Bengaluru
oi-Ravindra Gangal
ಬೆಂಗಳೂರು, ಜುಲೈ 28: ಬೆಂಗಳೂರಿಗೆ ಸಮೀಪವಿರುವ ಅದ್ಭುತ ಜಾಗಗಳಿಗೆ ಭೇಟಿ ನೀಡಿ ನೆಮ್ಮದಿ ಕಾಣಲು ನೀವು ಇಚ್ಛಿಸಿದರೆ, ಈ ನಯನ ಮನೋಹರ ಜಲಪಾತಗಳಿಗೆ ಭೇಟಿ ನೀಡಬಹುದು. ಅದರಲ್ಲೂ ಮಳೆಗಾಲದ ಈ ಸಮಯದಲ್ಲಿ ಜಲಪಾತಗಳು ಉಕ್ಕಿ ಹರಿಯುತ್ತಿವೆ. ವಾರಾಂತ್ಯದ ಎರಡು ದಿನಗಳ ಕಿರು ಪ್ರವಾಸಕ್ಕಾಗಿ ಬೆಂಗಳೂರು ಸಮೀಪದ ಈ ಐದು ಜಲಪಾತಗಳ ಬಗ್ಗೆ ತಿಳಿಯಿರಿ. ಬೆಂಗಳೂರಿಗೆ ಸಮೀಪವಿರುವ ಅತ್ಯಂತ ಸುಂದರವಾದ ಜಲಪಾತಗಳ ಆಯ್ಕೆ ಪಟ್ಟಿ ಇಲ್ಲಿದೆ. ಈ ಜಲಪಾತಗಳು ಬೆಂಗಳೂರಿನಿಂದ ಕೆಲವೇ ಕಿಲೋಮೀಟರ್‌ಗಳಷ್ಟು ದೂರದಲ್ಲಿವೆ.
ಬೆಂಗಳೂರು ಸಮೀಪದ 5 ಜಲಪಾತಗಳ ಪಟ್ಟಿ
ಚುಂಚಿ ಜಲಪಾತ – 83 ಕಿಮೀ
ಮುತ್ಯಾಲ ಮಡುವು ಜಲಪಾತ – 43 ಕಿಮೀ
ಮೇಕೆದಾಟು ಜಲಪಾತ – 93 ಕಿಮೀ
ತೊಟ್ಟಿಕಲ್ಲು ಜಲಪಾತ – 33.5 ಕಿಮೀ
ಶಿವನ ಸಮುದ್ರ ಜಲಪಾತ -110 ಕಿಮೀ
ಚುಂಚಿ ಜಲಪಾತ
ಮೇಕೆದಾಟು ಮತ್ತು ಸಂಗಮ ಮಾರ್ಗದಲ್ಲಿರುವ ಚುಂಚಿ ಜಲಪಾತವು ಬೆಂಗಳೂರಿನ ಅತ್ಯಂತ ರಮಣೀಯ ಜಲಪಾತಗಳಲ್ಲಿ ಒಂದಾಗಿದೆ. ಸಂಗಮವು ಮೇಕೆದಾಟುವಿನ ಕಲ್ಲಿನ ಕಣಿವೆಯ ಮೂಲಕ ಹರಿಯುವ ಮೂರು ನದಿಗಳ ಸಂಗಮವಾಗಿದೆ. ಚುಂಚಿ ಜಲಪಾತದ ಹಾದಿಯು ಸಸ್ಯವರ್ಗದಿಂದ ಸಮೃದ್ಧವಾಗಿದೆ. ಬೆಂಗಳೂರಿನಿಂದ 100 ಕಿಲೋಮೀಟರ್‌ಗಳಿಗೂ ಕಡಿಮೆ ದೂರದಲ್ಲಿದೆ.
