Tripura: ರಥಯಾತ್ರೆಯಲ್ಲಿ ಹೈಟೆನ್ಷನ್ ತಂತಿ ಸ್ಪರ್ಶಿಸಿ 7 ಸಾವು, 15 ಮಂದಿಗೆ ಗಾಯ- ಮರಣ ಸಂಖ್ಯೆ ಹೆಚ್ಚುವ ಸಾಧ್ಯತೆ | Tripura: 7 People 2 Children, Die By Electrocution During Rath Yatra

India

oi-Ravindra Gangal

|

Google Oneindia Kannada News

ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ಬುಧವಾರ ಹೈಟೆನ್ಷನ್ ತಂತಿಯ ಸಂಪರ್ಕಕ್ಕೆ ಬಂದ ನಂತರ ರಥಕ್ಕೆ ಬೆಂಕಿ ಹೊತ್ತಿಕೊಂಡಿದೆ. ಆ ಸಂದರ್ಭದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ತಿಳಿದುಬಂದಿದೆ.

ಭಗವಾನ್ ಜಗನ್ನಾಥನ ‘ಉಲ್ಟಾ ರಥ ಯಾತ್ರೆ’ ಉತ್ಸವದ ಸಂದರ್ಭದಲ್ಲಿ ಕುಮಾರ್‌ಘಾಟ್ ಪ್ರದೇಶದಲ್ಲಿ ಸಂಜೆ 4.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Tripura: 7 People 2 Children, Die By Electrocution During Rath Yatra

ಈ ಹಬ್ಬದ ಸಮಯದಲ್ಲಿ, ಒಡಹುಟ್ಟಿದ ದೇವತೆಗಳಾದ ಭಗವಾನ್ ಬಲಭದ್ರ, ದೇವಿ ಸುಭದಾರ ಮತ್ತು ಭಗವಾನ್ ಜಗನ್ನಾಥ ರಥಯಾತ್ರೆಯ ಒಂದು ವಾರದ ನಂತರ ತಮ್ಮ ನಿವಾಸಕ್ಕೆ ಹಿಂತಿರುಗುತ್ತಾರೆ. ಇದಕ್ಕೆ ‘ಉಲ್ಟಾ ರಥ ಯಾತ್ರೆ’ ಎಂದು ಕರೆಯುತ್ತಾರೆ.

ತ್ರಿಪುರಾದ ಮಗುವಿಗೆ ಮರು ಜನ್ಮಕೊಟ್ಟ ಬೆಂಗಳೂರಿನ ಡಾಕ್ಟರ್ಸ್ತ್ರಿಪುರಾದ ಮಗುವಿಗೆ ಮರು ಜನ್ಮಕೊಟ್ಟ ಬೆಂಗಳೂರಿನ ಡಾಕ್ಟರ್ಸ್

133 ಕೆವಿ ಓವರ್‌ಹೆಡ್‌ ಕೇಬಲ್ ಸಂಪರ್ಕಕ್ಕೆ ಬಂದಾಗ ಸಾವಿರಾರು ಜನರು ಕಬ್ಬಿಣದಿಂದ ಮಾಡಿದ ರಥವನ್ನು ಎಳೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಜ್ಯೋತಿಷ್ಮನ್ ದಾಸ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.

Tripura: 7 People 2 Children, Die By Electrocution During Rath Yatra

ಗಾಯಾಳುಗಳು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಮಾಣಿಕ್ ಸಹಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.

‘ಕುಮಾರ್‌ಘಾಟ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, ‘ಉಲ್ಟಾ ರಥ’ ಎಳೆಯುವ ವೇಳೆ ವಿದ್ಯುತ್ ಸ್ಪರ್ಶದಿಂದ ಹಲವಾರು ಯಾತ್ರಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ದುಃಖಿತ ಕುಟುಂಬಕ್ಕೆ ಆಳವಾದ ಸಂತಾಪಗಳು. ಅಲ್ಲದೆ, ಗಾಯಗೊಂಡವರಿಗೆ ನಾನು ಹಾರೈಸುತ್ತೇನೆ. ಜನರು ಶೀಘ್ರವಾಗಿ ಗುಣಮುಖರಾಗಲಿ, ಈ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಅವರ ಬೆಂಬಲಕ್ಕೆ ನಿಂತಿದೆ’ ಎಂದು ಹೇಳಿದ್ದಾರೆ.

English summary

Tripura: A chariot caught fire after coming in contact with a high-tension wire in Tripura’s Unakoti district on Wednesday. Seven people died in that incident

Story first published: Wednesday, June 28, 2023, 22:22 [IST]

Source link