Features
oi-Sunitha B
ಆರೋಗ್ಯ ಚೆನ್ನಾಗಿರಬೇಕು ಅಂದರೆ ಸೊಪ್ಪು ಹೆಚ್ಚಾಗಿ ಸೇವಿಸಬೇಕು. ಸೊಪ್ಪಿನಲ್ಲಿ ದೇಹಕ್ಕೆ ಬೇಕಾಗುವ ಅಧಿಕ ಪೋಷಕಾಂಶಗಳು ಇರುತ್ತವೆ. ಅಂತೆಯೇ ಪ್ರತಿಯೊಂದು ಸೊಪ್ಪಿನಲ್ಲೂ ಕಾಯಿಲೆಗಳಿಂದ ಮುಕ್ತಿ ಹೊಂದಲು ಬೇಕಾಗುವ ಪೌಷ್ಟಿಕಾಂಶವಿರುತ್ತದೆ. ಇವುಗಳಲ್ಲಿ ಪಾಲಕ್ ಕೂಡ ಒಂದು.
ಪಾಲಕ್ ತುಂಬಾ ಅಗ್ಗದ ಬೆಲೆಯಲ್ಲಿ ಸಿಗುವ ಸೊಪ್ಪು. ಆದರೆ ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳು ಮಾತ್ರ ದುಪ್ಪಟ್ಟು. 100 ಗ್ರಾಂ ಪಾಲಕದಲ್ಲಿ 23 ಕ್ಯಾಲೋರಿಗಳು, 3.6 ಗ್ರಾಂ ಕಾರ್ಬೋಹೈಡ್ರೇಟ್‌ಗಳು, 2.9 ಗ್ರಾಂ ಪ್ರೋಟೀನ್, 2.2 ಗ್ರಾಂ ಫೈಬರ್ ಮತ್ತು 0.4 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ಅರ್ಧದಷ್ಟು ಕಾಯಿಲೆಗಳು ಮಾಯವಾಗುತ್ತವೆ.
ಪಾಲಕ್‌ನಲ್ಲಿರುವ ಜೀವಸತ್ವಗಳು:
ಇದಲ್ಲದೆ ಪಾಲಕ್‌ನಲ್ಲಿ ವಿಟಮಿನ್ ಎ, ಬಿ 1, ಬಿ 2, ಬಿ 3, ಬಿ 6, ಬಿ 9 ಮತ್ತು ಸಾಕಷ್ಟು ಪ್ರಮಾಣದ ವಿಟಮಿನ್ ಸಿ, ಕೆ ಮತ್ತು ಇ ಗಳಿಂದ ಸಮೃದ್ಧವಾಗಿದೆ. ಜೊತೆಗೆ ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮತ್ತು ಸೋಡಿಯಂ, ರಂಜಕದಂತಹ ಖನಿಜಗಳಿಂದ ಸಮೃದ್ಧವಾಗಿದೆ. ಹಾಗಾದರೆ ಈ ಪಾಲಕ್ ಸೊಪ್ಪು ಸೇವನೆಯಿಂದಾಗುವ ಆರೋಗ್ಯಕರ ಪ್ರಯೋಜನಗಳು ಯಾವವು ಅನ್ನೋದನ್ನು ನೋಡೋಣ.
ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಪ್ರಯೋಜನಗಳು:
ಪಾಲಕ್ ಸೊಪ್ಪು ತೂಕ ಇಳಿಕೆಗೆ ಔಷಧಿ:
ಪಾಲಕ್ ಸೊಪ್ಪಿನಲ್ಲಿರುವ ಕ್ಯಾರೊಟಿನಾಯ್ಡ್ ಲುಟೀನ್ ಕೊಲೆಸ್ಟ್ರಾಲ್ ಕರಗಿಸುವ ಸಾಮರ್ಥ್ಯ ಹೊಂದಿದೆ. ನಾವು ಇದನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ, ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಳಿಯುವುದನ್ನು ತಪ್ಪಿಸಬಹುದು. ಇದನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಪಾಲಕ್ ಸೊಪ್ಪು:
ವಿಟಮಿನ್ ಎ, ವಿಟಮಿನ್ ಸಿ, ಫೋಲಿಕ್ ಆಮ್ಲವನ್ನು ಹೊಂದಿದ್ದು, ಇದು ಸ್ತನ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಅಲ್ಲದೇ ಪಾಲಕ್‌ನಲ್ಲಿ ಸಮೃದ್ಧ ಫ್ಲೇವನಾಯ್ಡ್ ಗಳು ತುಂಬಿದ್ದು, ಕ್ಯಾನ್ಸರ್ ವಿರುದ್ಧ ಕೆಲಸ ಮಾಡುತ್ತದೆ. ಪಾಲಕ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುವುದರಿಂದ ಇದನ್ನು ಆಹಾರದಲ್ಲಿ ಸೇವಿಸಲಾಗುತ್ತದೆ.
