Ott
oi-Srinivasa A
ಕಾಡುಗಳ್ಳ,
ನರಹಂತಕ,
ದಂತಚೋರ
ಎಂಬ
ಕೆಟ್ಟ
ಹೆಸರುಗಳಿಂದಲೇ
ಫೇಮಸ್
ಆಗಿರುವ
ವೀರಪ್ಪನ್
ಜೀವನವನ್ನು
ಆಧರಿಸಿದ
ಈಗಾಗಲೇ
ಸಾಕಷ್ಟು
ಚಿತ್ರಗಳು
ಬಿಡುಗಡೆಗೊಂಡಿವೆ.
ವೀರಪ್ಪನ್
ಕಾಡುಗಳ್ಳನಾಗಿ
ಹೇಗೆ
ಬೆಳೆದ,
ಎಷ್ಟು
ಜನರನ್ನು
ಬಲಿ
ಪಡೆದ,
ಪೊಲೀಸ್
ಇಲಾಖೆಗೆ
ಹೇಗೆ
ಸಿಂಹಸ್ವಪ್ನವಾಗಿದ್ದ
ಎಂಬ
ವಿಷಯವನ್ನು
ಈಗಾಗಲೇ
ಹಲವಾರು
ಚಿತ್ರಗಳು
ಪ್ರಯತ್ನ
ಮಾಡಿವೆ.
ಈ
ಪ್ರಯತ್ನಗಳಲ್ಲಿ
ಕೆಲವು
ಚಿತ್ರಗಳು
ಯಶಸ್ಸು
ಸಾಧಿಸಿದರೆ,
ಇನ್ನೂ
ಕೆಲ
ಚಿತ್ರಗಳು
ಮಿಶ್ರ
ಪ್ರತಿಕ್ರಿಯೆ
ಪಡೆದುಕೊಂಡಿದ್ದವು.
ಹೀಗೆ
ಈಗಾಗಲೇ
ಹಲವು
ಸಿನಿಮಾಗಳ
ಕಥೆಯಾಗಿರುವ
ವೀರಪ್ಪನ್
ಜೀವನಾಧಾರಿತ
ವಿಷಯವನ್ನು
ಓಟಿಟಿ
ದೈತ್ಯ
ನೆಟ್ಫ್ಲಿಕ್ಸ್
ಈಗ
ವೆಬ್
ಸರಣಿ
ಮಾಡಲು
ಮುಂದಾಗಿದೆ.
ಹೌದು,
ನೆಟ್ಫ್ಲಿಕ್ಸ್
ವೀರಪ್ಪನ್
ಎಂಬ
ಹೆಸರಿನ
ಅಡಿಯಲ್ಲಿಯೇ
ವೀರಪ್ಪನ್
ಜೀವನಾಧಾರಿತ
ಕಥೆಯ
ವೆಬ್
ಸರಣಿಯನ್ನು
ನಿರ್ಮಿಸಿದೆ.

ಈ
ಚಿತ್ರದ
ಕುರಿತ
ಬಿಗ್
ಅಪ್ಡೇಟ್
ಒಂದನ್ನು
ಇದೀಗ
ನೆಟ್ಫ್ಲಿಕ್ಸ್
ಹಂಚಿಕೊಂಡಿದ್ದು,
ಈ
ವೆಬ್
ಸರಣಿ
ಯಾವಾಗ
ಬಿಡುಗಡೆಯಾಗಲಿದೆ
ಎಂಬುದನ್ನು
ಪ್ರಕಟಿಸಿದೆ.
ಹೌದು,
ಆಗಸ್ಟ್
4ರಂದು
ವೀರಪ್ಪನ್
ವೆಬ್
ಸರಣಿ
ಬಿಡುಗಡೆಗೊಳ್ಳಲಿದೆ
ಎಂಬ
ವಿಷಯವನ್ನು
ನೆಟ್ಫ್ಲಿಕ್ಸ್
ವಿಶೇಷ
ಪೋಸ್ಟರ್
ಒಂದನ್ನು
ಬಿಡುಗಡೆ
ಮಾಡುವುದರ
ಮೂಲಕ
ತಿಳಿಸಿದೆ.
ಬೇಟೆಗಾರ,
ರಾಬಿನ್ಹುಡ್
ಎಂದೆಲ್ಲಾ
ವೀರಪ್ಪನ್
ಅನ್ನು
ಹೊಗಳಿರುವ
ನೆಟ್ಫ್ಲಿಕ್ಸ್
ಭಾರತದ
ಅತಿ
ದೊಡ್ಡ
ನರಹಂತಕನ
ತೆರೆದಿಡದ
ಕಥೆಯನ್ನು
ನೋಡಲು
ಸಿದ್ದರಾಗಿ
ಎಂದು
ಬರೆದುಕೊಂಡಿದೆ.