ಜಲಪಾತವು 197 ಅಡಿ ಎತ್ತರವಿದೆ
ಕನಕಪುರವು ಚುಂಚಿ ಜಲಪಾತಕ್ಕೆ ಹತ್ತಿರದ ರೈಲು ನಿಲ್ದಾಣವಾಗಿದೆ
ಮಳೆಗಾಲ ಮತ್ತು ಚಳಿಗಾಲದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ
ಇಲ್ಲಿ ಪಿಕ್ನಿಕ್, ಸ್ನಾನ ಮತ್ತು ಫೋಟೊಗ್ರಾಪಿ ಮಾಡಬಹುದು
ಮುತ್ಯಾಲ ಮಡುವು ಜಲಪಾತ
ಮುತ್ಯಾಲ ಮಡುವು ಜಲಪಾತವನ್ನು ಪರ್ಲ್ ವ್ಯಾಲಿ ಫಾಲ್ಸ್ ಎಂದೂ ಕರೆಯುತ್ತಾರೆ. ಇದು 92 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ತೊರೆಯಾಗಿದೆ. ಇದರ ಶಾಂತಿಯುತ ವಾತಾವರಣ ಮತ್ತು ಹಚ್ಚ ಹಸಿರಿನ ಕಣಿವೆಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಒಂದು ದಿನದ ಪ್ರವಾಸಕ್ಕಾಗಿ ಬೆಂಗಳೂರಿನ ಸಮೀಪವಿರುವ ಅತ್ಯಂತ ಸುಂದರವಾದ ಮತ್ತು ಉತ್ತಮವಾದ ಜಲಪಾತಗಳಲ್ಲಿ ಒಂದಾಗಿದೆ. ಮುತ್ಯಾಲ ಮಡುವು ಜಲಪಾತವು ಆನೇಕಲ್ ಬಳಿ ಇದೆ. ಇದಕ್ಕೆ ಬೆಂಗಳೂರಿನಿಂದ ಒಂದು ಗಂಟೆ ಪ್ರಯಾಣವಾಗುತ್ತದೆ. ಇದು ಸುಂದರವಾದ ಪಿಕ್ನಿಕ್ ತಾಣವಾಗಿದೆ.
ಇದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹೊರವಲಯದಲ್ಲಿದೆ
ಆಗಸ್ಟ್‌ನಿಂದ ನವೆಂಬರ್‌ವರೆಗೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ
ತಮ್ಮನಾಯಕನಹಳ್ಳಿ ಪರ್ಲ್ ವ್ಯಾಲಿ ಬಳಿ ಇದೆ
ಕೌಟುಂಬಿಕ ಪಿಕ್ನಿಕ್, ದೃಶ್ಯ ವೀಕ್ಷಣೆ ಮತ್ತು ಪಕ್ಷಿ ವೀಕ್ಷಣೆಗಳನ್ನು ಇಲ್ಲಿ ಮಾಡಬಹುದು
ಮೇಕೆದಾಟು ಜಲಪಾತ
ಇಲ್ಲಿ ಕಾವೇರಿ ನದಿಯು ಆಳವಾದ ಮತ್ತು ಕಿರಿದಾದ ಕಮರಿಯಲ್ಲಿ ಹರಿಯುತ್ತದೆ. ಈ ಜಲಪಾತವನ್ನು ಮೇಕೆಯೂ ಸಹ ದಾಟಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಮೇಕೆ ದಾಟು ಎಂಬ ಹೆಸರು ಬಂದಿದೆ. ನದಿಯು ಕಮರಿಯನ್ನು ತಲುಪಿದಾಗ, ಅದು ಬಂಡೆಗಳ ನಡುವೆ ಬೋರ್ಗರೆದು ಹರಿಯುತ್ತದೆ. ಇದು ಬೆಂಗಳೂರಿನ ಸಮೀಪವಿರುವ ಅತ್ಯಂತ ಸುಂದರವಾದ ಜಲಪಾತವಾಗಿದೆ. ಕಾವೇರಿ ನದಿಯು 5ರಿಂದ 10 ಮೀಟರ್ ಅಗಲದ ಕಿರಿದಾದ ಕಂದರದ ಮೂಲಕ ಹರಿಯುತ್ತದೆ.
