Vande Bharat Express: ಕರ್ನಾಟಕದ ಈ ಮಾರ್ಗವೂ ಸೇರಿ ಐದು ಹೊಸ ವಂದೇ ಭಾರತ್ ರೈಲಿಗೆ ಪ್ರಧಾನಿ ಚಾಲನೆ- ಯಾವುವು? ವಿವರ ತಿಳಿಯಿರಿ | Vande Bharat Express: PM Modi launches five new trains in India- Know the details

India

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 26: ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ದಿನ ಐದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಅವರು ಮಂಗಳವಾರ ಈ ಹೊಸ ರೈಲುಗಳಿಗೆ ವಿಡಿಯೊ ಕಾನ್ಫಿರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶದಲ್ಲಿ ಎರಡು ರೈಲುಗಳು, ಕರ್ನಾಟಕದಲ್ಲಿ ಒಂದು, ಬಿಹಾರದಲ್ಲಿ ಒಂದು ಮತ್ತು ಮುಂಬೈ-ಗೋವಾ ನಡುವೆ ಒಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಐದು ಹೊಸ ರೈಲುಗಳು ತಮ್ಮ ಸಂಚಾರವನ್ನು ಆರಂಭಿಸಿದರೆ, ಭಾರತದಲ್ಲಿನ ಒಟ್ಟು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆ 23ಕ್ಕೆ ತಲುಪಲಿದೆ.

ಪಾಟ್ನಾ- ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂರನೇ ಬಾರಿ ಪ್ರಯೋಗಿಕ ಸಂಚಾರ ಪಾಟ್ನಾ- ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂರನೇ ಬಾರಿ ಪ್ರಯೋಗಿಕ ಸಂಚಾರ

ಉದ್ಘಾಟನೆಯ ಕುರಿತು ರೈಲ್ವೆ ಸಚಿವಾಲಯವು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ, ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದೇ ದಿನದಲ್ಲಿ ಐದು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳನ್ನು ಪ್ರಾರಂಭಿಸುವ ಸುದ್ದಿಯನ್ನು ಹಂಚಿಕೊಂಡಿದೆ.

Vande Bharat Express

ಮಂಗಳವಾರ ಪ್ರಾರಂಭವಾಗಲಿರುವ ರೈಲುಗಳ ಬಗ್ಗೆ ತಿಳಿಯಿರಿ:

ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್

ಕರ್ನಾಟಕದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳವಾರ ಪ್ರಾರಂಭವಾಗಲಿದೆ. ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಧಾರವಾಡಕ್ಕೆ ಸಂಚರಿಸಲಿದೆ. ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರು-ಚೆನ್ನೈ ಮಾರ್ಗವಾಗಿತ್ತು. ಇದಲ್ಲದೆ, ಇದು ದಕ್ಷಿಣ ಭಾರತದ ಮೊದಲ ಸೆಮಿ-ಹೈ-ಸ್ಪೀಡ್ ರೈಲಾಗಿತ್ತು. ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಡುವೆ ಸುಮಾರು 490 ಕಿಲೋಮೀಟರ್ ದೂರವನ್ನು 6 ಗಂಟೆ 13 ನಿಮಿಷಗಳಲ್ಲಿ ಕ್ರಮಿಸಲಿದೆ. ರೈಲು ಬೆಂಗಳೂರಿನಿಂದ ಬೆಳಿಗ್ಗೆ 5:45 ಕ್ಕೆ ಹೊರಟು 11:58 ಕ್ಕೆ ಧಾರವಾಡ ತಲುಪುತ್ತದೆ.

Vande Bharat Express

ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್

ಮಂಗಳವಾರ, ಮಧ್ಯಪ್ರದೇಶದಲ್ಲಿ ಎರಡು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಉದ್ಘಾಟನೆ ಸಮಾರಂಭ ನಡೆಯಲಿದೆ. ಮೊದಲನೆಯದು, ಭೋಪಾಲ್- ಜಬಲ್‌ಪುರ ನಡುವಿನ ಸಂಚರಿಸಲಿದೆ. ಎರಡನೇ ರೈಲು ಭೋಪಾಲ್-ಇಂದೋರ್ ನಡುವೆ ಸಂಚರಿಸಲಿದ್ದು, ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲಿವೆ. ನವದೆಹಲಿ-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಈ ಹಿಂದೆ ಪ್ರಾರಂಭಿಸಲಾಯಿತು.