ನೆಟ್ಫ್ಲಿಕ್ಸ್
ಬಳಸಿರುವ
ಈ
ಸಾಲುಗಳು
ಸದ್ಯ
ಸಿನಿ
ರಸಿಕರ
ಕುತೂಹಲವನ್ನು
ಕೆರಳಿಸಿದೆ.
ನೆಟ್ಫ್ಲಿಕ್ಸ್
ಸಂಸ್ಥೆ
ಎಲ್ಲಿಯೂ
ನೋಡದಿರುವ
ವೀರಪ್ಪನ್
ಕಥೆಯನ್ನು
ತೆರೆದಿಡಲಿದ್ದೇವೆ
ಎಂದು
ಬರೆದುಕೊಂಡಿರುವುದು
ಸಾಕಷ್ಟು
ಚರ್ಚೆಗಳನ್ನು
ಹುಟ್ಟುಹಾಕಿದ್ದು,
ಈ
ಹಿಂದಿನ
ಚಿತ್ರಗಳಲ್ಲಿ
ಇಲ್ಲದೇ
ಇದ್ದ
ವಿಷಯಗಳು
ಈ
ವೆಬ್
ಸರಣಿಯಲ್ಲಿ
ರಿವೀಲ್
ಆಗಬಹುದು
ಎಂಬ
ಕುತೂಹಲ
ಕೆರಳಿದೆ.
ಇನ್ನು
ವೀರಪ್ಪನ್
ಡಾಕ್ಯುಮೆಂಟರಿ
ಎಂದ
ಕೂಡಲೇ
ಕನ್ನಡಿಗರ
ತಲೆಗೆ
ಮೊದಲು
ಬರುವ
ವಿಷಯವೇ
ರಾಜ್ಕುಮಾರ್
ಅವರನ್ನು
ವೀರಪ್ಪನ್
ಅಪಹರಿಸಿದ್ದು.
ಹೌದು,
ವಿವಿಧ
ಬೇಡಿಕೆಗಳನ್ನು
ಈಡೇರಿಸಿಕೊಳ್ಳಲು
ಕಾಡುಗಳ್ಳ
ವೀರಪ್ಪನ್
ನಟ
ಡಾ
ರಾಜ್ಕುಮಾರ್
ಅವರನ್ನು
ಅಪಹರಿಸಿ
ತನ್ನ
ಜತೆಯೇ
108
ದಿನಗಳ
ಕಾಲ
ಕಾಡಿನಲ್ಲಿ
ಇಟ್ಟುಕೊಂಡಿದ್ದ.
ಬಳಿಕ
ಅಣ್ಣಾವ್ರು
ಬಿಡುಗಡೆಗೊಂಡು
ಸುರಕ್ಷಿತವಾಗಿ
ವಾಪಸ್
ಬಂದಿದ್ರು.
ಹೀಗಾಗಿ
ಈ
ಬಾರಿಯ
ವೆಬ್
ಸರಣಿಯಲ್ಲಿ
ಅಣ್ಣಾವ್ರನ್ನು
ಅಪಹರಿಸಿದ್ದರ
ಕುರಿತು
ಯಾವ
ರೀತಿ
ತೋರಿಸಲಿದ್ದಾರೆ
ಎಂಬ
ಕುತೂಹಲ
ಕನ್ನಡ
ಸಿನಿ
ರಸಿಕರಲ್ಲಿ
ಮೂಡಿದ್ದು,
ವೆಬ್
ಸರಣಿಯಲ್ಲಿ
ಯಾವ
ರೀತಿ
ಅಣ್ಣಾವ್ರ
ಭಾಗವನ್ನು
ತೋರಿಸಲಿದ್ದಾರೆ
ಎಂಬುದನ್ನು
ಕಾದು
ನೋಡಬೇಕಿದೆ.
ಇನ್ನು
ಈ
ವೆಬ್
ಸರಣಿ
ಇಂಗ್ಲಿಷ್,
ಹಿಂದಿ,
ತಮಿಳು,
ತೆಲುಗು,
ಕನ್ನಡ
ಹಾಗೂ
ಮಲಯಾಳಂ
ಭಾಷೆಗಳಲ್ಲಿ
ಬಿಡುಗಡೆಗೊಳ್ಳಲಿದೆ.
English summary
Veerappan web series: Netflix announced the release date of Veerappan documentary web series
Sunday, July 30, 2023, 13:16
Story first published: Sunday, July 30, 2023, 13:16 [IST]