World Cup Shedule 2023: ಬೆಂಗಳೂರಿನಲ್ಲಿ ಐದು ವಿಶ್ವಕಪ್ ಪಂದ್ಯಗಳು, ಭಾರತದ ಪಂದ್ಯ ಯಾವಾಗ? ಎದುರಾಳಿ ಯಾರು? | ODI World Cup Matches In Bengaluru: India Match In Chinnaswamy Stadium, Date

Sports

oi-Naveen Kumar N

|

Google Oneindia Kannada News

ಬಹು ನಿರೀಕ್ಷಿತ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್ 5 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ ಅಪ್ ತಂಡ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೂಡ 5 ಏಕದಿನ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳು ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿವೆ. ಭಾರತ ಇಲ್ಲಿ ವಿಶ್ವಕಪ್‌ ಗ್ರೂಪ್‌ ಹಂತದ ತನ್ನ ಕೊನೆಯ ಪಂದ್ಯವನ್ನು ಆಡಲಿದೆ.

ODI World Cup Matches In Bengaluru

ಪಾಕಿಸ್ತಾನ ತಂಡ ಚಿನ್ನಸ್ವಾಮಿ ಅಂಗಳದಲ್ಲಿ ಎರಡು ಪಂದ್ಯಗಳನ್ನು ಆಡುತ್ತಿರುವುದು ವಿಶೇಷ. ಇನ್ನು ನ್ಯೂಜಿಲೆಂಡ್ ಕೂಡ ಚಿನ್ನಸ್ವಾಮಿ ಅಂಗಳದಲ್ಲಿ ಎರಡು ಪಂದ್ಯಗಳನ್ನು ಆಡುತ್ತಿದೆ. ಬಲಿಷ್ಠ ತಂಡಗಳೇ ಚಿನ್ನಸ್ವಾಮಿಯಲ್ಲಿ ಮುಖಾಮುಖಿಯಾಗುತ್ತಿರುವುದರಿಂದ ಕ್ರೀಡಾಭಿಮಾನಿಗಳು ಪಂದ್ಯಗಳನ್ನು ನೋಡಲು ಉತ್ಸಾಹ ತೋರಿಸಬಹುದಾಗಿದೆ.

ನವೆಂಬರ್ 11ರಂದು ಭಾರತದ ಪಂದ್ಯ

ಇನ್ನು ನವೆಂಬರ್ 11 ರಂದು ಶನಿವಾರ ಭಾರತದ ಪಂದ್ಯ ನಡೆಯಲಿದೆ. ಎದುರಾಳಿ ತಂಡ ಯಾವುದು ಎಂದು ಶೀಘ್ರದಲ್ಲೇ ತಿಳಿಯಲಿದೆ. ಸದ್ಯ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯುತ್ತಿದ್ದು ಅಲ್ಲಿ ಅಗ್ರ ಸ್ಥಾನಿಯಾಗಿ ವಿಶ್ವಕಪ್‌ ಪ್ರವೇಶಿಸುವ ತಂಡದೊಂದಿಗೆ ಭಾರತ ಸೆಣೆಸಲಿದೆ. ಇದು ಭಾರತಕ್ಕೆ ವಿಶ್ವಕಪ್‌ನಲ್ಲಿ ಕೊನೆಯ ಲೀಗ್ ಪಂದ್ಯವಾಗಿರುವುದರಿಂದ ಸೆಮಿಫೈನಲ್‌ ಅರ್ಹತೆ ಆಗಲೇ ನಿರ್ಧಾರವಾಗಿರುತ್ತದೆ. ಆದರೂ ಪಂದ್ಯ ರೋಚಕವಾಗಿರಲಿದ್ದು, ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ.

World Cup 2023 Schedule: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಪಂದ್ಯ ಯಾವಾಗ? World Cup 2023 Schedule: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?

ಆಸ್ಟ್ರೇಲಿಯಾ-ಪಾಕಿಸ್ತಾನ ಮುಖಾಮುಖಿ

ಇನ್ನು ಚಿನ್ನಸ್ವಾಮಿ ಅಂಗಳದಲ್ಲಿ ಅಕ್ಟೋಬರ್ 20ರ ಶುಕ್ರವಾರ, ಬಲಿಷ್ಠ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಆಸ್ಟ್ರೇಲಿಯಾ, ಶ್ರೇಷ್ಠ ವೇಗಿಗಳನ್ನು ಹೊಂದಿರುವ ಪಾಕಿಸ್ತಾನದ ನಡುವಿನ ಹಣಾಹಣಿ ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಮನರಂಜನೆ ಸಿಗಲಿದೆ.

