World Population Day 2023: ವಿಶ್ವ ಜನಸಂಖ್ಯಾ ದಿನದ ದಿನಾಂಕ, ಇತಿಹಾಸ, ಮಹತ್ವ | World Population Day 2023: Date, history, significance and other details

Features

oi-Mamatha M

|

Google Oneindia Kannada News

ನವದೆಹಲಿ , ಜುಲೈ. 10: ಜಾಗತಿಕ ಜನಸಂಖ್ಯೆಯು ನಿಮಿಷ ನಿಮಿಷಕ್ಕೆ ಏರಿಕೆಯಾಗುತ್ತಿದೆ. ಜನಸಂಖ್ಯೆಯ ಹೆಚ್ಚಳದೊಂದಿಗೆ, ಅದಕ್ಕೆ ಸಂಬಂಧಿಸಿದ ಪ್ರಚಲಿತ ಸಮಸ್ಯೆಗಳು ಸಹ ಹೆಚ್ಚಾಗುತ್ತಿದೆ. ಬಡತನದಿಂದ ಆರ್ಥಿಕತೆಯವರೆಗೆ ತಾಯಿಯ ಆರೋಗ್ಯದವರೆಗೆ, ಜಾಗತಿಕ ಜನಸಂಖ್ಯೆಯು ಹೆಚ್ಚಿನ ಕೆಲಸ, ಪ್ರಯತ್ನಗಳು ಮತ್ತು ಬದಲಾವಣೆಗಳ ಅಗತ್ಯವಿರುವ ಬಹಳಷ್ಟು ಕ್ಷೇತ್ರಗಳನ್ನು ಮುಂದಿಡುತ್ತದೆ.

ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಜನಸಂಖ್ಯೆ ಬೆಳೆದಂತೆ ಬಡತನ, ಆರ್ಥಿಕ ಕಾಳಜಿ , ಉದ್ಯೋಗದಂತಹ ಸಮಸದಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ವಿಶ್ವ ಜನಸಂಖ್ಯಾ ದಿನವು ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಮತ್ತು ವಿಶ್ವದಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಲು ಕಾರ್ಯನಿರ್ವಹಿಸುತ್ತದೆ.

World Population Day 2023: Date, history, significance and other details

ಜಾಗತಿಕ ಜನಸಂಖ್ಯೆ ಮತ್ತು ಅದರ ಏರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಜನರಿಗೆ ತಿಳಿಸಲು ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲು ನಾವು ಸಜ್ಜಾಗುತ್ತಿರುವಾಗ, ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳು ಮತ್ತು ಮಾಹಿತಿಗಳು ಇಲ್ಲಿವೆ:

ಟೊಮ್ಯಾಟೊ ಬೆಲೆ ಹೆಚ್ಚು ಎಂದು ಕೊಳ್ಳಲು ಆಗುವುದಿಲ್ಲವೇ? ಇಲ್ಲಿವೆ ಪರ್ಯಾಯ ಪದಾರ್ಥಗಳ ಪಟ್ಟಿಟೊಮ್ಯಾಟೊ ಬೆಲೆ ಹೆಚ್ಚು ಎಂದು ಕೊಳ್ಳಲು ಆಗುವುದಿಲ್ಲವೇ? ಇಲ್ಲಿವೆ ಪರ್ಯಾಯ ಪದಾರ್ಥಗಳ ಪಟ್ಟಿ

ವಿಶ್ವ ಜನಸಂಖ್ಯಾ ದಿನ

ಪ್ರತಿ ವರ್ಷ, ವಿಶ್ವ ಜನಸಂಖ್ಯಾ ದಿನವನ್ನು ಜುಲೈ 11 ರಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪ್ರಕಾರ, ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಥೀಮ್ – “ಲಿಂಗ ಸಮಾನತೆಯ ಶಕ್ತಿಯನ್ನು ಅನಾವರಣಗೊಳಿಸುವುದು” ನಮ್ಮ ಪ್ರಪಂಚದ ಅನಂತ ಸಾಧ್ಯತೆಗಳನ್ನು ಮನಬಿಚ್ಚಿ ಮಾತಾಡುವಂತೆ ಮಾಡಲು ಮಹಿಳೆಯರು ಮತ್ತು ಹುಡುಗಿಯರ ಧ್ವನಿಯನ್ನು ಎತ್ತಿ ಹಿಡಿಯುವುದು.

ವಿಶ್ವ ಜನಸಂಖ್ಯಾ ದಿನದ ಇತಿಹಾಸ:

ಈ ವಿಶೇಷ ದಿನವನ್ನು ವಿಶ್ವಸಂಸ್ಥೆಯು 1989 ರಲ್ಲಿ ಸ್ಥಾಪಿಸಿತು. ಜುಲೈ 11, 1987 ರಂದು, ವಿಶ್ವ ಜನಸಂಖ್ಯೆಯು ಐದು ಶತಕೋಟಿಯನ್ನು ತಲುಪಿತು. ಹೀಗಾಗಿ ಜನಸಂಖ್ಯಾ ಹೆಚ್ಚಳದ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ, ತನ್ನ ಅಂಗ ಅಂಸ್ಥೆಯಾದ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮಂಡಳಿ ಮೂಲಕ 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.

World Population Day 2023: Date, history, significance and other details

ವಿಶ್ವ ಜನಸಂಖ್ಯಾ ದಿನದ ಮಹತ್ವ:

ವಿಶ್ವ ಜನಸಂಖ್ಯಾ ದಿನವು ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದ ಪ್ರಚಲಿತ ಸಮಸ್ಯೆಗಳನ್ನು ಎಲ್ಲರ ಮುಂದಿಡುತ್ತದೆ. ಪ್ರಪಂಚದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಂದ ಆರ್ಥಿಕ ಬಿಕ್ಕಟ್ಟು… ಬಡತನದವರೆಗೆ. ವಿಶ್ವ ಜನಸಂಖ್ಯಾ ದಿನವು ಜನರ ಜೀವನವನ್ನು ಬದಲಾಯಿಸಲು ಮತ್ತು ಅದನ್ನು ಉತ್ತಮಗೊಳಿಸಲು ಜಾಗೃತ ಪ್ರಯತ್ನಗಳನ್ನು ಮಾಡಲು ನೆನಪಿಸುತ್ತದೆ.

ವಿಶ್ವಸಂಸ್ಥೆಯು ಪ್ರತಿಯೊಬ್ಬ ವ್ಯಕ್ತಿಯು ಭರವಸೆ, ಸಾಮರ್ಥ್ಯ ಮತ್ತು ಅವಕಾಶಗಳ ಸಂಪೂರ್ಣ ಭವಿಷ್ಯವನ್ನು ಹೊಂದಿರುವ ಜಗತ್ತನ್ನು ರಚಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಅಜೆಂಡಾ ಸಸ್ಟೈನಬಲ್ ಗೋಲ್ಸ್ 2030 ರ ( Agenda Sustainable Goals 2030) ಮೂಲಕ ಪ್ರತಿಯೊಬ್ಬರಿಗೂ ಸುಸ್ಥಿರ ಭವಿಷ್ಯವನ್ನು ರಚಿಸುವ ಗುರಿಯನ್ನು ಹೊಂದಿದೆ.

English summary

World Population Day 2023: Here is the Theme, significance, date, history and other details about World Population Day 2023. know more.

Story first published: Monday, July 10, 2023, 21:51 [IST]

Source link