Mysuru
oi-Shankrappa Parangi
ಮೈಸೂರು, ಜೂನ್ 19: ಸಾಂಸ್ಕೃತಿಕ ನಗರ ಮತ್ತು ಉದ್ಯಾನ ನಗರಗಳ ಮಧ್ಯೆ ಕೆಎಸ್‌ಆರ್‌ಟಿಸಿ ಪ್ರೀಮಿಯಂ ಮತ್ತು ಎಲೆಕ್ಟ್ರಾನಿಕ್ ಬಸ್ ಗಳು (EV Bus) ಉತ್ತಮ ಸಂಪರ್ಕ ಹೊಂದಿದ್ದವು. ಆದರೆ ಶಕ್ತಿ ಯೋಜನೆಯಿಂದಾಗಿ ಈ ಬಸ್‌ಗಳತ್ತ ಜನರು ತಿರುಗಿಯೂ ನೋಡದ ನಿರ್ಮಾಣವಾಗಿದೆ.
ಮೈಸೂರು-ಬೆಂಗಳೂರು ಈ ಎರಡು ನಗಗಳ ಮಧ್ಯೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಐಶಾರಾಮಿ ಪ್ರೀಮಿಯಂ ಬಸ್‌ಗಳು, ಇವಿ ಬಸ್‌ಗಳು ಸಹ ಸೇವೆ ನೀಡುತ್ತಿದ್ದವು. ಜನಸಂಚಾರ ಹೆಚ್ಚಿರುವ ಪೀಕ್ ಅವರ್‌ಗಳಲ್ಲಿ ಪ್ರತಿ 15 ನಿಮಿಷಕ್ಕೆ ಒಂದು ಬಸ್ ಸಂಚರಿಸುತ್ತದೆ. ಈ ಮಾರ್ಗದ ಪ್ರಯಾಣಿಕರನ್ನು ಇ-ಬಸ್‌ಗಳು (KSRTC Electric Bus) ಮತ್ತಷ್ಟು ಆಕರ್ಷಿಸಿದ್ದವು.
ಈ ಎರಡು ವಿಧದ ಬಸ್‌ಗಳು ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಉಭಯ ನಗರಗಳಿಗೆ ಸುರಕ್ಷಿತ ಮತ್ತು ವೇಗದ ಸಾರಿಗೆ ಸೇವೆ ನೀಡುತ್ತಿದ್ದವು. ಆದರೆ ಕಳೆದ ಜೂನ್ 11ರಂದು ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಜಾರಿ ಮಾಡಿದಾಗಿನಿಂದ ಮಹಿಳಾ ಪ್ರಯಾಣಿಕರಿಗೆ ಉಚಿತ KSRTC ಬಸ್ ಸೇವೆ ಬಯಸುತ್ತಿದ್ದಾರೆ. ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ ಈ ಐಷಾರಾಮಿ ಎರಡು ಬಸ್‌ಗಳು ಶೇಕಡಾ 25ರಷ್ಟು ಪ್ರಯಾಣಿಕರನ್ನು ಕಳೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಕ್ತಿ ಯೋಜನೆಯಿಂದ ಸುಮಾರು ಶೇಕಡಾ 25ರಷ್ಟು ಪ್ರಯಾಣಿಕರು ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬಹುತೇಕ ಎಲ್ಲರು ಉಚಿತ ಪ್ರಯಾಣಕ್ಕೆ ಅವಕಾಶ ಇರುವ ಬಸ್‌ಗಳನ್ನು ಬಳಸುತ್ತಿದ್ದಾರೆ. ಸ್ವಲ್ಪ ಮಟ್ಟಿನ ಮಂದಿ ಮಾತ್ರವೇ ಈ ಪ್ರಿಮಿಯರ್ ಮತ್ತು ಇವಿ ಬಸ್ ಉಪಯೋಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಈ ಎರಡು ಬಸ್‌ಗಳಿಗೆ ಚೈತನ್ಯ ಸಿಗುವ ವಿಶ್ವಾಸವಿದೆ ಎಂದರು.
