ಕಲಬುರಗಿಯಲ್ಲಿ ಸೆಪ್ಟೆಂಬರ್‌ 8ರಿಂದ ಮೂರು ದಿನ ರಾಜ್ಯ ಮಟ್ಟದ ಸ್ಕೇಟಿಂಗ್‌ ಸ್ಪರ್ಧೆ-kalaburagi news state level 3rd rank skating competition will be held from sept 8th to 10th sports news in kannada arc ,ಕ್ರೀಡೆ ಸುದ್ದಿ

5 ವರ್ಷದಿಂದ 7, 7 ವರ್ಷದಿಂದ 9, 9 ವರ್ಷದಿಂದ 11, 11 ವರ್ಷದಿಂದ 14 ವರ್ಷ, 14 ವರ್ಷದಿಂದ 17 ವರ್ಷದವರೆಗೆ ಮತ್ತು 17 ವರ್ಷದಿಂದ ಹೆಚ್ಚಿನ ವಯಸ್ಸಿಯನವರಿಗೆ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲ ಸ್ಪರ್ಧೆಗಳಿಗೆ ಪ್ರಥಮ ಸ್ಥಾನ ಪಡೆದವರಿಗೆ 8 ಪಾಯಿಂಟ್ ನೀಡಿ ನಗದು ಬಹುಮಾನವಾಗಿ 10 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 7 ಪಾಯಿಂಟ್ ನೀಡಿ ನಗದು 7,500 ರೂ., ಮೂರನೇ ಸ್ಥಾನ ಪಡೆದವರಿಗೆ 6 ಪಾಯಿಂಟ್ ನೀಡಿ ಅವರಿಗೆ 5 ಸಾವಿರ ರೂ.ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಒಟ್ಟು 300ಕ್ಕೂ ಅಧಿಕ ಸ್ಕೇಟಿಂಗ್ ಸ್ಪರ್ಧೆಗಳಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಲಬುರಗಿಯಲ್ಲಿ 3ನೇ ರ್ಯಾಕಿಂಗ್‌ ಸ್ಕೇಟಿಂಗ್ ಸ್ಪರ್ಧೆ ಯಶಸ್ವಿಗೊಳಿಸಿದ ಬಳಿಕ ನಾಲ್ಕನೇ ರ್ಯಾಕಿಂಗ್‌ ಸ್ಕೇಟಿಂಗ್ ಸ್ಪರ್ಧೆ ಮೈಸೂರಿನಲ್ಲಿ ಆಯೋಜನೆ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ವಿಕ್ರಂ ದರ್ಶನಾಪುರ, ಜಯಕುಮಾರ ಮತ್ತು ಸ್ಮತಿ ಇದ್ದರು.

Source link