Tv
oi-Narayana M
By ಪ್ರಿಯಾ ದೊರೆ
|
Article
desc:
‘ಶ್ರೀರಸ್ತು
ಶುಭಮಸ್ತು’
ಧಾರಾವಾಹಿಯಲ್ಲಿ
ಸಿರಿ
ಎಷ್ಟು
ಧೈರ್ಯವಾಗಿ
ಅಂಗಡಿಯಲ್ಲಿ
ಮಾತನಾಡಿದಳು
ಎಂಬ
ವಿಚಾರವನ್ನು
ಪೂರ್ಣಿಮಾ,
ಅವಿನಾಶ್
ಬಳಿ
ಹೇಳುತ್ತಿರುತ್ತಾಳೆ.
ದೀಪಿಕಾ
ಬೇಕಂತಲೇ
ಒಡವೆಯನ್ನು
ಸಿರಿ
ಬ್ಯಾಗ್ನಲ್ಲಿ
ಹಾಕಿರಬೇಕು.
ಅದಕ್ಕೆ
ಅವಳು
ಸಿಸಿಟಿವಿ
ಫುಟೇಜ್
ಅನ್ನು
ಚೆಕ್
ಮಾಡಲು
ಬಿಡಲಿಲ್ಲ.
ಸಿರಿ
ಮೇಲಿನ
ಕೋಪಕ್ಕೆ
ದೀಪಿಕಾ
ಹೀಗೆ
ಮಾಡಿದ್ದಾಳೆ
ಎಂದು
ಪೂರ್ಣಿ
ಹೇಳಿದ್ದಾಳೆ.
ಸಿರಿ
ಕೂಡ
ನನ್ನಿಂದ
ಫೋರ್ಸ್
ಮಾಡದೇ
ಬಂದಿದ್ದಾಳೆ
ಎಂದು
ಹೇಳುತ್ತಾಳೆ.
ಆಗ
ಅವಿ
ಈಗಲೇ
ಹೀಗೆ
ಇನ್ನು
ದೀಪಿಕಾ
ಈ
ಮನೆಗೆ
ಸೊಸೆಯಾಗಿ
ಬಂದರೆ
ಹೇಗೋ
ಎಂದು
ಹೇಳುತ್ತಾನೆ.
ಇತ್ತ
ದತ್ತ
ಮನೆಯಲ್ಲಿ
ಎಲ್ಲರೂ
ತಿಂಡಿ
ತಿನ್ನುತ್ತಿರುತ್ತಾರೆ.
ದತ್ತ
ತಾತ,
ಶೇಷು
ಹಾಗೂ
ಗೋದಾವರಿ
ಅವರನ್ನು
ಕರೆದುಕೊಂಡು
ದೇವಸ್ಥಾನಕ್ಕೆ
ಹೋಗುವುದಾಗಿ
ತುಳಸಿಗೆ
ಹೇಳುತ್ತಾನೆ.
ಈ
ಮಾತನ್ನು
ಕೇಳಿದ
ಗೋದಾವರಿಗೆ
ನೋವಾಗುತ್ತದೆ.
ನಮ್ಮವರೇ
ನಮಗಿಲ್ಲ
ಎಂದು
ಕಣ್ಣಿರು
ಹಾಕುತ್ತಾಳೆ.
ಮಾಧವ್
ಮನೆಗೆ
ಬರುತ್ತಾರೆ.
ಮಾಧವ್ಗೂ
ತುಳಸಿ
ತಿಂಡಿ
ಬಡಿಸುತ್ತಾಳೆ.
ಮಾಧವ್
ತಿಂಡಿ
ತಿನ್ನುವಾಗ
ದತ್ತ
ತಾತ
ಹಣ
ತರಲೆಂದು
ರೂಮ್ಗೆ
ಹೋಗುತ್ತಾರೆ.
ದತ್ತ
ತಾತ
ಸೂಟ್
ಕೇಸ್
ಅನ್ನು
ತೆರೆದು
ನೋಡುತ್ತಾರೆ.
ಆದರೆ,
ಸೂಟ್
ಕೇಸ್ನಲ್ಲಿ
ಹಣ
ಇರುವುದಿಲ್ಲ.
ಇದನ್ನು
ನೋಡಿದ
ದತ್ತ
ತಾತನಿಗೆ
ಶಾಕ್
ಆಗುತ್ತದೆ.
ಇಲ್ಲೇ
ಇಟ್ಟಿದ್ದ
ಹಣ
ಎಲ್ಲಿಗೆ
ಹೋಯ್ತು
ಎಂದು
ಗಾಬರಿಯಾಗುತ್ತಾರೆ.
Amruthadhaare:
ಭೂಮಿಕಾಳಿಗಾಗಿ
ಗೌತಮ್
ದಿವಾನ್
ಉಂಗುರ
ಖರೀದಿಸಲು
ಕಾರಣವೇನು..?
ತುಳಸಿ
ಕಾಫಿ
ತೆಗೆದುಕೊಂಡು
ರೂಮಿಗೆ
ಬರುತ್ತಾಳೆ.
ಆಗ
ದತ್ತ
ತಾತ
ಹಣ
ಕಳೆದು
ಹೋಗಿರುವ
ವಿಚಾರ,
ಆಸ್ಪತ್ರೆಗೆ
ಮಾಧವ್
ಬಿಲ್
ಕಟ್ಟಿದ
ವಿಚಾರವನ್ನು
ಹೇಳುತ್ತಾರೆ.
ಈ
ಮಾತನ್ನು
ಕೇಳಿದ
ತುಳಸಿಗೆ
ಬೇಸರವಾಗುತ್ತದೆ.
