Tomato Price: ತಮಿಳುನಾಡಿನಲ್ಲಿ 200 ರೂಪಾಯಿ ದಾಟಿದ ಟೊಮ್ಯಾಟೋ ದರ: ಕರ್ನಾಟಕದಲ್ಲೂ ಏರಿಕೆ ಸಾಧ್ಯತೆ | Heavy Rain Affects Karnataka and Andhra Tomato Crops, Tamil Nadu Prices Reach Rs 200/kg

India

oi-Naveen Kumar N

|

Google Oneindia Kannada News

ಚೆನ್ನೈ, ಜುಲೈ 30: ಶತಕ ದಾಟಿ ಜನರಿಗೆ ಹೊರೆಯಾಗಿದ್ದ ಟೊಮ್ಯಾಟೋ ದರ ಈಗ ಇನ್ನಷ್ಟು ದುಬಾರಿಯಾಗಿದೆ. ಈಗ ತಮಿಳುನಾಡಿನಲ್ಲಿ ಟೊಮ್ಯಾಟೊ ದರ 200ರ ಗಡಿದಾಟಿದೆ. ಹಲವು ಪಟ್ಟಣಗಳಲ್ಲಿ ಟೊಮ್ಯಾಟೋ ಸಗಟು ದರ ದ್ವಿಶತಕ ದಾಟಿರುವುದು ಜನರ ನೆಮ್ಮದಿ ಕೆಡಿಸಿದೆ.

ಚೆನ್ನೈನ ಕೊಯಂಬೆಡು ಸಗಟು ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಯಿಂದ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಪಿ.ವಿ. ಕೊಯಂಬೀಡು ಮಾರುಕಟ್ಟೆಯ ಸಗಟು ತರಕಾರಿ ವ್ಯಾಪಾರಿ ಅಹ್ಮದ್ ಐಎಎನ್‌ಎಸ್‌ನೊಂದಿಗೆ ಮಾತನಾಡಿ, “ಕರ್ನಾಟಕ ಮತ್ತು ಆಂಧ್ರದಲ್ಲಿ ಮಳೆಯಾದ ಕಾರಣ ಟೊಮ್ಯಾಟೋ ಬೆಳೆ ಹಾಳಾಗಿದ್ದು, ಪೂರೈಕೆ ಮತ್ತಷ್ಟು ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಮತ್ತಷ್ಟು ಏರಿಕೆಯಾಗಿದೆ” ಎಂದು ಹೇಳಿದ್ದಾರೆ.

Heavy Rain Affects Karnataka and Andhra Tomato Crops, Tamil Nadu Prices Reach Rs 200/kg

ಮಳೆ ಹೀಗೆ ಮುಂದುವರೆದರೆ, ಬೆಳೆ ನಷ್ಟವಾದರೆ, ಇನ್ನು ಒಂದು ವಾರದಲ್ಲಿ ಕೆಜಿಗೆ 250 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ನಿರೀಕ್ಷೆ ಮಾಡಿದ್ದಾರೆ.

Tomato Price: ಟೊಮ್ಯಾಟೋ ಬೆಳೆದು ಕೋಟಿ ದುಡಿದ ಕರ್ನಾಟಕದ ಹಲವು ರೈತರುTomato Price: ಟೊಮ್ಯಾಟೋ ಬೆಳೆದು ಕೋಟಿ ದುಡಿದ ಕರ್ನಾಟಕದ ಹಲವು ರೈತರು

ಕೊಯಂಬೆಡು ಸಗಟು ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಿ.ಸುಕುಮಾರನ್ ಐಎಎನ್‌ಎಸ್‌ನೊಂದಿಗೆ ಮಾತನಾಡಿ, “ಮಾರುಕಟ್ಟೆ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಟೊಮ್ಯಾಟೊ ಬೆಲೆ ಕಿಲೋಗ್ರಾಂಗೆ 200 ರೂ.ಗೆ ತಲುಪಿದೆ, ಎಂದೂ ಇಷ್ಟೊಂದು ಮೊತ್ತಕ್ಕೆ ಟೊಮ್ಯಾಟೋ ಮಾರಾಟವಾಗಿರಲಿಲ್ಲ” ಎಂದು ಹೇಳಿದ್ದಾರೆ.

