Sedition Law: ದೇಶದ ಏಕತೆ-ಸಮಗ್ರತೆಗೆ ದೇಶದ್ರೋಹ ಕಾನೂನು ಅಗತ್ಯತೆ ಇದೆ: ರೀತುರಾಜ್ ಆವಸ್ತಿ | Sedition law Is Necessary To Maintain Unity And Integrity In The Country: Law Penal Chief

India

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 28: ದೇಶದ ಕಾಶ್ಮೀರದಿಂದ ಕೇರಳ ಮತ್ತು ಪಂಜಾಬ್ ಈಶಾನ್ಯ ರಾಜ್ಯಗಳ ವರೆಗೆ ‘ಏಕತೆ ಮತ್ತು ಸಮಗ್ರತೆ’ ಕಾಪಾಡಲು ‘ದೇಶದ್ರೋಹ ಕಾನೂನನ್ನು (ಕಾಯ್ದೆ) ರದ್ದು ಮಾಡದೇ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಮಂಗಳವಾರ ಕಾನೂನು ಆಯೋಗದ ಅಧ್ಯಕ್ಷ ನ್ಯಾ. ರಿತುರಾಜ್ ಅವಸ್ತಿ ಅವರು ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಗಳಲ್ಲಿ ಕಾಶ್ಮೀರದಿಂದ ಕೇರಳ ಮತ್ತು ಪಂಜಾಬ್ವರೆಗೆ ಈ ಕಾನೂನನ್ನು ಉಳಿಸಿಕೊಳ್ಳಲು ಸಮಿತಿಯೊಂದು ಮಾಡಿರುವ ಶಿಫಾರಸನ್ನು ಆವಸ್ತಿಯವರು ಸಮರ್ಥಿಸಿಕೊಂಡಿದ್ದಾರೆ. ದೇಶದ್ರೋಹ ಕಾನೂನನ್ನು ರದ್ದು ಮಾಡಿದರೆ ಅದರ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಈ ಹಿಂದೆಯೇ ಆಯೋಗ ಹೇಳಿತ್ತು.

Sedition law Is Necessary To Maintain Unity And Integrity In The Country: Law Penal Chief

ಈ ಹಿಂದಿನ ವರ್ಷ ಮೇ ತಿಂಗಳಿನಲ್ಲಿ ನೀಡಲಾದ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ ಪ್ರಸ್ತುತ ಕಾಯ್ದೆ ರದ್ದು ತಡೆಹಿಡಿಯಲಾಗಿದೆ. ಆದರೆ ಕಾಯ್ದೆಯ ದುರ್ಬಳಕೆ ಆಗದಂತೆ ತಡೆಯಲು ಮತ್ತು ಸುರಕ್ಷತೆಗಳನ್ನು ಕುರಿತು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು ಎಂದು ಪಿಟಿಐ ವರದಿ ಮಾಡಿದೆ.

ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯಿದೆಗಳು ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಅವು ದೇಶದ್ರೋಹದ ಅಪರಾಧವನ್ನು ಒಳಗೊಂಡಿರುವುದಿಲ್ಲ. ಆದ್ದರಿಂದ ಈ ಕಾನೂನು ರದ್ದಾಗದೇ ಚಾಲ್ತಿಯಲ್ಲಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾನೂನು ರದ್ದಾದರೆ ಪ್ರತಿಕೂಲ ಪರಿಣಾಮ

ದೇಶದ್ರೋಹದ ಕಾನೂನಿನ ಬಳಕೆಯನ್ನು ಪರಿಗಣಿಸುವಾಗ ಸಮಿತಿಯು “ಕಾಶ್ಮೀರದಿಂದ ಕೇರಳ ಮತ್ತು ಪಂಜಾಬ್‌ನಿಂದ ಈಶಾನ್ಯದವರೆಗಿನ ಪ್ರಸ್ತುತ ಪರಿಸ್ಥಿತಿಯಲ್ಲಿ, ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ದೇಶದ್ರೋಹದ ಕಾನೂನು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಇದು ರದ್ದಾದರೆ ಅನಾನುಕೂಲ, ದುಷ್ಪರಿಣಾಮವಾಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.

Sedition law Is Necessary To Maintain Unity And Integrity In The Country: Law Penal Chief

ರದ್ದು ಮಾಡಿ ಎಂದು ಆಗ್ರಹಿಸುತ್ತಿರುವ ಈ ದೇಶದ್ರೋಹದ ಕಾನೂನು ವಸಾಹತುಶಾಹಿ ಪರಂಪರೆಯಾಗಿದ್ದು, ಅದರ ರದ್ಧತಿಗೆ ಮಾನ್ಯ ಆಧಾರಗಳು ಇಲ್ಲ. ಅಮೆರಿಕಾ, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಕೆನಡಾ ಸೇರಿದಂತೆ ಹಲವಾರು ದೇಶಗಳು ತಮ್ಮದೇ ಆದ ಕಾನೂನುಗಳನ್ನು ಹೊಂದಿವೆ ಎಂದರು.

