India
oi-Malathesha M
ಮುಂಬೈ: ಎನ್‌ಸಿಪಿ ಪಕ್ಷದಲ್ಲಿ ಹೊತ್ತಿರುವ ಬೆಂಕಿ ಈಗ ಕೆನ್ನಾಲಿಗೆಯಾಗಿ ಧಗಧಗಿಸುತ್ತಿದೆ. ಈ ಬೆಂಕಿಗೆ ಮೊದಲ ಬಲಿ ಎಂಬಂತೆ ಎನ್‌ಸಿಪಿ ಪಕ್ಷವನ್ನ 20 ವರ್ಷದಿಂದ ಕಟ್ಟಿ ಬೆಳೆಸಿದ್ದ ಶರದ್ ಪವಾರ್ ವಜಾಗೊಂಡಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಅಂದ್ರೆ ಎನ್‌ಸಿಪಿಯ ಬಂಡಾಯ ಬಣ ಶರದ್ ಪವಾರ್‌ರನ್ನ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದೆ. ಹೀಗೆ 2 ದಶಕದಿಂದ ಪಕ್ಷವನ್ನು ಮುನ್ನಡೆಸಿದ್ದ ನಾಯಕ ಶರದ್ ಪವಾರ್‌ಗೆ ಆಘಾತ ಎದುರಾಗಿದೆ.
ಅಷ್ಟಕ್ಕೂ ಎನ್‌ಸಿಪಿ ಬಂಡಾಯ ಬಣ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಈ ವಿಚಾರ ಉಲ್ಲೇಖಿಸಿದ್ದು, ಪತ್ರದಲ್ಲಿ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲೆ ಹಕ್ಕು ಕೂಡ ಸಾಧಿಸಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಶರದ್ ಪವಾರ್ ಬೆಂಬಲಿಗರಿಗೆ ಭರವಸೆ ನೀಡಿದ್ದು, ಪಕ್ಷದ ಚುನಾವಣೆ ಚಿನ್ಹೆ ಉಳಿಸಿಕೊಂಡೇ ಸಿದ್ಧವೆಂದು ಸವಾಲು ಎಸೆದಿದ್ದಾರೆ. ಮತ್ತೊಂದ್ಕಡೆ ಇಂದು ಇಬ್ಬರೂ ನಾಯಕರು ಶಾಸಕಾಂಗ ಪಕ್ಷದ ಸಭೆಯನ್ನ ಕರೆದಿದ್ದರು. ಶರದ್ ಪವಾರ್ ಮತ್ತು ಅಜಿತ್ ಪವಾರ್ ಇಂದು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಇಷ್ಟೆಲ್ಲದರ ಮಧ್ಯೆ ಶರದ್ ಪವಾರ್ ಅವರನ್ನೇ ಎನ್‌ಸಿಪಿ ಉನ್ನತ ಸ್ಥಾನದಿಂದ ವಜಾ ಮಾಡಲಾಗಿದೆ.
ಅಜಿತ್ ಪವಾರ್ ಹೊಸ ರಾಷ್ಟ್ರೀಯ ಅಧ್ಯಕ್ಷ!
ಶರದ್ ಪವಾರ್ ಅವರನ್ನು ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಜೊತೆಗೆ ಮತ್ತೊಂದು ಆಘಾತವನ್ನೂ ಬಂಡಾಯ ಬಣ ನೀಡಿದೆ. ಶರದ್ ಪವಾರ್ ವಜಾ ಆಗಿರುವ ಸ್ಥಾನಕ್ಕೆ ಅಜಿತ್ ಪವಾರ್ ಅವರನ್ನ ನೇಮಕ ಮಾಡಿ ಹೊಸ ರಾಷ್ಟ್ರೀಯ ಅಧ್ಯಕ್ಷ ಎಂದು ಘೋಷಣೆ ಮಾಡಲಾಗಿದೆ.ಈ ಮೂಲಕ ಚಿಕ್ಕಪ್ಪ ಹಾಗೂ ಮಗನ ನಡುವೆ ಜಗಳ ತಾರಕಕ್ಕೆ ಏರಿದೆ. ದಿಢೀರ್ ಬಂಡಾಯ ಎದ್ದು ಎನ್‌ಸಿಪಿ ಬಿಟ್ಟು ಬಿಜೆಪಿ ಮತ್ತು ಶಿವಸೇನೆ ಜೊತೆ ಸೇರಿರುವ ಅಜಿತ್ ಪವಾರ್ ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಕ್ ಕೊಡುವ ಬಗ್ಗೆ ಮುನ್ಸೂಚನೆ ಸಿಕ್ಕಂತಾಗಿದೆ. ಒಟ್ನಲ್ಲಿ ಮಹಾರಾಷ್ಟ್ರ ರಾಜಕೀಯ ಹೊತ್ತಿ ಉರಿಯುತ್ತಿದೆ.
English summary
Allegedly Ajit Pawar removes Sharad Pawar as NCP National President
Story first published: Wednesday, July 5, 2023, 19:03 [IST]