India
oi-Shankrappa Parangi
ತೆಲಂಗಾಣ, ಜುಲೈ 27: ಮಳೆಗಾದಲ್ಲಿ ಜೋರು ಮಳೆಯಿಂದಾಗಿ ನದಿಗಳು, ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ. ಇಂತಹ ಸದಂರ್ಭಗಲ್ಲಿ ಅಲ್ಲಿಗೆ ತೆರಳುವ ಪ್ರವಾಸಿಗರು ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಜೀವಕ್ಕೆ ಕಂಟಕವಾಗುತ್ತದೆ. ಇಂತದ್ದೊಂದು ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಸುಮಾರು 80ಕ್ಕೂ ಹೆಚ್ಚು ಮಂದಿ ಬುಧವಾರ ಸಿಲುಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.
ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ಮುತ್ಯಾಲ ಧಾರಾ ಜಲಪಾತದಲ್ಲಿ ಬುಧವಾರ ನೀರಿನ ಹರಿವು ಹೆಚ್ಚಾಗಿತ್ತು, ಈ ವೇಳೆ ಅದರ ವೀಕ್ಷಣೆಗೆಂದು ಬಂದಿದ್ದ ಸುಮಾರು ಪ್ರವಾಸಿಗರ ಪೈಕಿ 80 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ತಿಳಿಯುತ್ತಿದ್ದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ಮತ್ತು NDRF ಮತ್ತು ಸ್ಥಳೀಯ ಪೊಲೀಸರೊಂದಿಗೆ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
#WATCH | Telangana: Rescue work has been completed. A total of 80 stranded tourists have been rescued from the Mutyala Dhara waterfall. We verified with every group and no one is left behind now. They have been given water and medical services. One boy got a minor scorpion bite… pic.twitter.com/iG0vnmk7O2
— ANI (@ANI) July 27, 2023
ಜಲಪಾತ ವೀಕ್ಷಣೆ ವೇಳೆ ಸುಲುಕಿದ ಹಲವು ಪ್ರವಾಸಿಗರೊಂದಿಗೆ ಮೊಬೈಲ್‌ನಲ್ಲಿ ನಾವು ಮಾತನಾಡಿದ್ದೇವೆ. ನೀರಿನ ತೊರೆಯಿಂದ ದೂರವಿರಿ ಹಾಗೂ ನಿಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ,ಆದ್ದರಿಂದ ಮೊಬೈಲ್ ಬ್ಯಾಟರಿ ಕಡಿಮೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳೂ ಸೂಚಿಸಿದ್ದಾರೆ.
ಇಂದು ಎಲ್ಲರ ರಕ್ಷಣೆ ಸಾಧ್ಯತೆ
ಗುರುವಾರ ಬೆಳಗ್ಗೆ ಹೊತ್ತಿಗೆ ಎಲ್ಲ ಪ್ರವಾಸಿಗರು ರಕ್ಷಿಸಲಾಗುವುದು, ಈ ಸಂಬಂಧ ರಕ್ಷಣಾ ಕಾರ್ಯಾಚರಣೆಯನ್ನು ಸೂಕ್ತವಾಗಿ ನಡೆಯುತ್ತಿದೆ ಎಂದು ಮುಲುಗು ಪೊಲೀಸ್ ವರಿಷ್ಠಾಧಿಕಾರಿ ಗೌಶ್ ಆಲಂ ಎಎನ್‌ಐಗೆ ಹೇಳಿದರು.
ಜಲಪಾತದ ಹರಿವು ಹೆಚ್ಚಾಗಿದೆ, ಪ್ರವಾಸಿಗರು ಯಾರು ಸಹ ನದಿ ದಾಟದಂತೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಸ್ಥಳದಲ್ಲೇ ಇದ್ದರೆ, ರಕ್ಷಣಾ ತಂಡಗಳು ಅವರನ್ನು ತಲುಪುವುದಕ್ಕೆ ಅನುಕೂಲವಾಗಲಿದೆ. ಅಲ್ಲಿಯವರೆಗೆ ನೀವು ಸ್ಥಳದಲ್ಲಿಯೇ ಇರುವಂತೆ ಹಾಗೂ ನಮ್ಮೊಂದಿಗೆ ಸಂಪರ್ಕದಲ್ಲಿರುವಂತೆ ಅವರು ಸಲಹೆ ನೀಡಿದ್ದಾರೆ.
ಸದ್ಯ ಅಷ್ಟು ಜನರಿಗೆ ಆಹಾರ ಪದಾರ್ಥಗಳು ಮತ್ತು ಇತರ ರಕ್ಷಣಾ ಸಾಧನಗಳನ್ನು ಕಳುಹಿಸಲಾಗುತ್ತಿದೆ. ಯಾರು ಸಹ ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಇರಬೇಕೆಂದು ಅವರು ಹೇಳಿದ್ದಾರೆ. ಹೆಚ್ಚಿನ ಮಾಹಿತಿ, ಅಪ್ಡೇಟ್ಸ್‌ಗಾಗಿ ಕಾಯುತ್ತಿದ್ದೇವೆ ಎಂದರು.
ಭಾರತೀಯ ಹವಾಮಾನ ಇಲಾಖೆ ಸೋಮವಾರ ಜುಲೈ 27ರವರೆಗೆ ಮುಂದಿನ ಮೂರು ದಿನಗಳವರೆಗೆ ತೆಲಂಗಾಣಕ್ಕೆ ರೆಡ್ ಅಲರ್ಟ್ ಘೋಷಿಸಿತ್ತು. ಇಂದು ಸಹ ತೆಲಂಗಾಣದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಭಾರೀ ಮಳೆಯಿಂದಾಗಿ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಹಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
English summary
Telangana: 80 tourists got stuck in Muthyala Dhara waterfalls in Mulugu, NDRF team started rescue operation.
Story first published: Thursday, July 27, 2023, 10:15 [IST]