ಮೇಷ ರಾಶಿಯ ವಾರ ಭವಿಷ್ಯ
ವಾರದ ಆರಂಭದಲ್ಲೇ ಶುಭಸುದ್ದಿಯೊಂದನ್ನು ಕೇಳುವಿರಿ. ಇದು ನಿಮ್ಮ ವೃತ್ತಿ ಜೀವನಕ್ಕೆ ಒಂದು ತಿರುವನ್ನು ನೀಡುತ್ತದೆ. ತಂದೆ ಅಥವಾ ತಾಯಿಯ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ನಿಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಹಾಗೆ ನಿಮಗೆ ಖುಷಿಕೊಡುವ ಸಂಗತಿ ಇದೆ. ಬಹಳ ದಿನಗಳಿಂದ ಕಾಯುತ್ತಿದ್ದ ವಿಷಯ ನಿಮ್ಮ ಪರವಾಗಿ ಸೂಚನೆ ನೀಡಲಿದೆ. ಮನೆಯಲ್ಲಿ ಸೌಖ್ಯ ನೆಮ್ಮದಿ ಇದೆ.
ವೃಷಭ ರಾಶಿ ವಾರ ಭವಿಷ್ಯ
ಮಾನಸಿಕವಾಗಿ ಕೊಂಚ ಅಶಾಂತಿ ಇದೆ. ನೀವು ಮುಂದಿನ ಆಗುಹೋಗುಗಳ ಬಗ್ಗೆ ತೀವ್ರವಾಗಿ ಆಲೋಚಿಸುತ್ತೀರಿ. ಇದರಿಂದ ನಿಮಗೆ ಒತ್ತಡ ಗಲಿಬಿಲಿ ಎರಡೂ ಇರುತ್ತದೆ. ಮುಂದೆ ಆಗುವ ಕಾರ್ಯಕ್ಕೆ ಈಗಿನಿಂದಲೇ ತಯಾರಾಗುವ ಮಾನಸಿಕ ಸಿದ್ದತೆ ನಡೆಸುತ್ತೀರಿ. ಚಿಂತೆ ಬೇಡ. ಆಗುವ ಕಾಲಕ್ಕೆ ಎಲ್ಲವೂ ಒಳಿತೇ ಆಗುತ್ತದೆ. ಹಣದ ಖರ್ಚು ಕೊಂಚ ಇದೆ. ಮಾನಸಿಕವಾಗಿ ಖುಷಿಕೊಡುವ ಕೆಲವು ಸಂಗತಿಗಳು ನಡೆಯುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಇದೆ. ಆರೋಗ್ಯ ಚೆನ್ನಾಗಿದೆ. ಈ ವಾರ ಸುಲಲಿತವಾಗಿ ಕಳೆಯುತ್ತದೆ. ಹಣದ ಹರಿವು ಉತ್ತಮವಾಗಿದೆ.
ಮಿಥುನ ರಾಶಿಯ ವಾರ ಭವಿಷ್ಯ
ವೃತ್ತಿಯಲ್ಲಿ ಮತ್ತು ವೈಯುಕ್ತಿಕವಾಗಿ ಒತ್ತಡ ಇದ್ದರೂ ಗುರುಬಲ ಇರುವುದರಿಂದ ಎಲ್ಲವೂ ಸರಳವಾಗಿ ನಡೆದು ಹೋಗುತ್ತದೆ. ಮಕ್ಕಳಿಂದ ಖುಷಿ ಇದೆ. ಮಕ್ಕಳ ಬೆಳವಣಿಗೆ ನಿಮಗೆ ಸಂತೋಷ ಕೊಡುತ್ತದೆ. ಹೊಸ ಜವಾಬ್ದಾರಿಗಳು ಹೆಗಲೇರುವ ಸಮಯ. ಮಾನಸಿಕವಾಗಿ ಸಿದ್ಧರಾಗಿರಿ. ನಿಮ್ಮ ಸಾಮರ್ಥ್ಯವನ್ನು ತೋರಿಸುವ ಸಮಯ. ಭಯ ಬೇಡ. ನೀವು ನಿಭಾಯಿಸುತ್ತೀರಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ.
