Seetha Rama:ಚಳಿಗಾಲದಲ್ಲಿ ಟೀಸರ್, ಬೇಸಿಗೆಯಲ್ಲಿ ಟ್ರೈಲರ್,ಮಳೆಗಾಲದಲ್ಲಾದ್ರೂ ಸೀರಿಯಲ್ ಬರೋತ್ತಾ? ಶಿವಣ್ಣ ಸುಳಿವು ಕೊಡ್ತಾರಾ? | Zee Kannada New Serial Seetha Rama telecast date will be announced on the DKD Show

bredcrumb

Tv

oi-Muralidhar S

By ಎಸ್ ಸುಮಂತ್

|

ಜೀ
ಕನ್ನಡದಲ್ಲಿ
ಅದ್ಭುತ
ಧಾರಾವಾಹಿಗಳ
ನಡುವೆ
ರಿಯಾಲಿಟಿ
ಶೋಗಳ
ಅಬ್ಬರವೂ
ಜೋರಾಗಿಯೇ
ಇದೆ‌.
ಧಾರಾವಾಹಿಯ
ವಿಚಾರದಲ್ಲಂತೂ
ನಂಬರ್
ಒನ್
ಸ್ಥಾನವನ್ನು
ಬಿಟ್ಟುಕೊಟ್ಟಿಲ್ಲ.
ಆಗಾಗ
ಹೊಸ
ಧಾರಾವಾಹಿಗಳ
ಆಗಮನವೂ
ಆಗ್ತಾ
ಇದೆ.
ಜನರ
ಮನಸ್ಸಿನ
ನಾಡಿಯನ್ನು
ಅರಿತಿರುವ
ಜೀ
ಕನ್ನಡ,
ಯಾವುದೇ
ಧಾರಾವಾಹಿಯಾದರೂ
ಕೊಂಚ
ಕಥೆಯಲ್ಲಿ
ಬೋರ್
ಆಗ್ತಾ
ಇದ್ದರು,

ಕಥೆಯನ್ನೇ
ಆಸಕ್ತಿದಾಯಕವಾಗಿ
ತಿರುಗಿಸಿ
ಬಿಡುತ್ತದೆ.

ಸದ್ಯಕ್ಕೆ
‘ಪಾರು’,
‘ಹಿಟ್ಲರ್
ಕಲ್ಯಾಣ’,
‘ಪುಟ್ಟಕ್ಕನ
ಮಕ್ಕಳು’,
‘ಗಟ್ಟಿಮೇಳ’,’ಶ್ರೀರಸ್ತು
ಶುಭಮಸ್ತು’,
‘ಸತ್ಯ’,
‘ಭೂಮಿಗೆ
ಬಂದ
ಭಗವಂತ’
ಧಾರಾವಾಹಿಗಳು
ಎಲ್ಲರ
ಗಮನ
ಸೆಳೆಯುತ್ತಿವೆ.
ಇತ್ತಿಚೆಗೆ
ಶುರುವಾದ
ಧಾರಾವಾಹಿಗಳು
ಒಳ್ಳೆ
ಟಿಆರ್‌ಪಿಯನ್ನೇ
ಪಡೆಯುತ್ತಿವೆ.
ಅದರಲ್ಲೂ
ಹಳೆ
ಧಾರಾವಾಹಿಗಳು
ತಮ್ಮ
ಮೊದಲ
ಸ್ಥಾನ
ಬಿಟ್ಟುಕೊಡುತ್ತಿಲ್ಲ.
ಇದರ‌
ನಡುವೆ
ಇದೀಗ
ಬಹು
ನಿರೀಕ್ಷಿತ
‘ಸೀತಾರಾಮ’
ಧಾರಾವಾಹಿ
ಹೊಸ
ಅಪ್ಡೇಟ್
ಸಿಕ್ಕಿದೆ.

