Vande Bharat Express: ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಮಹತ್ವದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ! | Vande Bharat new route will be inaugurate by PM Modi

India

oi-Malathesha M

|

Google Oneindia Kannada News

ನವದೆಹಲಿ: ಸಾರಿಗೆ ವಿಚಾರದಲ್ಲಿ ಭಾರತ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ರೈಲ್ವೆ ಸಂಪರ್ಕದಲ್ಲಿ ಕ್ರಾಂತಿ ಮಾಡುತ್ತಿದೆ. ಹೀಗೆ ಅಭಿವೃದ್ಧಿ ಕಡೆಗೆ ದಾಪುಗಾಲು ಇಡುತ್ತಿರುವ ಭಾರತೀಯ ರೈಲ್ವೆ ಇಲಾಖೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮೂಲಕ ಸಾಧನೆ ಮಾಡಿದೆ. ಕೆಲ ದಿನಗಳ ಹಿಂದೆ ವಂದೇ ಭಾರತ್ ಹೊಸ ಮಾರ್ಗಗಳಿಗೆ ಪ್ರಧಾನಿ ಚಾಲನೆ ನೀಡಿದ್ದರು. ಈಗ ಮತ್ತೊಂದು ಮಹತ್ವದ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ತೋರಿಸಲಿದ್ದಾರೆ ಪಿಎಂ ಮೋದಿ.

ಭಾರತದ ರೈಲ್ವೆ ಇಲಾಖೆಗೆ ದೊಡ್ಡ ಹೆಸರಿದ್ದು, ಹೊಸ ದಾಖಲೆ ಸೃಷ್ಟಿಸುತ್ತಿದೆ. ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ಜಗತ್ತಿನಾದ್ಯಂತ ಹೆಸರು ಗಳಿಸುತ್ತಿದೆ, ವಿದೇಶಿಗರನ್ನ ಕೂಡ ತನ್ನತ್ತ ಸೆಳೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ ಸಿಕ್ಕಿದ್ದು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮತ್ತೊಂದು ಮಹತ್ವದ ಮಾರ್ಗ ಉದ್ಘಾಟನೆಯಾಗಲಿದೆ. ಈ ಮಾರ್ಗ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ ಆಗಲಿದ್ದು, ಜುಲೈ 7ರಂದು ಹೊಸ ಮಾರ್ಗದಲ್ಲಿ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಓಡಾಟಕ್ಕೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ. ಹಾಗಾದರೆ ಯಾವುದು ಆ ಮಾರ್ಗ? ಸಂಪೂರ್ಣ ಮಾಹಿತಿ ಇಲ್ಲಿದೆ.

Vande Bharat new route will be inaugurate by PM Modi

ವಿಜಯವಾಡದಲ್ಲಿ ‘ವಂದೇ ಭಾರತ್ ಎಕ್ಸ್‌ಪ್ರೆಸ್’

ಅಂದಹಾಗೆ ಕಡಲ ನಗರಿ ಎಂಬ ಬಿರುದು ಪಡೆದಿರುವ ಆಂಧ್ರಪ್ರದೇಶದ ವಿಜಯವಾಡದ ಮೂಲಕ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸಲಿದೆ. ವಿಜಯವಾಡ ಮೂಲಕ ಚೆನೈಗೆ ಈ ರೈಲು ತಲುಪಲಿದೆ. ಜುಲೈ 7ರಂದು ಹೊಸ ಮಾರ್ಗದಲ್ಲಿ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಓಡಾಟಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ವರ್ಚ್ಯುಯಲ್ ಸಮಾರಂಭದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಹಾಜರಾಗಲಿದ್ದು, ಆಂಧ್ರ ಪ್ರದೇಶದ ಜನರಿಗೆ ಸಿಹಿಸುದ್ದಿ ನೀಡಲಿದ್ದಾರೆ. ಈಗಾಗಲೇ ದೇಶದ ಸಾಕಷ್ಟು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಹವಾ ಸೃಷ್ಟಿಸಿವೆ.

ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 2.74 ಲಕ್ಷ ಉದ್ಯೋಗ ಖಾಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 2.74 ಲಕ್ಷ ಉದ್ಯೋಗ ಖಾಲಿ

ಹೊಸ ಮಾರ್ಗದಲ್ಲಿ ಎಷ್ಟು ಗಂಟೆ ಪ್ರಯಾಣ

ಆಂಧ್ರಪ್ರದೇಶದ ವಿಜಯವಾಡ ಹಾಗೂ ತಮಿಳುನಾಡು ರಾಜಧಾನಿ ಚೆನ್ನೈ ನಡುವೆ 430 ಕಿಲೋಮೀಟರ್ ಅಂತರವಿದೆ. ಈಗ ಲಭ್ಯವಿರುವ ಅತಿ ವೇಗದ ರೈಲಲ್ಲಿ ಪ್ರಯಾಣಿಸಿದರೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತಲುಪಲು ಕನಿಷ್ಠ 6 ಗಂಟೆಗಳ ಸಮಯ ಬೇಕು. ಆದರೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಈ ಸಮಯವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸುವ ನಿರೀಕ್ಷೆ ಇದೆ. ಆಂಧ್ರದಲ್ಲಿ ಈಗಾಗಲೇ ಹಲವು ಮಾರ್ಗಗಳಿಗೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಲಭ್ಯವಿದೆ. ಆದರೆ ವಿಜಯವಾಡದಲ್ಲಿ ಇದೇ ಮೊದಲ ರೈಲು. ಹೀಗಾಗಿ ಜನರು ಕೂಡ ಈ ರೈಲಿನಲ್ಲಿ ಪ್ರಯಾಣಿಸಲು ಕುತೂಹಲದಿಂದ ಕಾಯುತ್ತಿದ್ದು, ಜುಲೈ 7ರಂದು ಪ್ರಧಾನಿ ಈ ರೈಲಿನ ಓಡಾಟಕ್ಕೆ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ. ಜುಲೈ 8ರಿಂದ ಪ್ರಯಾಣಿಕರಿಗೆ ಹೊಸ ಮಾರ್ಗದ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಲಭ್ಯವಾಗಲಿದೆ.

Vande Bharat new route will be inaugurate by PM Modi

‘ವಂದೇ ಭಾರತ್’ ಬಳಿಕ ಬುಲೆಟ್ ರೈಲು!

ಅಹಮದಾಬಾದ್ & ಮುಂಬೈ ನಡುವೆ ದೇಶದ ಮೊದಲ ಬುಲೆಟ್ ರೈಲು ಓಡಾಡಲಿದೆ. ಹೈ-ಸ್ಪೀಡ್ ರೈಲು ಟ್ರ್ಯಾಕ್‌ನಲ್ಲಿ ಪ್ರತಿ ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಈ ಬುಲೆಟ್ ರೈಲು ಓಡಿಸುವ ಗುರಿಯನ್ನ ಭಾರತೀಯ ರೈಲ್ವೆ ಇಲಾಖೆ ಹೊಂದಿದೆ. ಸೂರತ್-ಬಿಲಿಮೊರಾ ಮಧ್ಯೆ 508 ಕಿಲೋ ಮೀಟರ್ ಅಂತರ ಇದೆ. 2 ನಿಲ್ದಾಣಗಳ ನಡುವೆ 12 ನಿಲ್ದಾಣಗಳಲ್ಲಿ ಭಾರತದ ಮೊದಲ ಬುಲೆಟ್ ರೈಲು ನಿಲ್ಲುತ್ತದೆ. 2 ನಗರಗಳ ನಡುವಿನ 6 ಗಂಟೆ ಪ್ರಯಾಣವನ್ನ 3 ಗಂಟೆ ಕಡಿಮೆ ಮಾಡಲಿದೆ ಬುಲೆಟ್ ರೈಲು. ಯೋಜನೆಗೆ ಅಂದಾಜು 1.1 ಲಕ್ಷ ಕೋಟಿ ರೂಪಾಯಿ ಖರ್ಚಾಗಲಿದೆ ಎನ್ನಲಾಗಿತ್ತು. ಇನ್ನೇನು 3 ವರ್ಷದಲ್ಲಿ ಅಂದ್ರೆ 2026ರಲ್ಲಿ ಬುಲೆಟ್ ರೈಲು ತನ್ನ ಓಡಾಟವನ್ನ ಆರಂಭಿಸಲಿದೆ. ಈ ಮೂಲಕ ವಂದೇ ಭಾರತ್ ರೀತಿ ಬುಲೆಟ್ ರೈಲು ಕೂಡ ಹವಾ ಸೃಷ್ಟಿಸಲಿದೆ.

English summary

Vande Bharat new route will be inaugurate by PM Modi

Story first published: Tuesday, July 4, 2023, 18:16 [IST]

Source link