ಕಟಕ ರಾಶಿಯ ವಾರ ಭವಿಷ್ಯ
ಅಂದುಕೊಂಡ ಕೆಲಸಗಳೆಲ್ಲ ವೇಳೆಗೆ ಸರಿಯಾಗಿ ಆಗದೆ ಮನಸ್ಸಿಗೆ ಕಸಿವಿಸಿ. ಬೇಸರಿಸಬೇಡಿ. ಕೆಲವು ಸಲ ನಾವು ಎಂದುಕೊಳ್ಳುವುದೇ ಒಂದು ಆಗುವುದೇ ಒಂದು ಎಂಬಂತಾಗುತ್ತದೆ. ಈ ಕ್ಷಣಕ್ಕೆ ನಿಮ್ಮ ಕಾರ್ಯಗಳು ವ್ಯತಿರಿಕ್ತ ಪರಿಣಾಮ ಸೂಚಿಸಿದರೂ ಮುಂದೊಂದು ದಿನ ಇದೆ ನಿಮಗೆ ವರವಾಗಿ ಪರಿಣಮಿಸುತ್ತದೆ. ಕೆಲವು ಸಲ ತ್ವರಿತವಾಗಿ ಮಾಡಬೇಕೆಂದುಕೊಂಡ ಕೆಲಸಕ್ಕೆ ವಿಘ್ನ ಬರುವುದು ನಮಗೆ ಉಪಕಾರವೇ ಆಗುತ್ತದೆ. ನಳ ಚರಿತ್ರೆಯನ್ನು ನೆನಪು ಮಾಡಿಕೊಳ್ಳಿ. ಸಾಧ್ಯವಾದರೆ ನಳ ಚರಿತ್ರೆ ಓದಿ. ಅಷ್ಠಮ ಶನಿಯ ಪ್ರಭಾವ ಕಡಿಮೆ ಆಗುತ್ತದೆ. ದೈನಂದಿನ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತ ಹೋಗಿ. ನಂಬಿಕೆ ಇರಲಿ.
ಸಿಂಹ ರಾಶಿಯ ವಾರ ಭವಿಷ್ಯ
ಗುರುಬಲ ಇದೆ. ಸೂರ್ಯ ಹಾಗೂ ಬುಧನೂ ನಿಮಗೆ ಸಹಕಾರ ನೀಡುತ್ತಾರೆ. ಆದರೂ ಏನೋ ಒಂದು ಕೊರಗು ಕೊರತೆ ನಿಮ್ಮನ್ನು ಕಾಡುತ್ತದೆ. ಆತ್ಮೀಯರ ನೆನಪು ಉಕ್ಕಿ ಬರುತ್ತದೆ. ಮನಸ್ಸು ಬಿಚ್ವಿ ಯಾರಲ್ಲಿಯೂ ಹೇಳಿಕೊಳ್ಳಲಾಗದ ತಾಕಲಾಟ. ಮನಸ್ಸಿನಲ್ಲೇ ಕೊರಗುತ್ತೀರಿ. ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ಹಣದ ಹರಿವೂ ಉತ್ತಮವಾಗಿದೆ ವೃತ್ತಿಯಲ್ಲಿ ಪ್ರಗತಿ ಇದೆ. ಆದರೂ ಏನೋ ಒಂದು ನೋವು ಮುಳ್ಳಿನಂತೆ ಹೃದಯ ಚುಚ್ಚುತ್ತಿದೆ. ಇದಕ್ಕೆ ಮುಲಾಮು ನಿಮ್ಮ ಬಳಿಯೇ ಇದೆ. ಒಳಗಣ್ಣು ತೆಗೆದು ನೋಡಿ.
ಕನ್ಯಾ ರಾಶಿಯ ವಾರ ಭವಿಷ್ಯ
ಹಣ ಧಾರಾಳವಾಗಿ ಬರುತ್ತಿದೆ. ಮನಸ್ಸಿಗೆ ಖುಷಿ ಇದೆ. ವೃತ್ತಿಯಲ್ಲಿ ಹೊಸ ಹೊಸ ಯೋಜನೆಗಳು ಅದರ ಸಲುವಾಗಿ ಪ್ರವಾಸಗಳು ನಡೆಯುತ್ತವೆ. ಬಾನಿಗೆ ಹಾರಿ ನಕ್ಷತ್ರ ಹಿಡಿಯುವ ಉಮೇದು ಇದೆ. ವೃತ್ತಿ ಕ್ಷೇತ್ರದಲ್ಲಿ ಹೊಗಳಿಕೆ ಬಹುಮಾನ ಇವೆಲ್ಲ ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ವಾಹನದಿಂದ ಲಾಭ ಇದೆ. ನೀವು ಎಣಿಸಿದ್ದ ಕಾರ್ಯಗಳಿಗೆಲ್ಲ ಈ ವಾರದಲ್ಲಿ ಒಂದು ರೂಪು ರೇಷೆ ಸಿದ್ಧವಾಗಿ ಮನಸ್ಸಿಗೆ ತೃಪ್ತಿ ದೊರೆಯುತ್ತದೆ. ಯಾರ ಮೇಲೂ ರೇಗಬೇಡಿ. ಒರಟು ಮಾತಿನಿಂದ ಕೆಲಸ ಹಾಳಾಗಬಾರದು. ಸಮಾಧಾನ ಇರಲಿ.