Zee Kannada New Serial Seetha Rama


ಕಾತುರದಿಂದ
ಕಾಯುತ್ತಿರುವ
ಧಾರಾವಾಹಿ

‘ಸೀತಾರಾಮ’
ಧಾರಾವಾಹಿ
ಇಂದು
ನಿನ್ನೆಯದ್ದಲ್ಲ.
ಹಲವು
ತಿಂಗಳುಗಳ
ಹಿಂದೆಯೇ‌
ಶುರುವಾಗಬೇಕಿತ್ತು.
ಆದರೆ
ಕಾದೂ
‌ಕಾದೂ
ಸಾಕಾಗುವಷ್ಟು
ಸಮಯ
ಕಳೆದರು
ಇನ್ನು
ಶುರುವಾಗಿಲ್ಲ.
ಜೀ
ಕನ್ನಡದ
ಪ್ರೋಮೋದಲ್ಲಿಯೇ
ಹೇಳಿರುವಂತೆ
ಚಳಿಗಾಲದಲ್ಲಿ
ಟೀಸರ್
ಬಂತು,
ಬೇಸಿಗೆಯಲ್ಲಿ
ಟ್ರೇಲರ್
ಬಂತು,
ಮಳೆಗಾಲದಲ್ಲಿ
ಸೀರಿಯಲ್
ಬರೋದು
ಪಕ್ಕಾ
ಎಂಬ
ಕ್ಯಾಪ್ಶನ್
ನೀಡಿದೆ.
ಪ್ರೋಮೋ
ನೀಡಿ
ಸಾಕಷ್ಟು
ಕುತೂಹಲವನ್ನು
ಹುಟ್ಟು
ಹಾಕಿತ್ತು.
ಅದರಲ್ಲೂ

ಮಗು
ರೀತು
ಮಾತು
ಕೇಳುವುದಕ್ಕೇನೆ
ಹಲವು
ಮನಸ್ಸುಗಳು
ಕಾಯುತ್ತಿವೆ.


ಡೇಟ್
ಅನೌನ್ಸ್
ಮಾಡ್ತಾರಾ
ಶಿವಣ್ಣ..?

‘ಸೀತಾರಾಮ’
ಧಾರಾವಾಹಿ
ಪ್ರೋಮೋ
ಬಿಟ್ಟಾದ
ಮೇಲೆ
ಎರಡ್ಮುರೂ
ಹೊಸ
ಧಾರಾವಾಹಿ
ಈಗಾಗಲೇ
ಪ್ರಸಾರವಾಗುತ್ತಿದೆ.
ಆದರೂ
‘ಸೀತಾರಾಮ’
ಬರಲೇ
ಇಲ್ಲ.
ಆದರೆ
ಸೋಷಿಯಲ್
ಮೀಡಿಯಾದಲ್ಲಂತು
ರೀತು
ಮಾತು
ಸಿಕ್ಕಾಪಟ್ಟೆ
ವೈರಲ್
ಆಗಿದೆ.
ಹೀಗಾಗಿ
ಧಾರಾವಾಹಿಯ
ಅಪ್ಡೇಟ್
ಕೇಳುವವರು
ಜಾಸ್ತಿಯಾಗಿದ್ರು.
ಈಗ
ಡೇಟ್
ಅನೌನ್ಸ್
ಮಾಡುವ
ಸಮಯ
ಹತ್ತಿರ
ಬಂದಿದೆ.
ಶಿವಣ್ಣ
ಕಡೆಯಿಂದ
ಡೇಟ್
ಅನೌನ್ಸ್
ಮಾಡಿಸುವ
ಪ್ಲ್ಯಾನ್
ಮಾಡಿಕೊಂಡಿದೆ.


