Vastu Tips: ಇದು ನಿಮಗೆ ತಿಳಿದಿರಲಿ.. ಮನೆಯ ಹಾಲ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ.. | vastu tips dont keep these things in the hall in kannada

Features

oi-Sunitha B

|

Google Oneindia Kannada News

Vastu Tips In Kannada: ಪ್ರತಿಯೊಬ್ಬರಿಗೂ ಅವರ ಮನೆ ಸ್ವರ್ಗವಾಗಿರುತ್ತದೆ. ಎಲ್ಲಿಗೇ ಹೋದರೂ ಮನೆಯಲ್ಲಿ ಇರುವ ನಿರಾಳ ಭಾವ ಎಲ್ಲೂ ಕಾಣಸಿಗುವುದಿಲ್ಲ. ಅನೇಕ ಜನರು ತಮ್ಮ ಮನೆಯನ್ನು ಸುಂದರವಾಗಿಡಲು ವಿವಿಧ ವಸ್ತುಗಳನ್ನು ಖರೀದಿಸುತ್ತಾರೆ. ಹಾಲ್ ಅಥವಾ ಮುಖ್ಯ ಕೋಣೆ ಇದರ ಪ್ರಮುಖ ಭಾಗವಾಗಿದೆ.

ನಾವು ಮನೆಯನ್ನು ಪ್ರವೇಶಿಸಿದಾಗ ಮೊದಲು ಹಾಲ್ ಅನ್ನು ಪ್ರವೇಶಿಸುತ್ತೇವೆ. ಈ ಕೋಣೆಯಲ್ಲಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೆ. ಇದು ನಾವು ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಪ್ರದೇಶವಾಗಿದೆ. ಹೀಗಾಗಿ ಎಷ್ಟೋ ಜನ ಇದನ್ನು ಸುಂದರವಾಗಿಡಲು ಬಯಸುತ್ತಾರೆ.

vastu tips dont keep these things

ಆದರೆ ಹಾಲ್‌ ಅನ್ನು ಅಲಂಕರಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ಅಂಶಗಳಿವೆ. ವಾಸ್ತು ಪ್ರಕಾರ ಹಾಲ್‌ ಅನ್ನು ಅಲಂಕರಿಸುವಾಗ ಮಾಡುವ ತಪ್ಪುಗಳು ಮನೆಯ ಕಷ್ಟವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಹಾಗಾದರೆ ಆ ತಪ್ಪುಗಳು ಯಾವವು ಎಂದು ತಿಳಿಯೋಣ.

1. ಮನೆಯ ಹಾಲ್ ಯಾವಾಗಲೂ ಸ್ವಚ್ಛವಾಗಿರಬೇಕು ಎಂಬುದನ್ನು ನೆನಪಿಡಿ. ಮುಖ್ಯವಾಗಿ ಹಾಲ್‌ನಲ್ಲಿ ಅನಗತ್ಯ ಪೀಠೋಪಕರಣಗಳು ಮತ್ತು ಬಳಕೆಯಾಗದ/ಅನಗತ್ಯ ವಸ್ತುಗಳನ್ನು ಇಡುವುದನ್ನು ತಪ್ಪಿಸಿ.

Vastu Tips: ನೀವು ದಕ್ಷಿಣ ದಿಕ್ಕಿನ ಮನೆಯಲ್ಲಿದ್ದೀರಾ? ಹೀಗೆ ಮಾಡುವುದರಿಂದ ಮನೆಯಲ್ಲಿ ಇಟ್ಟಿದೆಲ್ಲವೂ ಚಿನ್ನವಾಗಬಹುದು.. Vastu Tips: ನೀವು ದಕ್ಷಿಣ ದಿಕ್ಕಿನ ಮನೆಯಲ್ಲಿದ್ದೀರಾ? ಹೀಗೆ ಮಾಡುವುದರಿಂದ ಮನೆಯಲ್ಲಿ ಇಟ್ಟಿದೆಲ್ಲವೂ ಚಿನ್ನವಾಗಬಹುದು..