ಇದನ್ನು ಮಕ್ಕಳ ಆಹಾರದಲ್ಲಿ ಹೆಚ್ಚಾಗಿ ಸೇರಿಸಬೇಕು. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ ಕೆ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಈ ಪಾಲಕ್ ಸೊಪ್ಪನ್ನು ಸಾರು ಅಥವಾ ಸೂಪ್ ಮಾಡಿ ಬೆಳೆಯುವ ಮಕ್ಕಳಿಗೆ ನೀಡಿದರೆ ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ.
ಕೂದಲು:
ಪಾಲಕ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ರಕ್ತ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಈ ತರಕಾರಿಯನ್ನು ಬೇಯಿಸಿ ತಿನ್ನುವುದರಿಂದ ಮಹಿಳೆಯರಲ್ಲಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಸರಿಪಡಿಸಬಹುದು.
ಅದೇ ರೀತಿ ಈ ಪಾಲಕ್ ಕಾಲು, ಕೈ, ಕೀಲುಗಳಲ್ಲಿನ ಸಂಧಿವಾತವನ್ನು ನಿವಾರಿಸುತ್ತದೆ. ಯಾವುದೇ ಹಸಿರೆಲೆಗಳು ಕರುಳಿನಲ್ಲಿ ಸಿಲುಕಿರುವ ತ್ಯಾಜ್ಯವನ್ನು ಹೊರಹಾಕಬಲ್ಲವು. ಇದಕ್ಕೆ ಪಾಲಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ದೇಹದ ತ್ಯಾಜ್ಯವನ್ನು ಹೊರಹಾಕಿ ಹೊಟ್ಟೆಯನ್ನು ತಂಪಾಗಿಸುತ್ತದೆ. ಇದು ಹೊಟ್ಟೆಯಲ್ಲಿನ ಹುಣ್ಣುಗಳನ್ನು ಸಹ ಗುಣಪಡಿಸಲು ಸಹಾಯ ಮಾಡುತ್ತದೆ.
ಮಲಬದ್ಧತೆ:
ಪಾಲಕ್ ಸೊಪ್ಪಿನಲ್ಲಿ ಇರುವಂತಹ ವಿಟಮಿನ್ ಗಳು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೊತೆಗೆ ಮಲಬದ್ಧತೆ, ಹೊಟ್ಟೆಯ ಸಮಸ್ಯೆ ಇತ್ಯಾದಿಗಳಿಗೆ ಈ ಪಾಲಕ್ ಉತ್ತಮ ಮದ್ದು. ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟಾಶಿಯಂ ಕೂಡ ಇರುವುದರಿಂದ ಬಾಯಾರಿಕೆಯನ್ನು ನೀಗಿಸುವ ಸಾಮರ್ಥ್ಯ ಇದರಲ್ಲಿದೆ. ಮಾತ್ರವಲ್ಲದೆ ಶಾಖದ ಗುಳ್ಳೆಗಳು ಮತ್ತು ಬೆವರುವಿಕೆಯ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಅದೂ ಅಲ್ಲದೆ ಬೇಸಿಗೆಯಲ್ಲಿ ಮೂತ್ರ ವಿಸರ್ಜನೆ, ಮೂತ್ರ ಗಟ್ಟಿಯಾಗುವುದು ಸೇರಿದಂತೆ ನಾನಾ ಕಾಯಿಲೆಗಳು ಬರುತ್ತವೆ. ಇದಕ್ಕೆಲ್ಲ ಪರಿಹಾರ ಪಾಲಕ್ ಪರಿಹಾರವನ್ನು ನೀಡುತ್ತದೆ.
ಆಹಾರ:
ಈ ತರಕಾರಿ ಗುದದ್ವಾರದಲ್ಲಿ ಹುಣ್ಣು ಮತ್ತು ಕಿರಿಕಿರಿಯನ್ನು ಸಹ ಗುಣಪಡಿಸುತ್ತದೆ. ಕೀಲು ನೋವು, ಉರಿ ಇರುವವರು ಆಹಾರದಲ್ಲಿ ಪಾಲಕ್ ಸೊಪ್ಪನ್ನು ಹೆಚ್ಚಿಗೆ ಸೇವಿಸಿದರೆ ಉತ್ತಮ ಪ್ರಯೋಜನ ಪಡೆಯಬಹುದು. ಬೇಸಿಗೆಯಲ್ಲಿ ಈ ಪಾಲಕ್ ಸೊಪ್ಪನ್ನು ಹೆಚ್ಚು ಉಪಯೋಗಿಸುವುದು ಉತ್ತಮ. ಜೊತೆಗೆ ಪಾಲಕ್ ಸೊಪ್ಪು ಶೀತ ಮತ್ತು ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ. ಹೃದ್ರೋಗಿಗಳಿಗೆ ಇದು ಅತ್ಯುತ್ತಮ ಆಹಾರವಾಗಿದೆ.