ಡೇಟ್
ಅನೌನ್ಸ್
ಕೂಡ
ಸ್ಪೆಷಲ್

ಡಿಕೆಡಿ
ಕಾರ್ಯಕ್ರಮಕ್ಕೆ
ರೀತೂ
ಹಾಗೂ
ಅವರ
ತಾಯಿ
ಸೀತಾ
ಬಂದಿದ್ದಾರೆ.
ಆಂಕರ್
ಅನುಶ್ರೀ,
ರೀತೂಳನ್ನು
ಕೇಳಿದ್ದಾರೆ.
ಡೈರೆಕ್ಟರ್
ಏನೋ
ಹೇಳುದ್ರಲ್ಲ
ಏನದು
ಎಂದಾಗ,
ರೀತು,
ಶಿವಣ್ಣ
ಸರ್‌ಗೆ
ಹೇಳ್ತೀನಿ
ಅಂತ
ಮೆಲ್ಲಗೆ
ಹೇಳಿದ್ದಾಳೆ.
ಬಳಿಕ
ಶಿವಣ್ಣ
ಬಳಿ
ಹೋಗಿ
ನಮ್ಮ
ಧಾರಾವಾಹಿಯ
ಸಾಂಗ್
ಲಾಂಚ್
ಮಾಡುವುದಕ್ಕೆ
ಕೇಳಿದ್ದಾಳೆ.
ಆಗ
ಶಿವಣ್ಣ
ಸಾಂಗ್
ಲಾಂಚ್
ಮಾಡ್ತಾರೆ.

ರೀತಿ
ವಿಭಿನ್ನವಾಗಿ
ಡೇಟ್
ಅನೌನ್ಸ್
ಮಾಡಲಾಗುತ್ತದೆ‌.

Zee Kannada New Serial Seetha Rama


ವೀಕ್ಷಕರೆಲ್ಲ
ಗೆಸ್
ಮಾಡಿದ್ದು
ಯಾವ
ಡೇಟ್..?

ಈಗಾಗಲೇ
ಪ್ರೇಕ್ಷಕರು
ಧಾರಾವಾಹಿ
ಯಾವಾಗಿಂದ
ಅನ್ನೋದನ್ನು
ಗೆಸ್
ಮಾಡುವುದಕ್ಕೆ
ಶುರು
ಮಾಡಿದ್ದಾರೆ.
ಜೀ
ಕನ್ನಡದಲ್ಲಿ
ಪ್ರೋಮೋ
ಒಂದನ್ನು
ಬಿಡಲಾಗಿದೆ.
ರೀತೂ
ನಾನು
ಶೂಟ್
ಮಾಡಲ್ಲ
ಅಂತ
ಹಠ
ಮಾಡುದ್ದಾಳೆ.
ಟೆಲಿಕಾಸ್ಟ್
ಡೇಟ್
ಹೇಳುವ
ತನಕ
ಆಕ್ಟ್
ಮಾಡಲ್ಲ
ಎಂದಿದ್ದಾಳೆ.
ಆಗ
ಡೈರೆಕ್ಟರ್
ಕಾಲ್
ಮಾಡಿ
ಡೇಟ್
ಕನ್ಫರ್ಮ್
ಮಾಡಿಕೊಂಡು
ರೀತೂ
ಕಿವಿಯಲ್ಲಿ
ಹೇಳಿದ್ದಾರೆ.
ಆಗ
ರೀತೂ
ಫುಲ್
ಖುಷಿಯಾಗಿದ್ದಾಳೆ.
ಜೀ
ಕನ್ನಡ
ಮತ್ತೊಂದು
ಪೋಸ್ಟ್
ಹಾಕಿದ್ದು,
ಸೀತಾರಾಮ
ಯಾವಾಗ
ಅಂತ
ಗೆಸ್
ಮಾಡಿ
ಎಂದು
ಕೇಳಿದಾಗ,
ಎಲ್ಲರೂ
ಉತ್ತರ
ನೀಡಿದ್ದಾರೆ.
ಜುಲೈ
ಸೆಕೆಂಡ್
ವೀಕ್
ನಲ್ಲಿ
ಧಾರಾವಾಹಿ
ಪ್ರಸಾರವಾಗಬಹುದು.
ಅಂದ್ರೆ
ಜುಲೈ
3
ರಿಂದ
ಬರಬಹುದು
ಎಂದು
ನಿರೀಕ್ಷೆ
ಮಾಡಿದ್ದಾರೆ.

English summary

Zee Kannada New Serial Seetha Rama telecast date will be announced on the DKD Show. Here is the details.

Saturday, June 24, 2023, 23:57

Story first published: Saturday, June 24, 2023, 23:57 [IST]

Source link