Tv
oi-Narayana M
By ಪ್ರಿಯಾ ದೊರೆ
|
ಸತ್ಯ
ಧಾರಾವಾಹಿಯಲ್ಲಿ
ಎರಡು
ದಿನಗಳಿಂದ
ದಿವ್ಯಾ
ಬಾಲನನ್ನು
ಬಹಳ
ಪ್ರೀತಿ,
ಕಾಳಜಿಯಿಂದ
ನೋಡಿಕೊಳ್ಳುತ್ತಿದ್ದಳು.
ಇದರಿಂದ
ಎಲ್ಲರೂ
ಹೆದರಿದ್ದರು.
ದಿವ್ಯಾ
ಏನೋ
ಮಾಸ್ಟರ್
ಪ್ಲ್ಯಾನ್
ಮಾಡಿದ್ದಾಳೆ.
ಅದಕ್ಕೆ
ಇಷ್ಟೆಲ್ಲಾ
ಮಾಡುತ್ತಿದ್ದಾಳೆ.
ಕುರಿ
ಬಲಿ
ಕೊಡುವ
ಮುನ್ನ
ಕೊಬ್ಬಿಸುವಂತೆ
ನಡೆದುಕೊಳ್ಳುತ್ತಿದ್ದಾಳೆ
ಎಂದು
ಜಾನಕಿ,
ಗಿರಿಜಾ
ಹಾಗೂ
ಬಾಲ
ಮಾತನಾಡಿಕೊಂಡಿದ್ದರು.
ಈಗ
ಅವರೆಲ್ಲರ
ಊಹೆ
ನಿಜವೇ
ಆಗಿದೆ.
ದಿವ್ಯಾ,
ಬಾಲ
ತನಗೆ
ಕೊಟ್ಟ
ಗಿಫ್ಟ್
ಅನ್ನು
ಬಾಲನ
ಮುಂದಿಟ್ಟು
ಪ್ರಶ್ನೆ
ಮಾಡಿದ್ದಾಳೆ.
ಈ
ಹಣ
ಎಲ್ಲಾ
ಹೇಗೆ
ಬಂತು
ಎಂದು
ಪ್ರಶ್ನಿಸಿದ್ದಾಳೆ.
ಆದರೆ,
ಬಾಲನಿಗೆ
ಇದೆಲ್ಲಾ
ಕೀರ್ತನಾಳನ್ನು
ಬ್ಲ್ಯಾಕ್
ಮೇಲ್
ಪಡೆದ
ಹಣ
ಎಂದು
ಸತ್ಯ
ಹೇಳಲೂ
ಆಗುತ್ತಿಲ್ಲ.
ಇದರಿಂದ
ಒದ್ದಾಡುತ್ತಿರುತ್ತಾನೆ.
ಆದರೆ,
ದಿವ್ಯಾ
ಪಟ್ಟು
ಹಿಡಿದು
ಸತ್ಯ
ತಿಳಿದುಕೊಳ್ಳಲು
ಪ್ರಯತ್ನಿಸುತ್ತಾಳೆ.
ಬಾಲ
ನಿನಗೆ
ಏನು
ಬೇಕಿದ್ದರೂ
ಕೇಳು
ತಂದು
ಕೊಡಲು
ಆಗುವುದಿಲ್ಲ.
ಅದೆಲ್ಲಾ
ಸೀಕ್ರೆಟ್
ಹೇಳಿದರೆ
ಮುಂದೆ
ನನಗೆ
ಕಷ್ಟ
ಆಗುತ್ತದೆ
ಎಂದು
ಎಷ್ಟು
ಹೇಳಿದರೂ
ದಿವ್ಯಾ
ಕೇಳುವುದಿಲ್ಲ.
ಬಾಲ
ಈಗ
ದಿವ್ಯಾಳಿಂದ
ತಪ್ಪಿಸಿಕೊಳ್ಳುವ
ಸಲುವಾಗಿ
ಫಿಡ್ಸ್
ಬಂದವನಂತೆ
ನೆಲಕ್ಕೆ
ಬಿದ್ದು
ಒದ್ದಾಡುತ್ತಾನೆ.