ತಿಂಗಳ ಹಿಂದಷ್ಟೇ ಸರ್ಕಾರಕ್ಕೆ ವರದಿಯೊಂದು ಸಲ್ಲಿಕೆಯಾಗಿದೆ. ಅದರಲ್ಲಿ ನ್ಯಾಯಮೂರ್ತಿ ಅವಸ್ತಿ ನೇತೃತ್ವದ 22 ನೇ ಕಾನೂನು ಆಯೋಗವು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 124A ಅನ್ನು ಅದರ ದುರುಪಯೋಗವನ್ನು ತಡೆಯಲು ಸುರಕ್ಷತೆಯೊಂದಿಗೆ ಉಳಿಸಿಕೊಳ್ಳುವುದನ್ನು ಬೆಂಬಲಿಸಿ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ದೇಶದ್ರೋಹ ಕಾನೂನನ್ನು ಕೇಂದ್ರ ಸರ್ಕಾರ ಬೆಂಬಲಿಸುತ್ತದೆ. ಅದರ ಶಿಫಾರಸುಗಳು ಕೇವಲ ಮನವೊಲಿಕೆಗೆ ಮಾತ್ರ ಸೀಮಿತ. ಸರ್ಕಾರವು ದೇಶದ್ರೋಹ ಕಾನೂನನ್ನು ಇನ್ನಷ್ಟು ಬಲಪಡಿಸಲು ಬಯಸುತ್ತದೆ ಎಂದು ವಾಗ್ದಾಳಿ ನಡೆಸಿತ್ತು.

ಕಾನೂನು ಬಗ್ಗೆ ವಿವರಿಸಿದ ಆವಸ್ತಿ

ಘಟನೆಯೊಂದು ನಡೆದ ವಾರದೊಳಗೆ (ಏಳು ದಿನ) ವಿಚಾರಣೆ ನಡೆಸಲಾಗುವುದು ಮತ್ತು ಈ ಬಗ್ಗೆ ಎಫ್‌ಐಆರ್ ದಾಖಲಿಸಲು ಅನುಮತಿಗಾಗಿ ಪ್ರಾಥಮಿಕ ತನಿಖಾ ವರದಿಯನ್ನು ಸಕ್ಷಮ ಸರ್ಕಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಘಟನೆಯ ಪ್ರಾಥಮಿಕ ವರದಿಯ ಆಧಾರದ ಮೇಲೆ, ಸಕ್ಷಮ ಸರ್ಕಾರಿ ಪ್ರಾಧಿಕಾರವು ದೇಶದ್ರೋಹದ ಅಪರಾಧವನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾತ್ಕಾರವನ್ನು ಕಂಡುಕೊಂಡರೆ, ಅದು ಅನುಮತಿಯನ್ನು ನೀಡಬಹುದು. ಅನುಮತಿ ನೀಡಿದ ನಂತರವೇ ಎಫ್‌ಐಆರ್‌ನ ಸೆಕ್ಷನ್ 124 ಎ ಅಡಿಯಲ್ಲಿ ಐಪಿಸಿ ದಾಖಲಿಸಲಾಗುವುದು ಎಂದು ಕಾನೂನಿನ ಕುರಿತು ಮಾಹಿತಿ ನೀಡಿದರು.

ಸದ್ಯ ಈ ದೇಶದ್ರೋಹ ಕಾನೂನಿನ ದುರ್ಬಳಕೆ ತಡೆಗೆ ಕ್ರಮ ಕೈಗೊಳ್ಳಬೇಕು. ಈ ನಿಬಂಧನೆಯನ್ನು ಹಿಂಪಡೆದು ಕಾನೂನು ರದ್ದು ಮಾಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಈ ಹಿಂದೆಯೇ ಇಂತಹ ಆಗ್ರಹ ಕೇಳಿ ಬಂದಾಗ, ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124 ಎ ದುರ್ಬಳಕೆ ಗಮನದಲ್ಲಿಟ್ಟುಕೊಂಡು ಅದನ್ನು ತಡೆಯಲು ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿತ್ತು.

English summary

Sedition law is necessary to maintain unity and integrity in the country says Law Penal Chief Judge Ritu Raj Awasthi.

Story first published: Wednesday, June 28, 2023, 13:29 [IST]

Source link