ಅರ್ಧಕ್ಕಿಂತ ಹೆಚ್ಚು ಬೆಳೆ ನಷ್ಟ

“ನಾವು ಜುಲೈ 20 ರ ವೇಳೆಗೆ ದರಗಳು ಸ್ಥಿರವಾಗಿರುತ್ತವೆ ಎಂದು ನಿರೀಕ್ಷಿಸಿದ್ದೆವು ಆದರೆ ಹಠಾತ್ ಮಳೆಯಿಂದಾಗಿ ಬೆಳೆ ನಷ್ಟವಾಗಿದೆ, ಆಂಧ್ರ ಮತ್ತು ಕರ್ನಾಟಕದಲ್ಲಿ ಬೆಳೆಯಲಾದ ಶೇಕಡಾ 50 ಕ್ಕಿಂತ ಹೆಚ್ಚು ಟೊಮೆಟೊಗಳು ಮಳೆಯಿಂದಾಗಿ ನಷ್ಟವಾಗಿವೆ.” ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕಿಲೋಗೆ 200 ರೂ.ಗೆ ಮಾರಾಟವಾಗುತ್ತಿದ್ದರೆ, ಕೆಲವು ಚಿಲ್ಲರೆ ಅಂಗಡಿಗಳಲ್ಲಿ ಟೊಮ್ಯಾಟೊ ಕೆಜಿಗೆ 185 ರೂ.ಗೆ ಏರಿಕೆಯಾಗಿದೆ.

ಚೆನ್ನೈನ ಪಮ್ಮಲ್‌ನಲ್ಲಿರುವ ತರಕಾರಿ ಮಾರಾಟಗಾರ ಕುಪ್ಪುಸಾಮಿ ಮಾತನಾಡಿ, “ನಾವು ಟೊಮ್ಯಾಟೊವನ್ನು ನಾವು ಖರೀದಿಸುವ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ ಹೆಚ್ಚಿನ ಬೆಲೆಗೆ ಮಾರಿದರೆ ಮಾರಾಟವಾಗುವುದಿಲ್ಲ ಇದರಿಂದ ಹಾಕಿದ ಬಂಡವಾಳ ಕೂಡ ನಷ್ಟವಾಗುತ್ತದೆ.” ಎಂದು ಅಸಾಹಯಕತೆ ವ್ಯಕ್ತಪಡಿಸಿದರು.

ಬೆಲೆ ಹೆಚ್ಚಳದ ಪರಿಣಾಮ ಮಾರಾಟದ ಪ್ರಮಾಣವೂ ತೀವ್ರವಾಗಿ ಕಡಿಮೆಯಾಗಿದೆ ಮತ್ತು ಜನರು ಟೊಮೆಟೊಗಳನ್ನು ಖರೀದಿಸದೆ ಪರ್ಯಾಯ ತರಕಾರಿಗಳನ್ನು ಖರೀದಿ ಮಾಡುತ್ತಿದ್ದಾರೆ. ಮಳೆಯಿಂದಾಗಿ ಇದೇ ರೀತಿ ಬೆಳೆ ನಷ್ಟವಾದರೆ ಕರ್ನಾಟಕದಲ್ಲಿ ಕೂಡ ಟೊಮ್ಯಾಟೋ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

English summary

The relentless surge in tomato prices continues to burden the people of Tamil Nadu, with the wholesale price reaching Rs 200 per kilogram in the state capital and several towns on Sunday.

Story first published: Sunday, July 30, 2023, 16:47 [IST]

Source link