2. ಮನೆಯ ಹಾಲ್‌ನಲ್ಲಿ ದುಃಖದ ಫೋಟೋಗಳು ಅಥವಾ ಕಲಾ ವಸ್ತುಗಳು ಇಡುವುದನ್ನು ತಪ್ಪಿಸಿ. ಅಲ್ಲದೆ ಒಡೆದ ಶೋಪೀಸ್, ಕೆಲಸ ಮಾಡದ ವಿದ್ಯುತ್ ವಸ್ತುಗಳು, ಒಡೆದ ಗಾಜು ಇತ್ಯಾದಿಗಳನ್ನು ಇಡಬೇಡಿ. ವಾಸ್ತು ಪ್ರಕಾರ ಇವುಗಳನ್ನು ಹಾಲ್‌ನಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

3. ಮನೆಯ ಹಾಲ್ ಅನ್ನು ಪ್ರಕೃತಿಯ ಸೌಂದರ್ಯವನ್ನು ಪ್ರತಿಬಿಂಬಿಸುವ ವಸ್ತುಗಳಿಂದ ಅಲಂಕರಿಸಬಹುದು. ಆದರೆ ನೀವು ಹಾಲ್ನಲ್ಲಿ ಒಣಗಿದ ಹೂವುಗಳು ಅಥವಾ ಪಾಪಸ್ ಕಳ್ಳಿ ಮುಂತಾದ ಸಸ್ಯಗಳನ್ನು ಇಡುವುದನ್ನು ತಪ್ಪಿಸಬೇಕು. ಏಕೆಂದರೆ ಇವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಬದಲು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಇದರಿಂದ ಮನೆಯಲ್ಲಿ ಹಲವಾರು ಸಮಸ್ಯೆಗಳು ಹೆಚ್ಚಾಗಬಹುದು.

vastu tips dont keep these things

4. ನಿಮಗೆ ಗಿಡಗಳು ಇಷ್ಟವಾಗಿದ್ದರೆ ಮನೆಯ ಹಾಲ್ ನಲ್ಲಿ ಮನಿ ಪ್ಲಾಂಟ್, ಸ್ಪೈಡರ್ ಪ್ಲಾಂಟ್, ಸ್ನೇಕ್ ಪ್ಲಾಂಟ್ ಇತ್ಯಾದಿ ಗಾಳಿಯನ್ನು ಶುದ್ಧೀಕರಿಸುವ ಗಿಡಗಳನ್ನು ಬೆಳೆಸಬಹುದು. ಇವು ಸುಂದರವಾದ ನೋಟವನ್ನು ನೀಡುತ್ತವೆ ಮತ್ತು ಮನೆಯೊಳಗೆ ಶುದ್ಧ ಗಾಳಿಯನ್ನು ಒದಗಿಸುತ್ತವೆ.

5. ನೀವು ಮೀನಿನ ತೊಟ್ಟಿಯನ್ನು ಇರಿಸಲು ಬಯಸಿದರೆ, ಅದನ್ನು ಹಾಲ್ನ ಉತ್ತರ, ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಇಡಬೇಕು. ಇದರಿಂದ ಮನೆಯ ವಾತಾವರಣ ಶಾಂತಿಯುತ ಮತ್ತು ಆಹ್ಲಾದಕರವಾಗಿರುತ್ತದೆ.

6. ನಿಮ್ಮ ಮನೆಯ ಹಾಲ್ ನಲ್ಲಿ ಕಾರಂಜಿ ಇಡುವಷ್ಟು ಜಾಗವಿದ್ದರೆ ಅದನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಮನೆಯಲ್ಲಿ ಸದಾ ನೀರಿನ ಸದ್ದು ಕೇಳಿಸುತ್ತಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಲು ನೆರವಾಗುತ್ತದೆ.

7. ವಾಸ್ತು ಪ್ರಕಾರ, ಮನೆಯ ಹಾಲ್ ಯಾವಾಗಲೂ ಚೌಕ ಮತ್ತು ಆಯತಾಕಾರದ ಆಕಾರದಲ್ಲಿರಬೇಕು. ಇದರಿಂದ ಮನೆಯು ಧನಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಆದರೆ ನಿಮ್ಮ ಮನೆಯ ಹಾಲ್ ಹಾಗಲ್ಲದಿದ್ದರೆ ಹಾಲ್ ನಲ್ಲಿ ಇಂಡೋರ್ ಗಿಡಗಳನ್ನು ಬೆಳೆಸಿ.

