‘Shakti’ scheme: ಮುಂದಿನ ಹತ್ತು ವರ್ಷಗಳ ವರೆಗೂ ಮುಂದುವರಿಯಲಿದೆ ಶಕ್ತಿ ಯೋಜನೆ- ಸಚಿವ ರಾಮಲಿಂಗಾರೆಡ್ಡಿ ಭರವಸೆ | Shakti scheme will continue for the next ten years – Karnataka Minister Ramalinga reddy

Karnataka

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 19: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಇದನ್ನು ನಿರ್ವಹಿಸಲು ಸರ್ಕಾರಿ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ತಮ್ಮ ಪ್ರಯಾಣವನ್ನು ಶಿಸ್ತುಬದ್ಧವಾಗಿ ಯೋಜಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ. ಈ ಯೋಜನೆಯು ಮುಂದಿನ ಐದು ವರ್ಷಗಳವರೆಗೆ ಮುಂದುವರಿಯುತ್ತದೆ ಎಂದೂ ಅವರು ಭರವಸೆ ನೀಡಿದ್ದಾರೆ.

ಯೋಜನೆ ಜಾರಿಯಾದ ನಂತರದ ಮೊದಲ ವಾರಾಂತ್ಯದಲ್ಲಿ ಭಾರಿ ಜನಸಂದಣಿ ಕಂಡುಬಂದಿತು. ವಿಶೇಷವಾಗಿ ಧಾರ್ಮಿಕ ಸ್ಥಳಗಳಿಗೆ ಸಾಗುವ ಬಸ್‌ಗಳಲ್ಲಿ ಸಾಮಾನ್ಯ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಯಿತು.

Shakti scheme will continue

ಈ ವಿಚಾರವಾಗಿ ರಾಮಲಿಂಗಾ ರೆಡ್ಡಿ ಮಾತನಾಡಿದ್ದಾರೆ. ಜೂನ್ 11 ರಂದು ಯೋಜನೆಗೆ ಚಾಲನೆ ನೀಡಿದ ನಂತರ 3 ಕೋಟಿಗೂ ಹೆಚ್ಚು ಜನರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.

‘ಜೂನ್ 11 ರಂದು ಯೋಜನೆಯನ್ನು ಪ್ರಾರಂಭಿಸಲಾಯಿತು. ಅದೇ ದಿನ 5.7 ಲಕ್ಷ ಜನರು ಉಚಿತವಾಗಿ ಪ್ರಯಾಣಿಸಿದರು. ಆ ಬಳಿಕ ನಿತ್ಯ 40-50 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ 3 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣಿಸಿದ್ದಾರೆ’ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

‘ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳುವುದರಿಂದ ಬಸ್ಸುಗಳು ತುಂಬಿ ತುಳುಕುತ್ತಿವೆ. ಈ ಯೋಜನೆಯು ಮುಂದಿನ ಐದು ವರ್ಷಗಳವರೆಗೆ ಮುಂದುವರಿಯುತ್ತದೆ. ಮುಂದಿನ ಚುನಾವಣೆಯಲ್ಲಿಯೂ ನಾವು ಮತ್ತೆ ಗೆಲ್ಲುತ್ತೇವೆ. ಮುಂದಿನ 10 ವರ್ಷಗಳವರೆಗೆ ಶಕ್ತಿ ಯೋಜನೆ ಮುಂದುವರಿಯುತ್ತದೆ’ ಎಂದು ಸಾರಿಗೆ ಸಚಿವರು ಹೇಳಿದ್ದಾರೆ.

Shakti scheme will continue

ಈ ಯೋಜನೆ ಕೆಲವೇ ದಿನಗಳು ಮಾತ್ರ ಇರಲಿದೆ ಎಂದು ಬಿಜೆಪಿಯ ಕೆಲ ಮುಖಂಡರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಜನರು ತಮ್ಮ ಪ್ರವಾಸವನ್ನು ಯೋಜಿಸಲು ಮತ್ತು ಯೋಜನೆಯ ಪ್ರಯೋಜನವನ್ನು ಆನಂದಿಸಲು ನಾನು ವಿನಂತಿಸುತ್ತೇನೆ. ದೊಡ್ಡ ಗುಂಪುಗಳಲ್ಲಿ ಒಟ್ಟಿಗೆ ಪ್ರಯಾಣಿಸಬೇಡಿ. ಬಸ್‌ಗಳಲ್ಲಿ ಹೆಚ್ಚಿನ ಜನಸಂದಣಿಯು ಚಾಲಕರು ಮತ್ತು ಕಂಡಕ್ಟರ್‌ಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ರೆಡ್ಡಿ ಹೇಳಿದ್ದಾರೆ.

ಯೋಜನೆಯಿಂದಾಗಿ ಮೊದಲ ವಾರದಲ್ಲಿ 70 ಕೋಟಿ ರೂಪಾಯಿ ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿ ಇದು ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

 ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಟವಿಲ್ಲ: ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಟವಿಲ್ಲ: ಸಚಿವ ರಾಮಲಿಂಗಾರೆಡ್ಡಿ

‘ಆರಂಭಿಕ ದಿನಗಳಲ್ಲಿ ಜನರಲ್ಲಿ ಬಹಳಷ್ಟು ಉತ್ಸಾಹ ಕಂಡುಬಂದಿದೆ. ಜನರು ಧಾರ್ಮಿಕ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಇದು ಹೆಚ್ಚು ಕಾಲ ಮುಂದುವರಿಯುವುದಿಲ್ಲ. ಮುಂದಿನ 15 ದಿನಗಳಲ್ಲಿ ಜನಸಂದಣಿ ಕಡಿಮೆಯಾಗಲಿದೆ’ ಎಂದು ರೆಡ್ಡಿ ಹೇಳಿದ್ದಾರೆ.

Shakti scheme will continue

ಜೂನ್ 17 ರಂದು ಅಂದರೆ ಶನಿವಾರ ಒಟ್ಟು 54.30 ಲಕ್ಷ ಮಹಿಳಾ ಪ್ರಯಾಣಿಕರು ‘ಶಕ್ತಿ’ ಯೋಜನೆಯಡಿ ಪ್ರಯಾಣಿಸಿದ್ದಾರೆ. ಜೂನ್ 18, ಭಾನುವಾರ 51.48 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಶೃಂಗರ್, ಧರ್ಮಸ್ಥಳ ಸೇರಿದಂತೆ ಇತರೆಡೆ ನೂಕುನುಗ್ಗಲು ಉಂಟಾಗಿರುವ ಬಗ್ಗೆ ವರದಿಯಾಗಿದೆ.

English summary

Shakti scheme: On June 17, that is Saturday, a total of 54.30 lakh women passengers travelled under the ‘Shakti’ scheme. On June 18, Sunday, 51.48 lakh passengers travelled

Story first published: Monday, June 19, 2023, 14:26 [IST]

Source link