Spinach In Kannada: ಹಲವು ರೋಗಕ್ಕೆ ಪಾಲಕ್ ಸೊಪ್ಪು ಮದ್ದು, ಇದರ ಪ್ರಯೋಜನಗಳು | Palak Leaves (Spinach) in Kannada: Benefits, Heat or Cold, Nutrition and Side Effects

Features

oi-Oneindia Staff

By ವನಜಾಕ್ಷಿ.ಎನ್

|

Google Oneindia Kannada News

ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪು ಇಲ್ಲದೇ ಅಡುಗೆ ಮನೆಯ ದಿನಚರಿ ಮುಗಿಯುವ ಉದಾಹರಣೆ ಕಮ್ಮಿ. ವಾರಕ್ಕೆ ಕನಿಷ್ಠ ಒಮ್ಮೆಯಾದರೂ ಪಾಲಕ್ ಸೊಪ್ಪನ್ನು ವಿವಿಧ ಅಡುಗೆಗಳಿಗೆ ಬಳಸಿಕೊಳ್ಳುವುದು ಗೊತ್ತೇ ಇದೆ.

ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿಯೂ ಇರುತ್ತದೆ ಎನ್ನುವುದು ಗಮನಿಸಬೇಕಾದ ವಿಚಾರ. ಪ್ರಮುಖಾಗಿ ಕೋವಿಡ್ ಸಾಂಕ್ರಾಮಿಕ ರೋಗದ ವೇಳೆ ಪಾಲಕ್ ಸೊಪ್ಪು ಬಳಸಿ ಮಾಡುವ ಕಷಾಯ ಕೂಡಾ ಜನಪ್ರಿಯವಾಗಿತ್ತು.

Spinach In Kannada

ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ಲಭ್ಯವಿರುವ ಪಾಲಕ್ ಸೊಪ್ಪು ಬಳಕೆಯಿಂದ ಹಲವು ಪ್ರಯೋಜನಗಳಿವೆ. ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿರುವ ಪಾಲಕ್ ನಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಯಾವುವು? ಯಾಕೆ ಈ ಸೂಪ್ಪನ್ನು ಹೆಚ್ಚಾಗಿ ಬಳಸಬೇಕು ಎಂದು ತಿಳಿಯೋಣ.

ಪಾಲಕ್ ಸೊಪ್ಪನ್ನು ಬಳಸುವುದರಿಂದ ಆರೋಗ್ಯಕ್ಕೆ ಆಗುವ ಉಪಯೋಗಗಳು (Spinach Benefits):

1. ಕಬ್ಬಿಣಾಂಶ ಕಮ್ಮಿ ಇರುವವರು ಇದನ್ನು ಅಗತ್ಯವಾಗಿ ಬಳಸುವುದು ಸೂಕ್ತ

ಒಂದಲ್ಲಾ ಒಂದು ಜನರಿಗೆ ಹಿಮೋಗ್ಲೋಬಿನ್ ಸಮಸ್ಯೆ ಇದ್ದೇ ಇರುತ್ತದೆ. ವೈದ್ಯರ ಶ್ರುಸೂಷೆಯ ಜೊತೆಗೆ ಪಾಲಕ್ ಸೊಪ್ಪು ಬಳಸುವುದನ್ನು ಅಭ್ಯಾಸ ಮಾಡಿಕೊಂಡರೆ ಸೂಕ್ತ. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚು ಇರುವುದು ಒಂದು ಕಡೆ, ಇನ್ನೊಂದು ಕಡೆ ಪೊಟ್ಯಾಶಿಯಂ ಕೂಡಾ ಹೆಚ್ಚಾಗಿ ಇರುವುದರಿಂದ, ರಕ್ತ ಹೀನತೆಯ ಸಮಸ್ಯೆಯನ್ನು ಎದುರಿಸುತ್ತಿರುವವರು ಈ ಸೊಪ್ಪು ಹೆಚ್ಚು ಬಳಸುವುದು ಸೂಕ್ತ.

Chia Seeds in Kannada: ಚಿಯಾ ಬೀಜಗಳ ಸೇವನೆಯಿಂದಾಗುವ ಪ್ರಯೋಜನಗಳು ಬಲ್ಲಿರಾ?Chia Seeds in Kannada: ಚಿಯಾ ಬೀಜಗಳ ಸೇವನೆಯಿಂದಾಗುವ ಪ್ರಯೋಜನಗಳು ಬಲ್ಲಿರಾ?

2. ರಕ್ತದೊತ್ತಡ (ಬಿಪಿ) ಸಮಸ್ಯೆಗೂ ಇದು ರಾಮಬಾಣ

ರಕ್ತದೊತ್ತಡ ಸಮಸ್ಯೆಯನ್ನು ನಲವತ್ತು ವರ್ಷ ದಾಟಿದ ಹೆಚ್ಚಿನವರು ಅನುಭವಿಸಿರುತ್ತಾರೆ. ಕೆಲಸ ಮತ್ತು ವೈಯಕ್ತಿಕ ಸಮಸ್ಯೆಗಳಿದ್ದಾಗ ಬಿಪಿ ಹೆಚ್ಚಾಗುವುದು ಸಾಮಾನ್ಯ. ಬಿಪಿ ಶುಗರ್ ಎಲ್ಲಾ ಕಾಯಿಲೆಗಳಿಗೂ ಮೂಲ ಎನ್ನುತ್ತಾರೆ, ವೈದ್ಯಲೋಕದವರು. ಪಾಲಕ್ ಸೊಪ್ಪಿನಲ್ಲಿ ನೈಟ್ರೇಜ್ ಅಂಶ ಹೇರಳವಾಗಿರುವುದರಿಂದ, ಬಿಪಿ ಸಮಸ್ಯೆ ಎದುರಿಸುವವರು ಇದನ್ನು ಹೆಚ್ಚಾಗಿ ಬಳಸಿದರೆ ಉತ್ತಮ.