ತುಲಾ ರಾಶಿಯ ವಾರ ಭವಿಷ್ಯ
ಸಭೆ ಸಮಾರಂಭಗಳಲ್ಲಿ ಆಹ್ವಾನ ಇದೆ. ವಿದ್ವತ್ ಜನರೆದುರು ಭಾಷಣ ಮಾಡುವ ಯೋಗ ವಿದ್ವತ್ ಸಭೆಗಳಲ್ಲಿ ಭಾಗವಹಿಸುವ ಅವಕಾಶಗಳು ಇದೆ. ನಿಮ್ಮ ಬುದ್ಧಿ ಜ್ಞಾನವನ್ನು ಇನ್ನಷ್ಟು ಹರಿತವಾಗಿಸುತ್ತೀರಿ. ಎಲ್ಲ ಕಡೆ ಗೌರವ ಮರ್ಯಾದೆಗಳನ್ನು ಹೊಂದುತ್ತೀರಿ. ಒಂಬತ್ತರ ಬುಧ ಸೂರ್ಯ ನಿಮ್ಮ ಕೀರ್ತಿಯನ್ನು ಇನ್ನಷ್ಟು ಪ್ರಜ್ವಲಗೊಳಿಸುತ್ತಾರೆ. ನಿಮ್ಮ ವೈಯಕ್ತಿಕ ಬೆಳವಣಿಯಲ್ಲಿ ಮನೆ ಸಂಸಾರವನ್ನು ನಿರ್ಲಕ್ಷಿಸಬೇಡಿ. ಗುರುಬಲ ಇರುವುದರಿಂದ ಹಣಕಾಸಿಗೆ ಕಷ್ಟವಿಲ್ಲ. ಆದರೆ ಏಳರಲ್ಲಿ ರಾಹು ಮತ್ತು ಪಂಚಮ ಶನಿ ಇರುವುದರಿಂದ ಸಂಗಾತಿಯೊಡನೆ ಕೊಂಚ ಘರ್ಷಣೆ ಇರುತ್ತದೆ. ತಾಳ್ಮೆಯಿಂದ ನಿಭಾಯಿಸಿ. ನೀವು ಅಂದುಕೊಂಡದ್ದೆಲ್ಲ ನಿಜವಲ್ಲ. ಸಮಸ್ಯೆಗೆ ಮತ್ತೊಂದು ಮುಖವೂ ಇರುತ್ತದೆ ಎಂದು ಮನಗಾಣಿರಿ.
ವೃಶ್ಚಿಕ ರಾಶಿಯ ವಾರ ಭವಿಷ್ಯ
ನಿಮಗೆ ಈಗ ಎಲ್ಲ ಕಡೆಯಿಂದಲೂ ಸವಾಲುಗಳು. ನೀವು ಸವಾಲುಗಳಿಗೆ ಭಯಪಡುವುದಿಲ್ಲ. ಹಾಗಾಗಿ ಯಾವಾಗಲೂ ಒಂದಲ್ಲ ಒಂದು ಸವಾಲುಗಳು ಇದ್ದೇ ಇರುತ್ತದೆ. ನೀವು ಹುಟ್ಟು ಹೋರಾಟಗಾರರು. ಅದರಿಂದ ನೀವು ಎಂದೂ ಎದೆಗುಂದುವುದಿಲ್ಲ. ಹಾಗಾಗಿ ವೃತ್ತಿಯಲ್ಲಿ ಸಹ ಕಷ್ಟದ ಪ್ರಾಜೆಕ್ಟ್ ಸಿಕ್ಕರೂ ನಿಭಾಯಿಸುತ್ತೀರಿ. ಶತ್ರುಗಳ ಹುಟ್ಟಡಗಿಸುತ್ತೀರಿ. ತಲೆ ಎತ್ತಿ ನಿಲ್ಲುತ್ತೀರಿ. ವೃತ್ತಿಯಲ್ಲಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತೀರಿ. ಹಣದ ಹರಿವು ಮಧ್ಯಮ. ವಾಹನದಿಂದ ಲಾಭ ಇದೆ. ಸಹೋದರರಿಂದ ಸಹಾಯ ಇದೆ.