ನನ್ನನ್ನು
ನನ್ನ
ಮಗ
ಉಳಿಸಿಕೊಂಡ
ಎಂದುಕೊಂಡರೆ,
ಮಾಧವ್
ಅವರೇ,
ನನ್ನನ್ನು
ಆಸ್ಪತ್ರೆಗೆ
ಸೇರಿಸಿ,
ನನ್ನನ್ನು
ನೋಡಿಕೊಂಡಿದ್ದಲ್ಲದೇ,
ಹಣವನ್ನೂ
ಅವರೇ
ಕಟ್ಟಿದ್ದಾರಾ
ಎಂದು
ಬೇಸರ
ಮಾಡಿಕೊಳ್ಳುತ್ತಾಳೆ.
ದತ್ತ
ತಾತ,
ಸಂಧ್ಯಾ
ಎಲ್ಲಿ
ಎಂದು
ಕೇಳಿದ್ದಕ್ಕೆ,
ತುಳಸಿ
ರಾತ್ರಿಯೇ
ಸಂಧ್ಯಾ
ಮನೆಯಿಂದ
ಹೊರಟು
ಬಿಟ್ಟಳು
ಎನ್ನುತ್ತಾಳೆ.
ಆಗ
ತಾತನಿಗೆ
ಹಣವನ್ನು
ತೆಗೆದುಕೊಂಡು
ಹೋಗಿರುವುದು
ಸಂಧ್ಯಾಳೇ
ಎಂಬುದು
ಸ್ಪಷ್ಟವಾಗುತ್ತದೆ.
ಮಾಧವ್ನನ್ನು
ಕರೆದು
ಹಣ
ಕೊಡಲು
ಇನ್ನಷ್ಟು
ಸಮಯ
ಬೇಕು
ಎಂದು
ರಿಕ್ವೆಸ್ಟ್
ಮಾಡಿಕೊಳ್ಳುತ್ತಾರೆ.
ಅಭಿಗೆ
ಶಾಕ್
ಕೊಟ್ಟ
ಶಾರ್ವರಿ
ಇನ್ನು
ಅಭಿಗೆ
ಇನ್ವೆಸ್ಟರ್
ಕಂಪನಿಯಿಂದ
ಕರೆ
ಬರುತ್ತದೆ.
ಇನ್ವೆಸ್ಟರ್
ಹಾಕಿದ್ದ
ಹಣವನ್ನೂ
ವಾಪಸ್
ತೆಗೆದುಕೊಂಡಿದ್ದು,
ಐಡಿಯಾ
ಕೂಡ
ಬೇರೆ
ಕಂಪನಿಗೆ
ನೀಡಿರುವುದಾಗಿ
ಹೇಳುತ್ತಾರೆ.
ಇದರಿಂದ
ಗಾಬರಿಯಾದ
ಅಭಿ
ಅವಿ
ಬಳಿ
ಬಂದು
ಹೇಳಿಕೊಳ್ಳುತ್ತಾನೆ.
ಅವಿ
ಹೆದರಬೇಡ.
ಅದೇನು
ಅಂತ
ಮಾತನಾಡೋಣ
ಎನ್ನುತ್ತಾಳೆ.
ಶಾರ್ವರಿ
ಬಳಿ
ಅವಿ
ಪ್ರಶ್ನಿಸಿದಾಗ,
ಅರ್ಧಗಂಟೆ
ಬಿಟ್ಟು
ಬಾಲ್ಕನಿಗೆ
ಬಾ
ಎಂದು
ಹೇಳುತ್ತಾರೆ.
ಅಭಿಗೂ
ಅದೇ
ಸಮಯಕ್ಕೆ
ಬರಲು
ಹೇಳಿ
ಹೋಗುತ್ತಾಳೆ.
ಅಭಿ-ಅವಿ
ನಡುವೆ
ಭಿನ್ನಾಭಿಪ್ರಾಯ
ಅವಿ
ಮತ್ತು
ಶಾರ್ವರಿ
ಮಾತನಾಡುವುದನ್ನು
ಅಭಿ
ಕೇಳಿಸಿಕೊಳ್ಳುತ್ತಾನೆ.
ಆಗ
ಶಾರ್ವರಿ
ನೀನು
ನನ್ನ
ಹಿಂದೆ
ಸ್ಪೈ
ಬಿಟ್ಟಿದ್ದು,
ನನಗೆ
ಗಿಲ್ಟ್
ಫೀಲ್
ಆಗುವಂತೆ
ಮಾಡಿತು.
ಹಾಗಾಗಿ
ನಾನು
ಇನ್ವೆಸ್ಟ್ಮೆಂಟ್
ಹಣವನ್ನು
ವಾಪಸ್
ತೆಗೆದುಕೊಂಡೆ
ಎಂದು
ಹೇಳುತ್ತಾಳೆ.
ಆಗ
ಅಭಿ
ಬಂದು
ಅವಿ
ಮೇಲೆ
ಕೂಗಾಡುತ್ತಾನೆ.
ನಾನು
ಬೆಳೆಯುವುದು
ಇಷ್ಟವಿಲ್ಲ
ಎಂದೇ
ನೀನು
ಹೀಗೆ
ಮಾಡುತ್ತಿದ್ದೀಯಾ
ಎಂದು
ಜಗಳ
ಮಾಡುತ್ತಾನೆ.
ಮತ್ತೆ
ಶಾರ್ವರಿ
ಬೇಕಂತಲೇ
ಅವಿ
ಹಾಗೂ
ಅಭಿ
ಮಧ್ಯೆ
ತಂದಿಟ್ಟಿದ್ದಾಳೆ.
English summary
Shrirastu Shubhamasthu serial 21st June Episode Written Update. here is details about Money has been taken by sandhya. This makes Datha thatha get shocked. know more.
Thursday, June 22, 2023, 16:02
Story first published: Thursday, June 22, 2023, 16:02 [IST]