ಅಕ್ಟೋಬರ್ 26ರಂದು ಇಂಗ್ಲೆಂಡ್ ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿದದು, ಕ್ವಾಲಿಫೈಯರ್ 2 ತಂಡದ ವಿರುದ್ಧ ಸೆಣೆಸಲಿದೆ. ನವೆಂಬರ್ 4ರಂದು ಪಾಕಿಸ್ತಾನ ಮತ್ತೊಮ್ಮೆ ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿದ್ದು ಬಲಿಷ್ಠ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಲಿದೆ. ನವೆಂಬರ್ 9ರಂದು ನ್ಯೂಜಿಲೆಂಡ್ ಬೆಂಗಳೂರಿನಲ್ಲಿ ಎರಡನೇ ಪಂದ್ಯ ಆಡಲಿದ್ದು, ಕ್ವಾಲಿಫೈಯರ್ 2 ತಂಡದ ವಿರುದ್ಧ ಸೆಣೆಸಲಿದೆ.

ಭಾರತದ ಪಂದ್ಯಗಳು ಯಾವಾಗ? ಎಲ್ಲಿ?

ಇನ್ನು ಭಾರತ ತಂಡ ಲೀಗ್ ಹಂತದಲ್ಲಿ 8 ಪಂದ್ಯಗಳನ್ನು ಆಡಲಿದೆ. ಏಕದಿನ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಪಂದ್ಯಗಳು.

1) ಅಕ್ಟೋಬರ್ 8, ಭಾನುವಾರ: ಭಾರತ Vs ಆಸ್ಟ್ರೇಲಿಯಾ. ಸ್ಥಳ: ಚಿದಂಬರಂ ಕ್ರೀಡಾಂಗಣ, ಚೆನ್ನೈ.

2) ಅಕ್ಟೋಬರ್ 11, ಬುಧವಾರ: ಭಾರತ Vs ಅಫ್ಘಾನಿಸ್ತಾನ. ಸ್ಥಳ: ಅರುಣ್ ಜೇಟ್ಲಿ ಸ್ಟೇಡಿಯಂ, ದೆಹಲಿ.

3) ಅಕ್ಟೋಬರ್ 15, ಭಾನುವಾರ: ಭಾರತ Vs ಪಾಕಿಸ್ತಾನ. ಸ್ಥಳ: ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್.

4) ಅಕ್ಟೋಬರ್ 19, ಗುರುವಾರ : ಭಾರತ Vs ಬಾಂಗ್ಲಾದೇಶ. ಸ್ಥಳ: ಎಂಸಿಎ ಕ್ರೀಡಾಂಗಣ , ಪುಣೆ.

5) ಅಕ್ಟೋಬರ್ 22, ಭಾನುವಾರ : ಭಾರತ Vs ನ್ಯೂಜಿಲೆಂಡ್. ಸ್ಥಳ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಧರ್ಮಶಾಲಾ.

6) ಅಕ್ಟೋಬರ್ 29, ಭಾನುವಾರ : ಭಾರತ Vs ಇಂಗ್ಲೆಂಡ್. ಸ್ಥಳ: ಏಕಾನಾ ಸ್ಟೇಡಿಯಂ, ಲಕ್ನೋ.

7) ನವೆಂಬರ್ 2, ಗುರುವಾರ: ಭಾರತ Vs ಕ್ವಾಲಿಫೈಯರ್ 2: ಸ್ಥಳ: ವಾಂಖೆಡೆ ಸ್ಟೇಡಿಯಂ, ಮುಂಬೈ.

8) ನವೆಂಬರ್ 5, ಭಾನುವಾರ : ಭಾರತ Vs ದಕ್ಷಿಣ ಆಫ್ರಿಕಾ. ಸ್ಥಳ: ಈಡನ್ ಗಾರ್ಡನ್ ಕ್ರೀಡಾಂಗಣ, ಕೋಲ್ಕತ್ತಾ.

9) ನವೆಂಬರ್ 11, ಶನಿವಾರ: ಭಾರತ Vs ಕ್ವಾಲಿಫೈಯರ್ 2, ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.

English summary

The ICC announced the schedule for the ODI World Cup on Tuesday, revealing that Bengaluru will host five ODI matches of the tournament. On November 11th, India will play against the Qualifier 1 team at Bengaluru’s Chinnaswamy Stadium.

Story first published: Tuesday, June 27, 2023, 17:05 [IST]

Source link