ದಿವ್ಯಾ
ಗಾಬರಿಯಾಗಿ
ಪ್ರಶ್ನೆ
ಮಾಡುವುದನ್ನು
ನಿಲ್ಲಿಸುತ್ತಾಳೆ
ಎಂದು
ಅಂದುಕೊಂಡಿರುತ್ತಾನೆ.
ಆದರೆ
ದಿವ್ಯಾ
ಪಟ್ಟು
ಬಿಡದೇ,
ನಿನ್ನ
ನಾಟಕವೆಲ್ಲಾ
ಸಾಕು
ಮಾಡು
ಎನ್ನುತ್ತಾಳೆ.
ಬೇರೆ
ದಾರಿ
ಇಲ್ಲದೇ
ಬಾಲ
ಕೂಡ
ಎದ್ದು
ಉತ್ತರ
ಕೊಡದೇ
ಹೊರಡುತ್ತಾನೆ.
ಮೊಬೈಲ್
ಫೋನ್
ಕೇಳಿದ
ದಿವ್ಯಾ
ಬಾಲನನ್ನು
ಹಿಂಬಾಲಿಸುವ
ದಿವ್ಯಾ
ಮತ್ತೆ
ಪ್ರೀತಿಯಿಂದ
ಮಾತನಾಡುತ್ತಾಳೆ.
ಶತಾಯಗತಾಯ
ಬಾಲನಿಗೆ
ಹಣ
ಎಲ್ಲಿಂದ
ಬರುತ್ತದೆ
ಎಂಬುದನ್ನು
ತಿಳಿಯಲು
ಮುಂದಾಗಿದ್ದಾಳೆ.
ಆದರೆ,
ಬಾಲ
ನಿನಗೆ
ಏನು
ಬೇಕೋ
ಕೇಳು
ಕೊಡಿಸುತ್ತೇನೆ.
ಆದರೆ,
ದುಡ್ಡಿನ
ಮೂಲ
ಯಾವುದು
ಎಂಬುದನ್ನು
ಮಾತ್ರ
ಹೇಳಲ್ಲ
ಎಂದಿದ್ದಾನೆ.
ಬಾಲನ
ಮಾತಿಗೆ
ಕೋಪಗೊಂಡ
ದಿವ್ಯಾ,
ನನಗೆ
ಒಂದೂವರೆ
ಲಕ್ಷದ
ಮೊಬೈಲ್
ಫೋನ್
ಕೊಡಿಸು
ಎಂದು
ಕೇಳಿದ್ದಾಳೆ.
ಪ್ರಪೋಸ್
ಮಾಡಲು
ಸಹಾಯ
ಮಾಡಿದ
ಸತ್ಯ
ಇತ್ತ
ಕಾರ್ತಿಕ್‌ಗೆ
ಪ್ರಪೋಸ್
ಮಾಡುವುದೇ
ದೊಡ್ಡ
ಸಮಸ್ಯೆ
ಆಗಿ
ಹೋಗಿದೆ.
ಮನೆಯವರನ್ನೆಲ್ಲಾ
ಕೇಳಿದರೂ
ಅವನಿಗೆ
ಸರಿಯಾದ
ಸಲ್ಯೂಷನ್
ಸಿಗಲಿಲ್ಲ.
ಈಗ
ಏನು
ಮಾಡುವುದು
ಎಂದು
ಒದ್ದಾಡುತ್ತಿರುತ್ತಾನೆ.
ಗಂಡನಿಗೆ
ಸಹಾಯ
ಮಾಡಲು
ಸತ್ಯ
ಮುಂದಾಗುತ್ತಾಳೆ.
ಹುಡುಗಿಯನ್ನು
ಲಾಂಗ್
ಡ್ರೈವ್
ಕರೆದುಕೊಂಡು
ಹೋಗಿ
ಯಾರೂ
ಇಲ್ಲದ
ಜಾಗದಲ್ಲಿ
ಆಕೆಗೆ
ಪ್ರಪೋಸ್
ಮಾಡು.
ನಿನಗೆ
ಅವಳು.
ಅವಳಿಗೆ
ನೀನು
ಎಂದು
ಅನಿಸಬೇಕು
ಅಂತ
ಐಡಿಯಾ
ಕೊಡುತ್ತಾಳೆ.