8. ಮನೆಯ ಹಾಲ್ ಅನ್ನು ಹೂವಿನಿಂದ ಅಲಂಕರಿಸುವುದರಿಂದ ಒಳ್ಳೆಯ ಲುಕ್ ಸಿಗುವುದಲ್ಲದೆ ಧನಾತ್ಮಕ ಶಕ್ತಿಯೂ ಹೆಚ್ಚುತ್ತದೆ. ಒಣಗಿದ ಹೂವುಗಳ ಬದಲು ನಿಜವಾದ ಹೂವುಗಳಿಂದ ಅಲಂಕರಿಸಿದರೆ, ಮನೆಯಲ್ಲಿ ಉತ್ತಮ ವಾಸನೆ ಇರುತ್ತದೆ. ಜೊತೆಗೆ ಮನೆಯಲ್ಲಿ ಧನಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಹಾಗೂ ಮನೆ ಸಮೃದ್ಧವಾಗಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

  • ಬೆಂಗಳೂರಿನ ಮನೆ ಬಾಡಿಗೆ ದರಗಳಲ್ಲಿ ಶೇ 25ರಷ್ಟು ಏರಿಕೆ: ಯಾವ ಏರಿಯಾದಲ್ಲಿ ಎಷ್ಟು ತಿಳಿಯಿರಿ- ಅಂಕಿಅಂಶ, ವಿವರ
  • ಕೇವಲ 270 ರೂಪಾಯಿಗೆ ಮೂರು ಮನೆಗಳನ್ನು ಖರೀದಿಸಿದ ಇಟಲಿಯ ಮಹಿಳೆ, ಮುಂದೆ ಮಾಡಿದ್ದೇನು?
  • Aravind Kejriwal Home Renovation: ಬಿಜೆಪಿ ಆರೋಪ ಖಂಡಿಸಿದ ಎಎಪಿ ವಿಡಿಯೋ ಪೋಸ್ಟ್ ಮಾಡಿ ತಿರುಗೇಟು
  • Bengaluru Rent: 2BHK ಗೆ ₹28 ಸಾವಿರ: ಬೆಂಗಳೂರಿನಲ್ಲಿ ಸರಾಸರಿ ಮಾಸಿಕ ಬಾಡಿಗೆ ಶೇ 24 ರಷ್ಟು ಹೆಚ್ಚಳ- ಅಂಕಿಅಂಶ, ವಿವರ
  • “ಇದು ಭಾರತದ ಜನರು ನನಗೆ ಕೊಟ್ಟದ್ದು..” ದೆಹಲಿ ಬಂಗಲೆ ಖಾಲಿ ಮಾಡುವಾಗ ಭಾವುಕರಾದ ರಾಹುಲ್ ಗಾಂಧಿ
  • ಬೆಂಗಳೂರಿನಲ್ಲಿ ದಿನ ದಿನಕ್ಕೆ ಗಗನಕ್ಕೇರುತ್ತಿದೆ ಮನೆ, ಪಿಜಿ ಬಾಡಿಗೆ: ಹೈರಾಣಾದ ಬಾಡಿಗೆದಾರರು!
  • Bengaluru: ಬಾಡಿಗೆ ಮನೆಗಳಿಗೆ ಹೆಚ್ಚಿದ ಬೇಡಿಕೆ, ಕಡಿಮೆಯಾದ ಪೂರೈಕೆ, ಮನೆ ಮಾಲೀಕರ ದುರಾಸೆ- ಸಂಕಷ್ಟದಲ್ಲಿ ಬಾಡಿಗೆದಾರರು
  • ಕಾಂಗ್ರೆಸ್‌ ಪ್ರಚೋದನೆ ನೀಡಿದೆ, ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ: ಸಿಎಂ ಬೊಮ್ಮಾಯಿ
  • ಬೆಂಗಳೂರು: ಅರ್ಹ ಫಲಾನುಭವಿಗಳಿಗೆ 96 ಮನೆ ವಿತರಿಸಿದ ಬಿಬಿಎಂಪಿ
  • ಮಧ್ಯಪ್ರದೇಶದಲ್ಲಿ ಬುಲ್ಡೋಜರ್‌ನಿಂದ ಅತ್ಯಾಚಾರ ಆರೋಪಿಯ ಮನೆ ನೆಲಸಮಗೊಳಿಸಿದ ಮಹಿಳಾ ಪೊಲೀಸರು
  • ಬೆಂಗಳೂರಿನಲ್ಲಿ ಗಗನಕ್ಕೇರಿದ ಮನೆ ಬಾಡಿಗೆ: ಟೆಕ್ಕಿಗಳಿಗೆ ಎದುರಾದ ಸಂಕಷ್ಟ- ಅಂಕಿಅಂಶ, ವರದಿ, ವಿವರ ತಿಳಿಯಿರಿ
  • ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ತಿಂಗಳ ಮನೆ ಬಾಡಿಗೆ ಶೇ 23ರಷ್ಟು ಹೆಚ್ಚಳ- ಅಂಕಿಅಂಶ, ವರದಿ, ವಿವರ

English summary

Do not keep these things in the hall.. otherwise money problems will increase. Learn about those things in Kannada.

Story first published: Thursday, June 29, 2023, 10:10 [IST]

Source link