ಉಚಿತ ಸೇವೆಯನ್ನು ಅನುಭವಿಸಲು ಅನೇಕ ಪ್ರಯಾಣಿಕರು ಸಾಮಾನ್ಯ ಬಸ್‌ಗಳತ್ತ ಮುಖ ಮಾಡಿದ್ದಾರೆ. ಆದಷ್ಟು ಶೀಘ್ರವೇ ಮಹಿಳೆಯರು ಮತ್ತೆ ಪ್ರೀಮಿಯಂ ಸೇವೆಯ ಬಸ್‌ಗಳತ್ತ ಮುಖ ಮಾಡಬಹುದು.
ಉಚಿತ ಪ್ರಯಾಣಕ್ಕೆ ಆದ್ಯತೆ ನೀಡಲಾಗುತ್ತಿದೆ
KSRTC ಅಧಿಕಾರಿಗಳು ಹೇಳುವ ಪ್ರಕಾರ, ಇವಿ ಮತ್ತು ಐಶಾರಾಮಿ ಪ್ರಿಮಿಯರ್ ಬಸ್‌ಗಳು ಮೈಸೂರು- ಬೆಂಗಳೂರಿನ ಜನರಿಗೆ ಉತ್ತಮ ಸೇವೆ ನೀಡುತ್ತಿವೆ. ಅದರಲ್ಲೂ ಎಕ್ಸ್‌ಪ್ರೆಸ್ ವೇ ಆರಂಭವಾದ ನಂತರವಂತು ನಾನ್ ಸ್ಟಾಪ್ ಬಸ್ ಸೇವೆ ಲಭ್ಯವಾಗಿದೆ. ಆದರೆ ಇತ್ತ ಇನ್ನಿತರ ಸಾಮಾನ್ಯ ಬಸ್‌ಗಳು ಇವೆರಡು ನಗರಗಳಿಗೆ ಸಂಪರ್ಕ ಸಾಧಿಸುವ ಸಮಯವು ಬಹುತೇಕ ಒಂದೇ ಆಗಿದೆ. ಈ ಕಾರಣದಿಂದಲೂ ಸಹ ಜನರು ಸಾಮಾನ್ಯ ಬಸ್‌ಗಳನ್ನೇ ಪ್ರಯಾಣಕ್ಕೆ ಬಳಸುತ್ತಿದ್ದಾರೆ ಎನ್ನಲಾಗಿದೆ.
ಉತ್ತಮ ಆರ್ಥಿಕ ಸ್ಥಿತಿಯ ಮಹಿಳೆಯರು ಸಹಿತ ಶಕ್ತಿ ಯೋಜನೆ ಜಾರಿ ಬಳಿಕ ಉಚಿತವಾಗಿ ಸಂಚರಿಸಲು ಆಸಕ್ತಿ ತೋರುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವಾದ್ದರಿಂದ ಅವರೊಂದಿಗೆ ಪುರುಷ ಪ್ರಯಾಣಿಕರು ಸಾಮಾನ್ಯ ಬಸ್ ಸೇವೆಗಳನ್ನು ಬಳಸುವುದು ಹೆಚ್ಚಾಗಿದೆ. ಈ ಕಾರಣದಿಂದ ಐಶಾರಾಮಿ ಮತ್ತು ಇವಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿದೆ.
ಕೆಎಸ್‌ಆರ್‌ಟಿಸಿ ಪ್ರೀಮಿಯಂ ಬಸ್ ಸೇವೆಗಳು ಸಾರಿಗೆ ನಿಗಮಕ್ಕೆ ಹೆಚ್ಚಿನ ಲಾಭವನ್ನು ನೀಡುವ ಸಾರಥಿಗಳಾಗಿವೆ. ಸಾಮಾನ್ಯ ಇದೀಗ ಜನರು ಸಾಮಾನ್ಯ ಸಾರಿಗೆ ಬಸ್‌ಗಳತ್ತ ಮುಖ ಮಾಡಿದ್ದರಿಂದ ನಿಗಮದ ಲಾಭದ ಮೇಲೂ ಸಹ ದುಷ್ಪರಿಣಾಮ ಭೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದರು.
English summary
Bengaluru-Mysuru KSRTC premium bus loss 25% commuters due to free travel for women under Shakti Scheme, KSRTC source said.