Tulu language: ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡಲು ಆಗ್ರಹ | Urge For Should MaKe Tulu Language Of Karnataka 2nd Language In Session

Bengaluru

oi-Shankrappa Parangi

|

Google Oneindia Kannada News

ಬೆಂಗಳೂರು, ಜುಲೈ 19: ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಕರಾವಳಿ ಕನ್ನಡ ಕುರಿತು ಚರ್ಚೆಯಾಗಿದೆ. ಉಡುಪಿ, ಮಂಗಳೂರು ಸೇರಿದಂತೆ ದಕ್ಷಿಣ ಭಾಗದ ಜನರ ಭಾಷೆಯಾದ ತುಳು ಕನ್ನಡವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾಡುವಂತೆ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಕಲಾಪ ವೇಳೆ ಮನವಿ ಮಾಡಿದರು.

ಕರಾವಳಿ ಕನ್ನಡಿಗರು ಮಾತನಾಡುವುದು ತುಳು ಕನ್ನಡ. ಈ ಭಾಷೆಗೂ ಸೂಕ್ತ ಸ್ಥಾನ ಮಾನ ಸಿಗಬೇಕು ಎಂಬ ಆಶಯ ಇದ್ದೆ ಇದೆ. ಇದೀಗ ಕಲಾಪದಲ್ಲಿ ಸದ್ದು ಮಾಡಿದೆ. ಸದನದಲ್ಲಿ ಶಾಸಕ ಅಶೋಕ್ ರೈ ಈ ವಿಷಯವನ್ನು ತುಳು ಭಾಷೆ ಮಾತನಾಡುವ ಮೂಲಕವೇ ಪ್ರಸ್ತಾಪಿಸಿದರು. ಇದಕ್ಕೆ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರು ತುಳು ಭಾಷೆಯಲ್ಲೇ ಪ್ರತಿಕ್ರಿಯೆ ನೀಡಿದ್ದು ವಿಶೇಷ ಎನ್ನಿಸಿತು.

Urge For Should MaKe Tulu Language Of Karnataka 2nd Language In Session

ಬಳಿಕ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ತುಳುವಿನಲ್ಲೇ ಮಾತಾಡಲು ಮುಂದಾದ ವೇಳೆ ನೀವು ಕನ್ನಡದಲ್ಲೇ ಮಾತನಾಡಿ ಎಂದು ಯು.ಟಿ ಖಾದರ್ ಸೂಚಿಸಿದರು. ತುಳು ಭಾಷೆ ಮಾತನಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಸದನದಲ್ಲಿ ಅದನ್ನು ಬರೆದುಕೊಳ್ಳುವವರಿಗೆ ತೊಂದರೆ ಆಗುತ್ತದೆ ಎಂದು ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹೇಳೋದೇನು?

ಈ ವೇಳೆ ಧ್ವನಿ ಎತತಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಅರ್ಥ ಆಗದಿದ್ದರೆ ಉತ್ತರ ಕೊಡುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರುತುಳು ಮಾತನಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು ಅಂದರೆ, ಈ ಭಾಷೆ ಮಾತನಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ ಎಂದರು. ಜೊತೆಗೆ ಸಚಿವರಿಗೆ ರಾಜ್ಯದ ಎರಡನೇ ಭಾಷೆ ಕುರಿತು ಸೂಕ್ತವಾಗಿ ಪರಿಗಣಿಸಿ ಎಂದು ಸಲಹೆ ನೀಡಿದರು.

ತುಳು ಭಾಷೆ ಕುರಿತು ಎಲ್ಲಾ ಇಲಾಖೆಗಳ ವರದಿಗಳನ್ನು ತರಿಸಿಕೊಂಡು ಕಾನೂನು ಇಲಾಖೆಯು ತುಳು ಭಾಷೆಯನ್ನು ಎರಡನೇ ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡಿ‌ ಎಂದು ಸಭಾಧ್ಯಕ್ಷರು ನಿರ್ದೇಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ ಅವರು ವರದಿ ಪರಿಶೀಲಿಸಿಸುವುದಾಗಿ ತಿಳಿಸಿದರು ಎಂದು ಟಿವಿ ನೈನ್ ವರದಿ ಮಾಡಿದರು.

English summary

Urge for should maKe tulu language of Karnataka 2 nd language in Session.

Source link