ಜಲಪಾತವು 39 ಅಡಿ ಎತ್ತರವಿದೆ
ಸಂಗಮದಿಂದ ಮೇಕೆದಾಟುಗೆ ದೋಣಿಯಲ್ಲಿ ಸಂಚರಿಸಬಹುದು
ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ
ಇದು ಬೆಂಗಳೂರು, ರಾಮನಗರ ಜಿಲ್ಲೆಗಳಿಗೆ ಸಮೀಪವಾಗಿದೆ
ಕೌಟುಂಬಿಕ ಪಿಕ್ನಿಕ್, ದೃಶ್ಯವೀಕ್ಷಣೆ, ಫೋಟೊಗ್ರಾಪಿ ಮತ್ತು ಪಕ್ಷಿ ವೀಕ್ಷಣೆಗಳನ್ನು ಇಲ್ಲಿ ಮಾಡಬಹುದು
ತೊಟ್ಟಿಕಲ್ಲು ಜಲಪಾತ
ಸ್ವರ್ಣ ಮುಖಿ ಜಲಪಾತ ಎಂದೂ ಕರೆಯಲ್ಪಡುವ ಈ ಜಲಪಾತವು 100 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರು ಸಮೀಪದ ಅದ್ಭುತ ಜಲಪಾತಗಳಲ್ಲಿ ಒಂದಾಗಿದೆ. ಇದು ನಿಮಗೆ ಶಾಂತಿಯುತ ಮತ್ತು ಪ್ರಶಾಂತ ಅನುಭವವನ್ನು ನೀಡುತ್ತದೆ. ಇದು ಬೆಂಗಳೂರಿನ ಸಮೀಪವಿರುವ ಅತ್ಯುತ್ತಮ ವಾರಾಂತ್ಯದ ವಿಹಾರ ತಾಣಗಳಲ್ಲಿ ಒಂದಾಗಿದೆ.
ಜಲಪಾತವು 90-100 ಅಡಿ ಎತ್ತರವಿದೆ
ತೊಟ್ಟಿಕಲ್ಲುಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಉತ್ತಮ ಸಮಯವಾಗಿದೆ
ಇದು ಬೆಂಗಳೂರಿನ ಕನಕಪುರ ರಸ್ತೆ ಬಳಿ ಇದೆ
ದೃಶ್ಯವೀಕ್ಷಣೆ, ರಾಕ್ ಕ್ಲೈಂಬಿಂಗ್ ಮತ್ತು ಪಕ್ಷಿವೀಕ್ಷಣೆ ಮಾಡಬಹುದು
ಶಿವನಸಮುದ್ರ ಜಲಪಾತ
ಇಲ್ಲಿ ಕಾವೇರಿ ನದಿಯು ಕಲ್ಲಿನ ಮೂಲಕ ಹರಿದು ಆಳಕ್ಕೆ ದುಮ್ಮಿಕ್ಕುತ್ತದೆ. ಇದಕ್ಕೆ ಶಿವನ ಸಮುದ್ರ ಜಲಪಾತವೆಂದು ಕರೆಯುತ್ತಾರೆ. ನದಿಯು ಎರಡು ಸುಂದರವಾದ ಜಲಪಾತಗಳಾಗಿ ವಿಭಜನೆಗೊಳ್ಳುತ್ತದೆ. ಗಗನಚುಕ್ಕಿ ಹಾಗೂ ಬರಚುಕ್ಕಿಗಳೆಂದು ಇವುಗಳನ್ನು ಕರೆಯುತ್ತಾರೆ. ಈ ಜಲಪಾತ ಬೆಂಗಳೂರಿನ ಸಮೀಪವಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ. ಪ್ರವಾಸಿಗರು ಜಲಪಾತದ ಕೆಳಭಾಗದಲ್ಲಿ ಹರಿಯುವ ನೀರಿನ ಮೇಲೆ ದೋಣಿ ವಿಹಾರವನ್ನು ಮಾಡಬಹುದು.
ಜಲಪಾತವು 321 ಅಡಿ ಎತ್ತರವಿದೆ
ಇಲ್ಲಿಗೆ ಬೆಂಗಳೂರಿನಿಂದ ಮೂರು ಗಂಟೆಗಳ ಪ್ರಯಾಣ ಮಾಡಬೇಕು
ಜುಲೈನಿಂದ ಅಕ್ಟೋಬರ್ ವರೆಗೂ ಶಿವನಸಮುದ್ರಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ
ಕೌಟುಂಬಿಕ ಪಿಕ್ನಿಕ್, ದೃಶ್ಯವೀಕ್ಷಣೆ ಮತ್ತು ಪಕ್ಷಿವೀಕ್ಷಣೆಗಳನ್ನು ಇಲ್ಲಿ ಮಾಡಬಹುದು.
English summary
Explore the top 5 Waterfalls near Bangalore
Story first published: Friday, July 28, 2023, 12:19 [IST]