Vande Bharat Express

ಭೋಪಾಲ್-ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್

ಪ್ರಧಾನಿ ಮೋದಿ ಉದ್ಘಾಟಿಸಲಿರುವ ಮತ್ತೊಂದು ರೈಲು ಭೋಪಾಲ್-ಜಬಲ್ಪುರ ಮಾರ್ಗದಲ್ಲಿ ಸಂಚರಿಸಲಿದೆ. ಹಲವಾರು ಇತರ ಎಕ್ಸ್‌ಪ್ರೆಸ್ ಮತ್ತು ಸೂಪರ್-ಫಾಸ್ಟ್ ರೈಲುಗಳು ಸಹ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ, ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಯೊಂದಿಗೆ ಪ್ರಯಾಣದ ಸಮಯವು ಅಗಾಧವಾಗಿ ಕಡಿಮೆಯಾಗುತ್ತದೆ. ದೆಹಲಿ-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್, ಭಾರತದ ಅತ್ಯಂತ ವೇಗದ ವಂದೇ ಭಾರತ್ ರೈಲುಗಳಲ್ಲಿ ಒಂದಾಗಿದೆ. ಆಗ್ರಾದ ಸುತ್ತಮುತ್ತಲಿನ ಕೆಲವು ವಿಭಾಗಗಳಲ್ಲಿ ಗರಿಷ್ಠ 160 ಕಿಮೀ ವೇಗವನ್ನು ಪಡೆಯುತ್ತದೆ.

Vande Bharat Express

ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್

ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಉದ್ಘಾಟನೆಯು ಜೂನ್ 3, 2023 ರಂದು ನಡೆಯಬೇಕಿತ್ತು. ಒಡಿಶಾದ ಬಾಲಸೋರ್‌ನಲ್ಲಿ ರೈಲು ಅಪಘಾತದ ಹಿನ್ನೆಲೆಯಲ್ಲಿ ಅದರ ಉದ್ಘಾಟನೆ ವಿಳಂಬವಾಯಿತು. ಹೊಸ ಹೈಸ್ಪೀಡ್ ರೈಲು ಪ್ರಯಾಣದ ಸಮಯವನ್ನು ಒಂದು ಗಂಟೆಗಿಂತ ಕಡಿಮೆ ಮಾಡುತ್ತದೆ.

Vande Bharat Express

ಪಾಟ್ನಾ-ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್

ಹೊಸದಾಗಿ ಪ್ರಾರಂಭವಾಗಲಿರುವ ಐದು ರೈಲುಗಳಲ್ಲಿ ಒಂದು ಬಿಹಾರ ಮತ್ತು ಜಾರ್ಕಾಂಡ್‌ನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾಗಿದೆ. ಭಾರತೀಯ ರೈಲ್ವೆಯು ಪಾಟ್ನಾ ಮತ್ತು ರಾಂಚಿ ಮಾರ್ಗಗಳಲ್ಲಿ ಸೆಮಿ-ಹೈ-ಸ್ಪೀಡ್ ರೈಲನ್ನು ಪ್ರಾರಂಭಿಸಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಆರು ಗಂಟೆಗಳಲ್ಲಿ ಪ್ರಯಾಣವನ್ನು ಪೂರೈಸುವ ನಿರೀಕ್ಷೆಯಿದೆ. ತಟಿಸಿಲ್ವಾಯಿ, ಬಿಐಟಿ ಮೆಸ್ರಾ, ಬರ್ಕಾಕಾನಾ ಮತ್ತು ಹಜಾರಿಬಾಗ್ ಮೂಲಕ ಹಾದುಹೋಗುತ್ತದೆ. ಈ ಮಾರ್ಗವು ಭಾರತೀಯ ರೈಲ್ವೇಯ ಅತ್ಯಂತ ದಟ್ಟವಾದ ಮಾರ್ಗಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ.

English summary

Vande Bharat Express: Prime Minister Narendra Modi will launch five new Vande Bharat Express trains on a single day

Story first published: Monday, June 26, 2023, 15:11 [IST]

Source link