Vana Mahotsav: ಕರ್ನಾಟಕದ ಹಸಿರು ಹೆಚ್ಚಿಸಲು 5 ಕೋಟಿ ಸಸಿ ನೆಡಲು ಖಂಡ್ರೆ ಯೋಜನೆ | Van Mahotsav: 5 Cr Sapling Will Plant For Iincrease Greenery To 33%: Eshwar Khandre

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 23: ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಹಾಲಿ ಇರುವ ಹಸಿರಿನ ಪ್ರಮಾಣವನ್ನು ಹೆಚ್ಚಿಸಲು ಅಧ್ಯತೆ ನೀಡುತ್ತಿದೆ. ಈ ಸಂಬಂಧ ರೂಪಿಸಿರುವ ಯೋಜನೆಗೆ ವಿವಿಧ ಇಲಾಖೆಗಳು ಕೈಜೋಡಿವೆ.

ಕರ್ನಾಟಕದ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದಲ್ಲಿ ಹಾಲಿ ಇರುವ ಶೇಕಡಾ 20.19 ಹಸಿರಿನ ಪ್ರಮಾಣವನ್ನು ಶೇಡಕಾ 33 ಕ್ಕೆ ಏರಿಸಲು ಆದ್ಯತೆ ನೀಡುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 Van Mahotsav: 5 Cr Sapling Will Plant For Iincrease Greenery To 33%: Eshwar Khandre

ಸಚಿವರ ಈ ಪ್ರಯತ್ನದ ಭಾಗವಾಗಿ, ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಐದು ಕೋಟಿ ಸಸಿಗಳನ್ನು ನೆಡಲು ಯೋಜನೆ ರೂಪಿಸಿದ್ದಾರೆ. ಈ ಸಸಿಗಳನ್ನು ಮೇಲ್ವಿಚಾರಣೆಗಾಗಿ ಜಿಯೋ ಟ್ಯಾಗ್ ವ್ಯವಸ್ಥೆ ಅಳವಡಿಸಲಾಗುತ್ತದೆ.

ಕರ್ನಾಟಕದಲ್ಲಿನ ಹಸಿರು (ಹಸಿರು ಹೊದಿಕೆ) ಹೆಚ್ಚಳಕ್ಕೆ ಆದ್ಯತೆ ನೀಡುವ ಮಹತ್ವವನ್ನು ಸಚಿವ ಖಂಡ್ರೆ ಅವರು ಅಧಿಕಾರಿಗಳಿಗೆ ಒತ್ತಿ ಹೇಳಿದ್ದಾರೆ. ನೆಡಲಿರುವ ಉದ್ದೇಶಿತ ಅಷ್ಟು ಸಸಿಗಳನ್ನು ನೋಡಿಕೊಳ್ಳಲಾಗುವುದು ಮತ್ತು ಅವುಗಳ ಸ್ಥಿತಿಯನ್ನು ನಿರ್ಣಯಿಸಲು ಆಡಿಟಿಂಗ್ ನಡೆಸಲಾಗುವುದು.

ಜುಲೈ 1-7ರವರೆಗೆ ”ವನ ಮಹೋತ್ಸವ”

ಸಸಿಗಳಿಗೆ ಜಿಯೋ-ಟ್ಯಾಗಿಂಗ್ ಹಾಕುವುದರಿಂದ ಅವುಗಳ ರಕ್ಷಣೆಗೆ ನಮಗೆ ಸಹಾಯ ಮಾಡುತ್ತದೆ. ಈ ಸಸಿಗಳನ್ನು ನೆಡಲು ನಾವು ಎಲ್ಲಾ ಸರ್ಕಾರಿ ಇಲಾಖೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಈ ಸಂಬಂಧ ಮಾತುಕತೆಗಳು ಆಗಿವೆ. ಇನ್ನು ಮುಂದಿನ ತಿಂಗಳ ಜುಲೈ 1 ರಿಂದ 7 ರವರೆಗೆ ವಾರ್ಷಿಕ ಮರ ನೆಡುವ ಅಭಿಯಾನ ”ವನ ಮಹೋತ್ಸವ” ಆಚರಿಸಲಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

 Van Mahotsav: 5 Cr Sapling Will Plant For Iincrease Greenery To 33%: Eshwar Khandre

ನಾಡಿನ ಪರಿಸರ ರಕ್ಷಣೆ ಕುರಿತ ಯುವ ಪೀಳಿಗೆಯಾದ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಸಸಿ/ಗಿಡಗಳನ್ನು ನೆಟ್ಟು ರಕ್ಷಿಸುವ ಕೆಲಸ ಕೇವಲ ಅರಣ್ಯ ಇಲಾಖೆಗೆ ಸೀಮಿತವಾಗಿರದೆ ಸಾಲದು, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆಗಬೇಕು. ಹವಾಮಾನ ಬದಲಾವಣೆ ದೊಡ್ಡ ಬಿಕ್ಕಟ್ಟು. ವಾಯು ಮತ್ತು ಜಲ ಮಾಲಿನ್ಯ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ಳಿಸಿದರು.

ವನ ಮಹೋತ್ಸವ ಆಚರಣೆಯ ಚಟುವಟಿಕೆಗಳ ಮೇಲ್ವಿಚಾರಣೆಗೆಂದು ಸಮಿತಿಯೊಂದನ್ನು ರಚನೆ ಮಾಡಿದ್ದೇವೆ. ಸಮಿತಿ ಸದಸ್ಯರ ಯಾರು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಸಮಿತಿಯಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಪ್ರತಿನಿಧಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ಇರಲಿದ್ದಾರೆ. ಅವರು ನಾವೆಲ್ಲರು ವನ ಮಹೋತ್ಸವವನ್ನು ಯಶಸ್ವಿಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಕಲುಷಿತ ನೀರು ಸೇವಿಸಿ ಮಕ್ಕಳು ಅಸ್ವಸ್ಥ

ಕಲ್ಯಾಣ ಕರ್ನಾಟಕ ಜಿಲ್ಲೆಯಾದ ಬೀದರ್ ಜಿಲ್ಲೆಯಲ್ಲಿ ಮೂರು-ನಾಲ್ಕು ದಿನಗಳ ಆರಂಭದಲ್ಲಿ ಆರು ಮಕ್ಕಳು ಸೇರಿದಂತೆ 18 ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಶುದ್ಧೀಕರಿಸದೇ ಕೊಳಚೆ ನೀರು ನೀರಿನ ಪೈಪ್‌ಗಳಿಗೆ ಸೇರಿರುವುದು ಕಂಡು ಬಂದಿದೆ. ಅಲ್ಲದೇ ಕೈಗಾರಿಕಾ ತ್ಯಾಜ್ಯವನ್ನು ಸರಿಯಾದ ಸಂಸ್ಕರಣೆ ಮಾಡದೆ ಕೆರೆಗಳಿಗೆ ಹಾಗೆಯೇ ಬಿಡಲಾಗುತ್ತಿದ್ದು, ಇದರಿಂದ ಜಲಮೂಲಗಳು ಕಲುಷಿತಗೊಳ್ಳಲು ಪ್ರಮುಖ ಕಾರಣಗಳಾಗುತ್ತವೆ. ಇದೆಲ್ಲವನ್ನು ಗಮನಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

English summary

Van Mahotsav on July 1st: 5 Cr sapling will plant for increase Greenery to 33% of Karnataka: Eshwar Khandre

Story first published: Friday, June 23, 2023, 23:33 [IST]

Source link