ಕುತೂಹಲ
ಮೂಡಿಸುವ
ಲವ್‌ಸ್ಟೋರಿ
ಸತ್ಯ
ಕೊಟ್ಟ
ಐಡಿಯಾಗೆ
ಕಾರ್ತಿಕ್
ಫಿದಾ
ಆಗುತ್ತಾನೆ.
ಆದರೆ,
ಸತ್ಯಳನ್ನು
ಪ್ರಪೋಸ್
ಮಾಡಲು
ಅವಳ
ಬಳಿಯೇ
ಐಡಿಯಾ
ಕೇಳಿರುವುದು
ಪ್ರೇಕ್ಷಕರಿಗೆ
ಆಶ್ಚರ್ಯವಾಗಿದೆ.
ಇದಕ್ಕೇನಾದರೂ
ಟ್ವಿಸ್ಟ್
ಇರುತ್ತಾ
ಎನ್ನು
ಅನುಮಾನ
ಕೂಡ
ಮೂಡುತ್ತಿದೆ.
ಒಟ್ಟಾರೆ
ಕಾರ್ತಿಕ್-
ಸತ್ಯ
ಲವ್‌ಸ್ಟೋರಿ
ಕುತೂಹಲ
ಮೂಡಿಸಿದೆ.
ಊರ್ಮಿಳಾ-ಲಕ್ಷ್ಮಣ
ಮಧ್ಯೆ
ಬಿರುಕು?
ಇನ್ನು
ಊರ್ಮಿಳಾ
ಹಾಗೂ
ಲಕ್ಷ್ಮಣನ
ನಡುವಿನ
ಪ್ರೀತಿಯನ್ನು
ಇತ್ತೀಚೆಗೆ
ಹೆಚ್ಚಾಗಿ
ತೋರಿಸಲಾಗುತ್ತಿದೆ.
ಆದರೆ,
ಲಕ್ಷ್ಮಣ
ಫೋನ್
ನಲ್ಲಿ
ಯಾರ
ಜೊತೆಗೋ
ಮಾತನಾಡುತ್ತಿದ್ದು,
ಊರ್ಮಿಳಾ
ಬಂದ
ಕೂಡಲೇ
ಆಫೀಸಿನವರಂತೆ
ನಾಟಕ
ಮಾಡಿದ್ದಾನೆ.
ಇದು
ಅನುಮಾನಕ್ಕೆ
ಕಾರಣವಾಗಿದೆ.
ಇಷ್ಟುದಿನ,
ಸತ್ಯ-ದಿವ್ಯಾ
ಮದುವೆ,
ನಂತರ
ಬಾಲನ
ಕಥೆ,
ಬಳಿಕ
ರಿತು-
ರಾಕಿ
ಪ್ರೀತಿ
ವಿಚಾರವನ್ನು
ಧಾರಾವಾಹಿಯಲ್ಲಿ
ತೋರಿಸಲಾಗಿತ್ತು.
ಆದರೆ
ಈಗ
ಲಕ್ಷ್ಮಣ
ಹಾಗೂ
ಊರ್ಮಿಳಾ
ದಾಂಪತ್ಯ
ಬದುಕಿನ
ಬಗ್ಗೆ
ತೋರಿಸಲು
ಮುಂದಾಗಿದ್ದಾರೆ.
ಪ್ರೇಕ್ಷಕರು
ಲಕ್ಷ್ಮಣನಿಗೆ
ಬೇರೆ
ಯಾರೊಟ್ಟಿಗಾದರೂ
ಸಂಬಂಧ
ಇದ್ಯಾ?
ಅಥವಾ
ಆತ
ಏನಾದರೂ
ಸಮಸ್ಯೆಯಲ್ಲಿ
ಸಿಲುಕಿಕೊಂಡಿದ್ದಾನಾ?
ಎಂದು
ವೀಕ್ಷಕರು
ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ
ಯಾವುದು
ಸತ್ಯ
ಎಂಬುದು
ಗೊತ್ತಿಲ್ಲ.
English summary
Sathya Serial 23rd June episode written update. Divya asking about the gifts gave by Bala. But Bala is not answering any questions. know more.
Sunday, June 25, 2023, 22:38
Story first published: Sunday, June 25, 2023, 22:38 [IST]