Vande Bharat express; ಬೆಂಗಳೂರು-ಧಾರವಾಡ ದರ ಪಟ್ಟಿ | Bengaluru Dharwad Vande Bharat Express Stop Fare And Schedule

Travel

oi-Gururaj S

|

Google Oneindia Kannada News

ಬೆಂಗಳೂರು, ಜೂನ್ 19; ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಭಾರತೀಯ ರೈಲ್ವೆಯ ಮೊದಲ ಸೆಮಿ ಹೈ ಸ್ಪೀಡ್ ರೈಲು ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸಲಿದೆ. ಸೋಮವಾರ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.

ಬೆಂಗಳೂರು ಮತ್ತು ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪ್ರಾಯೋಗಿಕ ಸಂಚಾರ ಸೋಮವಾರ ಆರಂಭವಾಗಿದೆ. ಜೂನ್ 26ರಂದು ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುವ ನಿರೀಕ್ಷೆ ಇದೆ.

Vande Bharat Express: ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ!Vande Bharat Express: ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ!

Bengaluru Dharwad Vande Bharat Express Stop Fare And Schedule

ಒಟ್ಟು ಎಂಟು ಬೋಗಿಯನ್ನು ಹೊಂದಿರುವ ರೈಲು ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಮೊದಲ ರೈಲು ಮೈಸೂರು ಮತ್ತು ಚೆನ್ನೈ ವಯಾ ಬೆಂಗಳೂರು 2022ರ ನವೆಂಬರ್‌ನಿಂದ ಸಂಚಾರ ನಡೆಸುತ್ತಿದೆ. ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ರೈಲು ಸೇವೆಯಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

Vande Bharat; ಮುಂದಿನ ತಿಂಗಳು ಬೆಂಗಳೂರು-ಧಾರವಾಡ ರೈಲು ಸಂಚಾರ Vande Bharat; ಮುಂದಿನ ತಿಂಗಳು ಬೆಂಗಳೂರು-ಧಾರವಾಡ ರೈಲು ಸಂಚಾರ

ಪ್ರಯಾಣ ದರದ ಮಾಹಿತಿ; ಬೆಂಗಳೂರು ಮತ್ತು ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲಿನ ಸಮಯ ಮತ್ತು ದರಪಟ್ಟಿಯನ್ನು ರೈಲ್ವೆ ಇಲಾಖೆ ಅಂತಿಮವಾಗಿ ಇನ್ನೂ ಪ್ರಕಟಿಸಿಲ್ಲ. ಆದರೆ ತಾತ್ಕಾಲಿಕ ವೇಳಾಪಟ್ಟಿ, ದರ ಪಟ್ಟಿಗಳು ಲಭ್ಯವಾಗಿವೆ.

 Vande Bharat Express: ವಂದೇ ಭಾರತ್ ಪ್ರಯಾಣಿಕರಿಗೆ ಉಚಿತ ಸ್ನಾನದ ಆಫರ್! ವಿಡಿಯೋ ವೈರಲ್ Vande Bharat Express: ವಂದೇ ಭಾರತ್ ಪ್ರಯಾಣಿಕರಿಗೆ ಉಚಿತ ಸ್ನಾನದ ಆಫರ್! ವಿಡಿಯೋ ವೈರಲ್

ಬೆಂಗಳೂರು-ಧಾರವಾಡ ಏಕಮುಖ ಸಂಚಾರಕ್ಕೆ 1205 ರೂ. ಮತ್ತು ಎಸಿ ಚೇರ್‌ ಕಾರ್ ಕ್ಲಾಸ್‌ನ ದರ 2395 ರೂ. ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ರೈಲ್ವೆ ಇಲಾಖೆ ಅಧಿಕೃತವಾಗಿ ಇನ್ನೂ ದರಗಳನ್ನು ಘೋಷಣೆ ಮಾಡಿಲ್ಲ. ರೈಲು ಸಂಚಾರದ ದಿನಾಂಕ ಅಂತಿಮವಾದ ಬಳಿಕ ದರಪಟ್ಟಿ ಬಿಡುಗಡೆಯಾಗಲಿದೆ.

ಈಗ ಲಭ್ಯವಾಗಿರುವ ವೇಳಾಪಟ್ಟಿಯ ಪ್ರಕಾರ ರೈಲು ಬೆಂಗಳೂರುನ ಕೆಎಸ್ಆರ್ ರೈಲು ನಿಲ್ದಾಣ (ಮೆಜೆಸ್ಟಿಕ್‌)ದಿಂದ ಬೆಳಗ್ಗೆ 5.45ಕ್ಕೆ ಹೊರಟು, 9.58ಕ್ಕೆ ದಾವಣಗೆರೆ, 12.10ಕ್ಕೆ ಹುಬ್ಬಳ್ಳಿ, 12.40ಕ್ಕೆ ಧಾರವಾಡಕ್ಕೆ ತಲುಪಲಿದೆ.

ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಡುವ ಬೆಂಗಳೂರು ಕಡೆಯ ವಂದೇ ಭಾರತ್ ರೈಲು 1.35ಕ್ಕೆ ಹುಬ್ಬಳ್ಳಿ, 3.48ಕ್ಕೆ ಧಾರವಾಡ ಮತ್ತು ರಾತ್ರಿ 7.45ಕ್ಕೆ ಯಶವಂತಪುರ ಜಂಕ್ಷನ್ ಹಾಗೂ 8.10ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.

ನಿಲ್ದಾಣಗಳು; ಬೆಂಗಳೂರು ಮತ್ತು ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿಲ್ದಾಣಗಳು ಅಂತಿಮವಾಗಿವೆ. ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ನಿಲುಗಡೆ ಹೊಂದಿದೆ. ಬಳಿಕ ರೈಲು ಧಾರವಾಡಕ್ಕೆ ತೆರಳಲಿದೆ. ಧಾರವಾಡದಿಂದ ಹೊರಡುವ ರೈಲು ಹುಬ್ಬಳ್ಳಿ, ದಾವಣಗೆರೆ, ಯಶವಂತಪುರದಲ್ಲಿ ನಿಲುಗಡೆ ಹೊಂದಿದೆ. ಬಳಿಕ ಕೆಎಸ್ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

English summary

Bengaluru Dharwad via Hubballi Vande Bharat express train trial run on Monday. Here are the details of stop, fare and schedule.

Source link