Hubballi
oi-Gururaj S
ಬೆಂಗಳೂರು, ಜೂನ್ 30: ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಸಿಕ್ಕಿದೆ. ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಆದರೆ ಹುಬ್ಬಳ್ಳಿ-ಕುಂದಾನಗರಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ.
ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (NWKRTC) ಸಂಸ್ಥೆ ಹುಬ್ಬಳ್ಳಿ- ಬೆಳಗಾವಿ ಸಂಪರ್ಕಿಸಲು ಐಷಾರಾಮಿ ಬಸ್ ಓಡಿಸಲಿದೆ. ಅದೂ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ಬಸ್ ಓಡಿಸಲಾಗುತ್ತಿದೆ.
Vande Bharat Express; ಬೆಂಗಳೂರು-ದಾವಣಗೆರೆ ವೇಳಾಪಟ್ಟಿ, ದರದ ವಿವರ
ಜೂನ್ 30ರಿಂದ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಬೆಳಗಾವಿ ತನಕ ಮಲ್ಪಿ ಆಕ್ಸೆಲ್ ಐಷಾರಾಮಿ ಬಸ್ ಸಂಚಾರ ನಡೆಸಲಿದೆ. ವಂದೇ ಭಾರತ್ ರೈಲಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವ ಬೆಳಗಾವಿಗೆ ಹೋಗುವ ಪ್ರಯಾಣಿಕರು ಬಸ್ ಮೂಲಕ ಸಂಚಾರ ನಡೆಸಬಹುದಾಗಿದೆ.
Vande Bharat; ಬೆಂಗಳೂರು-ಧಾರವಾಡ ರೈಲಿಗೆ 6 ನಿಲುಗಡೆ ಕೊಡಿ
ವೇಳಾಪಟ್ಟಿ; ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ಬೆಳಗಾವಿ ನಡುವಿನ ಐಷಾರಾಮಿ ಬಸ್ ಸೇವೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಹುಬ್ಬಳ್ಳಿ ರೈಲು ನಿಲ್ದಾಣದಿಂದ 12.30ಕ್ಕೆ ಹೊರಡುವ ಬಸ್ 2.20ಕ್ಕೆ ಬೆಳಗಾವಿಗೆ ತಲುಪಲಿದೆ. ಬೆಳಗಾವಿಯಿಂದ 11.15ಕ್ಕೆ ಹೊರಡುವ ಬಸ್, 1.15ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಈ ಮೂಲಕ ಬಸ್ ಹುಬ್ಬಳ್ಳಿ ರೈಲು ನಿಲ್ದಾಣ ಮತ್ತು ಬೆಳಗಾವಿ ಸಂಪರ್ಕಿಸಲಿದೆ.
Vande Bharat Express: ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಮೊದಲ ಬಲಿ
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನ ಸಂಚಾರ ನಡೆಸಲಿದೆ. ರೈಲು ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆ ಹೊಂದಿದೆ.
ವಂದೇ ಭಾರತ್ ಪ್ರಯಾಣಿಕರಿಗಾಗಿಯೇ ಒಟ್ಟು 2 ಬಸ್‌ಗಳನ್ನು ಓಡಿಸಲಾಗುತ್ತಿದೆ. ಒಂದು ಬಸ್ 11.15ಕ್ಕೆ ಬೆಳಗಾವಿಯಿಂದ ಹೊರಟು 1.15ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ 1.40ಕ್ಕೆ ಬೆಂಗಳೂರಿಗೆ ಹೊರಡಲಿದೆ. ಬೆಳಗ್ಗೆ ಬೆಂಗಳೂರಿನಿಂದ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹುಬ್ಭಳ್ಳಿಗೆ ಬರುವ ಜನರು ಬೆಳಗಾವಿಗೆ ಐಷಾರಾಮಿ ಬಸ್ ಮೂಲಕ ಸಾಗಬಹುದು.
English summary
North Western Karnataka Road Transport Corporation (NWKRTC) will run multi axle Volvo bus to connect Hubballi and Belagavi passengers who come to Hubballi by Vande bharat express train can travel in bus. Here are the schedule.