ಧನಸ್ಸು ರಾಶಿಯ ವಾರ ಭವಿಷ್ಯ
ನೀವು ಸಮಸ್ಯೆಯ ನೇರ ಮುಖವನ್ನು ನೋಡದೆ ಮತ್ತೊಂದು ಮುಖವನ್ನೇ ಗಮನಿಸುವವರು. ಆದ್ದರಿಂದ ನಿಮಗೆ ಪ್ರತಿಯೊಂದರಲ್ಲೂ ಸಮಸ್ಯೆಯೇ ಕಾಣಿಸುತ್ತದೆ. ಸಮಸ್ಯೆ ಹುಟ್ಟುಹಾಕಿದರೆ ಸಾಲದು. ಅದನ್ನು ಪರಿಹಾರ ಮಾಡುವನಿಟ್ಟಿನಲ್ಲೂ ಯೋಚಿಸಬೇಕು. ಈಗ ನಿಮಗೆ ಗ್ರಹಗತಿ ಅನುಕೂಲವಾಗಿದೆ. ನಿಮಗೆ ಬೇಕಾದ ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಇಲ್ಲದೆ ಸಾಗುತ್ತದೆ. ಮನೆ ಕಟ್ಟುವುದು, ಹೊಸ ವಸ್ತುಗಳನ್ನು ಖರೀದಿಸುವುದು ಮಾಡುತ್ತೀರಿ. ಮೂರರ ಶನಿ ನಿಮ್ಮ ಪರಾಕ್ರಮವನ್ನು ಹೆಚ್ಚಿಸುತ್ತಾನೆ. ಮಕ್ಕಳಿಂದ ಕೊಂಚ ವಿರೋಧ ಇದೆ. ಆರೋಗ್ಯದಲ್ಲಿಜಾಗ್ರತೆ ವಹಿಸಿ.
ವೃತ್ತಿಯಲ್ಲಿ ಯಶಸ್ಸು ಬಡ್ತಿ ಇದೆ. ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೀರಿ. ಪ್ರವಾಸಗಳನ್ನು ಮಾಡುತ್ತೀರಿ. ಮನಸ್ಸಿಗೆ ಖುಷಿಯಾಗುವಂಥ ಕೆಲಸಗಳನ್ನು ಮಾಡುತ್ತೀರಿ. ಭೂಮಿ ವ್ಯವಹಾರದಲ್ಲಿ ಲಾಭ ಇದೆ. ಭೂಮಿ ಮನೆ ಆಸ್ತಿ ಕೊಳ್ಳುವ ಯೋಗ ಇದೆ. ವ್ಯವಸಾಯಗಾರರಿಗೆ ಯಶಸ್ಸು ಧನಲಾಭ ಇದೆ. ವಾಹನದಿಂದ ಲಾಭ ಇದೆ. ಹೊಸ ವಾಹನ ಕೊಳ್ಳುವ ಯೋಗ ಇದೆ. ಧೈರ್ಯ ಪರಾಕ್ರಮದಿಂದ ಯಾವುದೇ ಕೆಲಸ ಮಾಡಿದರೂ ಜಯಶಾಲಿ ಆಗುತ್ತೀರಿ. ಹಣದ ಹರಿವು ಬಹಳ ಉತ್ತಮವಾಗಿದೆ. ನಾನಾ ಮೂಲಗಳಿಂದ ಹಣ ಒದಗಿಬರುತ್ತದೆ. ಮನಸ್ಸಿನ ತಳಮಳ ನಿವಾರಣೆಯಾಗಲು ರುದ್ರದೇವರ ಸ್ಮರಣೆ ಮಾಡಿ.