ಸುಟ್ಟಗಾಯಗಳು, ದದ್ದುಗಳು, ತುರಿಕೆಗಳಿಂದ ಬಳಲುತ್ತಿರುವವರು ಪಾಲಕ್ ಎಲೆಗಳನ್ನು ಪೇಸ್ಟ್ ಮಾಡಿ ನಿಯಮಿತವಾಗಿ ಲೇಪಿಸಿದರೆ ನಿಧಾನವಾಗಿ ಪರಿಹಾರ ಸಿಗುತ್ತದೆ. ಪಾಲಕ್‌ನ ಕಾಂಡವನ್ನು ಪುಡಿಮಾಡಿ ಕೈಗಳು ಮತ್ತು ಪಾದಗಳ ಮೇಲೆ ಹಚ್ಚಿದರೆ ಚರ್ಮದ ಕಿರಿಕಿರಿಗಳಿಗೆ ಅನ್ವಯಿಸುವುದರಿಂದ ಪರಿಹಾರವನ್ನು ಪಡೆಯಬಹುದು.
ಡಯಟ್:
ಡಯಟ್ ಇರುವವರು ಈ ತರಕಾರಿಯನ್ನು ಚಪಾತಿಯೊಂದಿಗೆ ಕಡಿಮೆ ಎಣ್ಣೆಯನ್ನು ಬಳಕೆ ಮಾಡಿ ತಿನ್ನಬಹುದು. ಡಯಟ್ ಮಾಡುವವರು ಪಾಲಕ್ ಬಳಕೆಯನ್ನು ಹೇಗೆ ಮಾಡಬಹುದು ಎನ್ನುವುದನ್ನು ತಿಳಿಯಿರಿ.
*ಪಾಲಕ್ ಸೊಪ್ಪನ್ನು ಸೋಸಿ ಕುಕ್ಕರ್ ನಲ್ಲಿ ಹಾಕಿ ಸೀಟಿ ಬರುವವರೆಗೆ ಕುದಿಸಿ.
*ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಹಾಕಿ ಹುರಿಯಿರಿ.
*ನಂತರ ಟೊಮೆಟೊ ಹಾಕಿ ಹುರಿಯಿರಿ. ತೊಳೆದ ಬೇಳೆ ಮತ್ತು ಉಪ್ಪು ಸೇರಿಸಿ.
*ಅಗತ್ಯವಿರುವಷ್ಟು ನೀರನ್ನು ಹಾಕಿ, ಕುಕ್ಕರ್ ಅನ್ನು ವಿಸಿಲ್ನಿಂದ ಮುಚ್ಚಿ.
*ನಂತರ ಅದಕ್ಕೆ ಪಾಲಕ್ ಸೊಪ್ಪು ಹಾಕಿ ಕುದಿ ಬಂದಾಗ ತೆಗೆದಿಡಿ.
*ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ ಸಾಸಿವೆ ಒಣ ಮೆಣಸಿನಕಾಯಿ ಬೆಳ್ಳುಳ್ಳಿ ಹಾಕಿ ದಾಲ್ ಹಾಕಿದರೆ ಸವಿಯಲು ಅದು ರೆಡಿಯಾಗುತ್ತದೆ. ಅಗತ್ಯವಿದ್ದರೆ, ನೀವು ಅದಕ್ಕೆ ನಿಂಬೆ ರಸವನ್ನು ಸೇರಿಸಬಹುದು.
ದೋಸೆ:
ಈ ಪಾಲಕ್ ಸೊಪ್ಪನ್ನು ಗ್ರೇವಿಯಾಗಿ ಇಟ್ಟುಕೊಂಡರೆ ಮಕ್ಕಳು ತಿನ್ನುವುದಿಲ್ಲ. ಹಾಗಾಗಿ ದೋಸೆಯಲ್ಲೂ ಹಾಕಿ ಮಾಡಬಹುದು. ಹಾಗಾದರೆ ದೋಸೆ ಹಿಟ್ಟಿನಲ್ಲಿ ಇದನ್ನು ಬಳಸುವುದು ಹೇಗೆ?
*ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಕೆ ಕತ್ತರಿ.
*ಅದೇ ರೀತಿ, ಈರುಳ್ಳಿ ಮತ್ತು ಬೆಲ್ ಪೆಪರ್ ಅನ್ನು ನುಣ್ಣಗೆ ಕತ್ತರಿಸಿ.
*ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹುರಿಯಿರಿ,
*ನಂತರ ಪಾಲಕ್ ಮತ್ತು ಸ್ವಲ್ಪ ಉಪ್ಪು ಸೇರಿಸಿ.
*ದೋಸೆ ಹಿಟ್ಟಿನೊಂದಿಗೆ ಇವೆಲ್ಲವನ್ನೂ ಸೇರಿಸಿ ದೋಸೆ ಮಾಡಿ.
ಇದು ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಇದು ಮಕ್ಕಳನ್ನೂ ಸಹ ಬಲಪಡಿಸುತ್ತದೆ.
English summary
Nutritional benefits and diet plan of consuming spinach leaves.
Story first published: Saturday, June 24, 2023, 14:49 [IST]