಾರೆ. ಬಹು ಕೋಟಿ ವೆಚ್ಚದ ಈ ಚಿತ್ರಕ್ಕೆ ಇವರು ನಿರ್ಮಾಪಕರೂ ಆಗಿದ್ದಾರೆ.

yash hollywood dream in lucky movie time

ಹಾಲಿವುಡ್‌ನಿಂದ ಬಂದೆ

ಈ ಚಿತ್ರಕ್ಕೆ ನಾಯಕರೂ ಇವರೇ ಆಗಿದ್ದಾರೆ. ಡೈರೆಕ್ಟರ್ ಗೀತು ಮೋಹನ್‌ದಾಸ್ ಅವರ ಜೊತೆಗೂಡಿ ಕತೆ ಕೂಡ ಬರೆದಿದ್ದಾರೆ. ಈ ಮೂಲಕ ವಿಶ್ವಮಟ್ಟದಲ್ಲಿ ಕನ್ನಡದ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.

ಆಗಸ್ಟ್-26 ರಂದು ರಿಲೀಸ್

ಟಾಕ್ಸಿಕ್ ಚಿತ್ರ ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ವಿಶ್ವಮಟ್ಟದಲ್ಲಿಯೇ ಇದು ತೆರೆ ಕಾಣುತ್ತಿದೆ. ಕನ್ನಡಿಗರು ಮತ್ತು ಕನ್ನಡ ಇಂಡಸ್ಟ್ರಿ ಈ ವಿಚಾರದಲ್ಲಿ ಹೆಮ್ಮೆ ಕೂಡ ಬರುತ್ತಿದೆ.

ಗೀತು ಮೋಹನ್‌ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ರವಿ ಬಸ್ರೂರು ಮ್ಯೂಸಿಕ್ ಮಾಡಿದ್ದಾರೆ. ವಿಶಾಲ್ ಮಿಶ್ರಾ ಸೇರಿದಂತೆ ಹೊಸಬರು ಈ ಚಿತ್ರಕ್ಕೆ ಹಾಡುಗಳನ್ನ ಮಾಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports