SSLC supplementary Exam Result 2023: ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ ಹೀಗಿದೆ | Karnataka SSLC supplementary Exam 2023: Result announced, Details of passed out students

Karnataka

oi-Madhusudhan KR

By ಒನ್‌ ಇಂಡಿಯಾ ಪ್ರತಿನಿಧಿ

|

Google Oneindia Kannada News

ಕರ್ನಾಟಕ, ಜೂನ್‌, 30: ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯನಿರ್ಣಯ ಮಂಡಳಿ 2023ನೇ ಸಾಲಿನ SSLC ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಹಾಗಾದರೆ ಈ ಬಾರಿ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ? ಹಾಗೂ ಕಳೆದ ಬಾರಿಗೆ ಹೋಲಿಸಿದೆರೆ ಈ ಬಾರಿ ಫಲಿತಾಂಶ ಹೇಗಿದೆ ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.

2023ನೇ ಸಾಲಿನ SSLC ಪೂರಕ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಶೇಕಡಾ 41.39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡಾ 39.59 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಒಟ್ಟು 1,11,781 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 46,270 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Karnataka SSLC supplementary Exam 2023: Result announced, Details of passed out students

ಒಟ್ಟು 8,35,102 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆದಿದ್ದು, ಇವರಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇದರಲ್ಲಿ 3,59,511 ಬಾಲಕಿಯರು ಮತ್ತು 3,41,108 ಬಾಲಕರು ಉತ್ತೀರ್ಣರಾಗಿದ್ದರು. ಆಗ ಅನುತೀರ್ಣರಾದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಇದೀಗ ಈ ಪೂರಕ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ.

SSLC Supplementary Exam Result: ನಾಳೆಯೇ SSLC ಪೂರಕ ಪರೀಕ್ಷೆ ಫಲಿತಾಂಶ, ರಿಸಲ್ಟ್ ನೋಡುವುದು ಹೇಗೆ?SSLC Supplementary Exam Result: ನಾಳೆಯೇ SSLC ಪೂರಕ ಪರೀಕ್ಷೆ ಫಲಿತಾಂಶ, ರಿಸಲ್ಟ್ ನೋಡುವುದು ಹೇಗೆ?

ಜೂನ್ 12ರಿಂದ ಜೂನ್ 19ರವರೆಗೆ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಬಳಿಕ ಮೌಲ್ಯಮಾಪನ ನಡೆಸಿದ್ದು, ಇದೀಗ ಫಲಿತಾಂಶ ಪ್ರಕಟಿಸಲಾಗಿದೆ. ರಾಜ್ಯದ 458 ಕೇಂದ್ರಗಳಲ್ಲಿ ಪೂರಕ ಪರೀಕ್ಷೆ ನಡೆದಿದ್ದು, 11,810 ಪ್ರೌಢಶಾಲೆಗಳ 1,11,781 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇನ್ನು 51 ಮೌಲ್ಯಮಾಪನ ಕೇಂದ್ರಗಳಲ್ಲಿ 9,256 ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ್ದರು. ಪರೀಕ್ಷೆಗೆ ಹಾಜರಾಗಿದ್ದ 71,134 ಬಾಲಕರ ಪೈಕಿ 27,705 ಬಾಲಕರು ಮತ್ತು 40,647 ಬಾಲಕಿಯರು ಪರೀಕ್ಷೆ ಬರೆದಿದ್ದರು. ಇವರಲ್ಲಿ 18,565 ಬಾಲಕಿಯರು ಉತ್ತೀರ್ಣರಾಗಿದ್ದಾರೆ ಎಂದು ತಿಳಿದುಬಂದಿದೆ.

ಅನುದಾನಿತ ಮತ್ತು ಸರ್ಕಾರಿ ಶಾಲೆಗಳ ಫಲಿತಾಂಶ

1. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು- ಶೇಕಡಾ 39.78

2. ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು – ಶೇ.43.16

ಅನುದಾನರಹಿತ ಶಾಲೆಗಳ ಶೇಕಡಾ 42.34ರಷ್ಟು ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಅದರಲ್ಲೂ ಗ್ರಾಮೀಣ ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಮುಂದಿದ್ದು, ಪರೀಕ್ಷೆಗೆ ಹಾಜರಾದ 51,755 ವಿದ್ಯಾರ್ಥಿಗಳ ಪೈಕಿ 22,078 ವಿದ್ಯಾರ್ಥಿಗಳು ಪಾಸ್‌ ಉತ್ತೀರ್ಣರಾಗಿದ್ದಾರೆ. ನಗರದ ಪ್ರದೇಶದ 60,026 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 24,192 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪರೀಕ್ಷೆ ಬರೆದ ಕನ್ನಡ ಮಾಧ್ಯಮ- 42,969 ವಿದ್ಯಾರ್ಥಿಗಳ ಪೈಕಿ 24,931 ವಿದ್ಯಾರ್ಥಿಗಳು (ಶೇ.58.02) ಉತ್ತೀರ್ಣರಾಗಿದ್ದಾರೆ. ಮತ್ತು ಇಂಗ್ಲಿಷ್‌ ಮಾಧ್ಯಮದ 6,622 ವಿದ್ಯಾರ್ಥಿಗಳ ಪೈಕಿ 2,744 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.

ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ‌ ಪ್ರಕಟಿಸಲಾಗಿದೆ. ಅಲ್ಲದೆ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ತಲುಪಿಸಲಾಗಿದೆ. ಹಾಗೂ ಶಾಲೆಗಳಲ್ಲಿಯೂ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಮಾಹಿತಿ ನೀಡಿದೆ.

ಫಲಿತಾಂಶ ನೋಡುವ ವಿಧಾನಗಳು

1. ಅಧಿಕೃತ ವೆಬ್‌ಸೈಟ್‌ kseab.karnataka.gov.in ಅಥವಾ karresults.nic.inಗೆ ಭೇಟಿ ನೀಡಿ.

2. ನಂತರ SSLC ಪೂರಕ ಪರೀಕ್ಷೇ ಫಲಿತಾಂಶ 2023 ಲಿಂಕ್ ಅನ್ನು ಕ್ಲಿಕ್ ಮಾಡಿ

3. ನೋಂದಣಿ ಸಂಖ್ಯೆ, ಜನ್ಮ ದಿನಾಂಕವನ್ನು ನಮೂದಿಸಿ

4. ನಿಮ್ಮ ರಿಸಲ್ಟ್‌ ವೀಕ್ಷಿಸಿ ಅದನ್ನು ಡೌನ್‌ಲೋಡ್ ಮಾಡಿ.

English summary

Karnataka SSLC supplementary Exam 2023 Result announced today, Details of passed out students, here see complete details

Source link