3. ಮೂಳೆಗಳ ಬಲವೃದ್ದಿಗೂ ಪಾಲಕ್ ಸೊಪ್ಪು ಸೇವನೆ ಒಳ್ಳೆಯದು

ಈಗಾಗಲೇ ಹೇಳಿದಂತೆ ಪಾಲಕ್ ಸೊಪ್ಪಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಪ್ರಮುಖವಾಗಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್ ಅಂಶಗಳು ಇರುವುದರಿಂದ ಅಡುಗೆಗೆ ಪಾಲಕ್ ಸೊಪ್ಪನ್ನು ಹೆಚ್ಚಾಗಿ ಬಳಸಿದರೆ, ಮೂಳೆಗಳ ಬಲವೃದ್ದಿಗೂ ಉತ್ತಮ. ಇದನ್ನು ವೈದ್ಯರು ಕೂಡಾ ಶಿಫಾರಸು ಮಾಡುತ್ತಾರೆ.

Spinach In Kannada

4. ಕಣ್ಣಿನ ಸಮಸ್ಯೆ ಇರುವವರಿಗೂ ಇದು ಉತ್ತಮ

ಪಾಲಕ್ ಸೊಪ್ಪಿನಲ್ಲಿ ಝೀಕ್ಸಾಂಥಿನ್, ಲುಟೀನ್ ಮತ್ತು ಬೀಟಾ-ಕ್ಯಾರೋಟಿನ್ ಅಂಶಗಳು ಹೇರಳವಾಗಿವೆ. ಹಾಗಾಗಿ, ಸಮೀಪ ದೃಷ್ಟಿ, ದೂರದೃಷ್ಟಿ ಸಮಸ್ಯೆ ಎದುರಿಸುತ್ತಿರುವವರು ಇದನ್ನು ಹೆಚ್ಚಾಗಿ ಬಳಸಿದರೆ, ಕಣ್ಣಿನ ಸಮಸ್ಯೆಗೆ ಉತ್ತಮ.

5. ರಕ್ತವನ್ನು ಸ್ವಚ್ಚಗೊಳಿಸಲು ಪಾಲಕ್ ಮದ್ದು

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ರಕ್ತವನ್ನು ಶುದ್ದಿಗೊಳಿಸಲು ಇದು ಸಹಾಯಕಾರಿ ಆಗಲಿದೆ. ಪಾಲಕ್ ಅನ್ನು ಹೆಚ್ಚು ಬಳಸಿದರೆ ಮೊಡವೆ ಸಮಸ್ಯೆಯಿಂದ ಹೊರಬರಬಹುದು. ಜೊತೆಗೆ, ಚರ್ಮದ ತ್ವಚೆಗೆ ಪಾಲಕ್ ಸೊಪ್ಪು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಈ ಸೊಪ್ಪುಗಳು, ಮೊಡವೆ ಹೋಗಲಾಡಿಸಲು ಸಹಕಾರಿಯಾಗಿವೆ. ಇದರ ಸಮೃದ್ಧ ಪೌಷ್ಟಿಕಾಂಶ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯಕಾರಿಯಾಗಲಿದೆ.

ಪಾಲಕ್ ಸೊಪ್ಪು ಹೆಚ್ಚಾಗಿ ಸೇವಿಸಿದರೆ ಆಗುವ ಸೈಡ್ ಎಫೆಕ್ಟ್ ಗಳು

ಪಾಲಕ್ ಸೊಪ್ಪು ಕಬ್ಬಿಣದ ಅಂಶ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದ್ದರೂ ಇದನ್ನು ಇತಿಮಿತಿಯಲ್ಲಿ ಸೇವಿಸಿದರೆ ಸೂಕ್ತ. ಅತಿಹೆಚ್ಚು ಸೇವಿಸಿದರೆ ಅಮೃತವೂ ವಿಷವಾಗುತ್ತೆ ಎನ್ನುವ ಹಾಗೇ, ಪಾಲಕ್ ಸೊಪ್ಪಿನ ಬಳಕೆ ಮಿತಿಮೀರಬಾರದು.

ಕ್ಯಾಲ್ಸಿಯಂ ಅಂಶ ಹೆಚ್ಚಾಗಿ ಪಾಲಕ್ ಸೊಪ್ಪಿನಲ್ಲಿ ಇರುವುದರಿಂದ ಇದರ ಅತಿಯಾದ ಬಳಕೆಯಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾಗಬಹುದು. ಜೊತೆಗೆ, ಮೂತ್ರ ವಿಸರ್ಜನೆ ಸೇರಿದಂತೆ ಕಿಡ್ನಿಗೂ ಸಮಸ್ಯೆ ಆಗುವ ಸಾಧ್ಯತೆಯಿಲ್ಲದಿಲ್ಲ.

ರಕ್ತದೊತ್ತಡದಲ್ಲಿನ (ಬ್ಲಡ್ ಪ್ರೆಷರ್) ಕುಸಿತ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಹೆಚ್ಚಿನ ಖನಿಜಾಂಶವನ್ನು ಹೊಂದಿರುವುದರಿಂದ ಕಿಬ್ಬೊಟ್ಟೆ ನೋವು ಉಲ್ಬಣಗೊಳ್ಳಬಹುದು. ಜೊತೆಗೆ, ಸಂದಿಗಳಲ್ಲಿ ನೋವು ಎದುರಾಗಬಹುದು.

English summary

Palak leaves Health benefits, Nutrition, Heat or Cold and Side Effects of Eating Spinach In Kannada

Source link