ಮಕರ ರಾಶಿಯ ವಾರ ಭವಿಷ್ಯ
ಯಾವುದನ್ನೂ ಬೇಗ ಒಪ್ಪದ ನೀವು ಪ್ರಮಾಣಿಕರಾಗಿದ್ದರೂ ಒಳ್ಳೆಯ ಫಲತಾಂಶಕ್ಕೆ ಅವಕಾಶಕ್ಕೆ ಕಾಯಬೇಕು. ಫಲಿತವು ಗಟ್ಟಿಯಾಗಿ ಕೈಗೆ ಬಂದು ಬೀಳುವವರೆಗೂ ಅನುಮಾನಿಸುತ್ತಿರುತ್ತೀರಿ. ನೀವು ಪ್ರಾಮಾಣಿಕರೆಂದು ಡಂಗುರ ಸಾರುವುದಿಲ್ಲ. ಯಾರ ವಕೀಲತ್ವವನ್ನು ಬಯಸುವುದಿಲ್ಲ. ಹೀಗಾಗಿ ನಿಮಗೆ ಅವಕಾಶಗಳು ನಿಧಾನವಾಗಿ ಸಿಗುತ್ತದೆ. ನಿಧಾನವಾದರೂ ಗಟ್ಟಿಯಾದ ಅವಕಾಶ ಹುಡುಕಿ ಬರುತ್ತದೆ. ಕೊಂಚ ತಾಳ್ಮೆ ವಹಿಸಿ. ಮನಸ್ಸನ್ನು ಘಾಸಿ ಮಾಡಿಕೊಳ್ಳದೆ ಸದಾ ಗುಣಾತ್ಮಕವಾಗಿ ಚಿಂತಿಸಿ. ನಿಮ್ಮ ಇಷ್ಟ ದೈವದ ಪ್ರಾರ್ಥನೆ ಮಾಡಿ. ಕಷ್ಟಗಳು ಕೊನೆಗೆ ಬಂದಿವೆ. ಒಳ್ಳೆಯ ದಿನಗಳು ಹತ್ತಿರದಲ್ಲೇ ಇದೆ. ಈ ವಾರದಲ್ಲಿ ಶುಭ ಸುದ್ದಿ ನಿಮ್ಮನ್ನು ಅರಸಿ ಬರುತ್ತದೆ.
ಕುಂಭ ರಾಶಿಯವರ ವಾರ ಭವಿಷ್ಯ
ಈಗ ನಿಮಗೆ ಶನಿ ರಾಶಿಯಲ್ಲೇ ಇದ್ದರೂ ಹೊಸ ಹೊಸ ಮನಸ್ಸಿಗೆ ಮುದಕೊಡುವ ಸಂಗತಿಗಳೂ ಇವೆ. ಖರ್ಚುಗಳು ತಲೆ ಕೆಡಿಸುತ್ತಿದ್ದರೂ ಆದಾಯವೂ ಚೆನ್ನಾಗಿದೆ. ಬಂದದನ್ನು ಎದುರಿಸುವ ಕೆಚ್ಚೂ ಇದೆ. ವಾಹನ ಕೊಳ್ಳುವ ಯೋಗ ಇದೆ. ಮನೆಯಲ್ಲಿ ನಗು ಸಂತೋಷದ ವಾತಾವರಣ ಇರುತ್ತದೆ. ವೃತ್ತಿಯಲ್ಲಿ ಪ್ರಗತಿಇದೆ. ಮಕ್ಕಳ ಖುಷಿ ನಿಮಗೂ ಮನಸ್ಸಿಗೆ ಮುದ ಕೊಡುತ್ತದೆ. ಹಣದ ಹರಿವು ಉತ್ತಮವಾಗಿದೆ.
Recommended Video
ಹೊಸ ವರ್ಷಕ್ಕೆ ಟೀಂ ಇಂಡಿಯಾ ಆಟಗಾರರ ಮೋಜು ಮಸ್ತಿ ಫುಲ್ ವೈರಲ್ | Oneindia Kannada
ಮೀನ ರಾಶಿಯ ವಾರ ಭವಿಷ್ಯ
ಹಣಕಾಸಿಗೆ ಕಷ್ಟವಿಲ್ಲ. ನೀವು ನಿಮ್ಮ ಸುಖ ಸಂತೋಷವನ್ನಷ್ಟೇ ಅಲ್ಲದೆ ನಿಮ್ಮ ಸುತ್ತಲೂ ಇರುವವರ ಸಂತೋಷವನ್ನೂ ಬಯಸುತ್ತೀರಿ. ಆತ್ಮೀಯರು ಸಂತೋಷವಾಗಿರಲು ನಿಮ್ಮ ಕೈಯಿಂದ ಹಣ ಖರ್ಚು ಮಾಡಲೂ ಹಿಂತೆಗೆಯುವವರಲ್ಲ. ಎಲ್ಲರ ಸಂತೋಷವೇ ನಿಮ್ಮ ಸಂತೋಷ. ಆದರೂ ಖರ್ಚಿನ ಬಗ್ಗೆ ನಿಗಾ ಇರಲಿ. ನಾಲ್ಕರಲ್ಲಿ ಬುಧ ಐದರಲ್ಲಿ ಶುಕ್ರ ಎರಡನೇ ಮನೆಯಲ್ಲಿ ಗುರು ನಿಮಗೆ ಬೆಂಬಲವಾಗಿ ಇದ್ದಾರೆ. ಮಕ್ಕಳ ಏಳ್ಗೆ ನಿಮಗೆ ಖುಷಿ ಕೊಡುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಕುಟುಂಬ ಸೌಖ್ಯ ಹಣದ ಹರಿವು ಉತ್ತಮವಾಗಿದೆ.