Davanagere
oi-Yogaraja G H
ದಾವಣಗೆರೆ, ಜೂನ್, 02: ಶನಿವಾರ (ಜೂನ್ 01) ಕಿಡಿಗೇಡಿಗಳು ವೇಗವಾಗಿ ಚಲಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ ಘಟನೆ ದಾವಣಗೆರೆಯ ಹರಿಹರ ರಸ್ತೆಯಲ್ಲಿರುವ ಜಿಎಂಐಟಿ ಕಾಲೇಜು ಹಿಂಭಾಗ ನಡೆದಿದೆ. ಪರಿಣಾಮ ವಂದೇ ಭಾರತ್ ರೈಲಿನ ಕಿಟಕಿ ಗಾಜು ಜಖಂಗೊಂಡಿದೆ. ಸದ್ಯ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ದಾವಣಗೆರೆ ಹೊರವಯಲದಲ್ಲಿರುವ ಜಿಎಂಐಟಿ ಕಾಲೇಜಿನ ಹಿಂಭಾಗ ಶನಿವಾರ ಕೆಲವು ಕಿಡಿಗೇಡಿಗಳು ಚಲಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದು, ಇದರ ಪರಿಣಾಮ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಿಟಕಿಯ ಗಾಜು ಜಖಂಗೊಂಡಿದೆ. ಈ ರೈಲು ಧಾರವಾಡದಿಂದ ಬೆಂಗಳೂರು ಕಡೆಗೆ ಸಂಚರಿಸುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ನೈಋತ್ಯ ರೈಲ್ವೆಯ ಅಧಿಕಾರಿಗಳು ಈ ಘಟನೆಯನ್ನು ಆರ್‌ಪಿಎಫ್ ಸಿಬ್ಬಂದಿಗೆ ವರದಿ ಮಾಡಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ. ದಾವಣಗೆರೆಯ ಜಿಎಂಐಟಿ ಕಾಲೇಜು ಬಳಿ ಘಟನೆ ನಡೆದಿದ್ದು, ಸಿ4 ಕೋಚ್‌ನ ಕಿಟಕಿಯ ಹಲಗೆಗೆ ಹಾನಿಯಾಗಿದೆ ಎಂದು ಎಸ್‌ಡಬ್ಲ್ಯೂಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಲ್ಲದೆ ಕೋಚ್‌ಗೆ ಕಲ್ಲುಗಳು ತೂರಿಲ್ಲ. ಮತ್ತು ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅವರು ಹೇಳಿದರು. ಈಗಾಗಲೇ ಘಟನೆ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
English summary
Stone pelting on Dharwad-Bengaluru Vande Bharat Express train near Davangere’s GMIT Collage,
Story first published: Sunday, July 2, 2023, 11:49 [IST]