Tv
oi-Srinivasa A
By ಶೃತಿ ಹರೀಶ್ ಗೌಡ
|
ಈ
ಬಾರಿಯ
ಸರಿಗಮಪ
ಸೀಸನ್
20
ಬಹಳ
ವಿಶೇಷತೆಯಿಂದ
ಕೂಡಿರಲಿದೆ.
ಕರ್ನಾಟಕ
ರಾಜ್ಯದಲ್ಲಿ
ಆಡಿಶನ್
ಅನ್ನ
ಮಾಡಲಾಗುತ್ತಿತ್ತು.
ಕರ್ನಾಟಕದಲ್ಲಿ
ಸಹ
ಆಡಿಶನ್
ಮಾಡಿದಾಗ
ಬೇರೆ
ರಾಜ್ಯದ
ಪ್ರತಿಭೆಗಳು
ಸಹ
ಬಂದು
ತಮ್ಮ
ಪ್ರತಿಭೆಯನ್ನು
ಪ್ರದರ್ಶನ
ಮಾಡಿ
ಸಿಂಗರ್
ಆಗಿ
ಹೊರಹೊಮ್ಮಿದ್ದಾರೆ.ಇಲ್ಲಿಯವರೆಗೂ
ನಡೆದಿರುವ
ಸೀಸನ್
19ರವರೆಗೂ
ಉತ್ತಮ
ಗಾಯಕ
ಗಾಯಕಿಯರು
ಸರಿಗಮಪ
ಮೂಲಕ
ಹೊರ
ಹೊಮ್ಮಿದ್ದಾರೆ.
ಹಲವಾರು
ಮಂದಿ
ಹಲವಾರು
ಆಲ್ಬಮ್‌ಗಳಲ್ಲಿ
ಹಾಡನ್ನು
ಹಾಡುವ
ಮೂಲಕ
ಹಾಗೂ
ಸಿನಿಮಾ
ಹಾಡುಗಳನ್ನು
ಹಾಡುವ
ಮೂಲಕ
ತಮ್ಮ
ಬದುಕನ್ನು
ಕಟ್ಟಿಕೊಟ್ಟಿದ್ದಾರೆ.
ಸಂಗೀತ
ಗಂಧ
ಗಾಳಿ
ಗೊತ್ತಿಲ್ಲದೆ
ಇರುವವರಿಗೆ
ಚಾನ್ಸ್
ಅನ್ನು
ಸಹ
ಕೊಟ್ಟು
ಅವರು
ಸಹ
ರಾಜ್ಯದ
ಜನರಿಗೆ
ಚಿರಪರಿಚಿತ
ಆಗುವಂತೆ
ಮಾಡಿದ
ಕೀರ್ತಿ
ಸರಿಗಮಪ
ವೇದಿಕೆಗೆ
ಸಲ್ಲಬೇಕು.
ಈಗ
ಸರಿಗಮಪ
ಸೀಸನ್
20
ಸದ್ಯದಲ್ಲೇ
ಆರಂಭವಾಗಲಿದ್ದು
ಗಾಯಕ
ಗಾಯಕ್ಕೆ
ರಾಗ
ಬೇಕೆನ್ನುವರು
ತಯಾರಿಯನ್ನ
ನಡೆಸಿದರೆ
ವೇದಿಕೆಗೆ
ಬಂದು
ತಮ್ಮ
ಪ್ರತಿಭೆಯನ್ನು
ಪ್ರದರ್ಶನ
ಮಾಡಬಹುದಾಗಿದೆ.
ಇನ್ನು
ಈ
ಸರಿಗಮಪ
ಸೀಸನ್
20
ಬಹಳ
ವಿಶೇಷತೆಗಳಿಂದ
ಕೂಡಿರಲಿದೆ
ಈ
ಬಾರಿ
ಸಪ್ತಸಾಗರಗಳನ್ನ
ದಾಟಿ
ಆಡಿಶನ್
ನಡೆಯಲಿದೆ
ಎಂದು
ಜೀ
ಕನ್ನಡ
ಟೀಮ್
ತಿಳಿಸಿದೆ.
ಈ
ಬಾರಿಯ
ಸರಿಗಮಪ
ಸೀಸನ್
20
ವಿದೇಶಗಳಲ್ಲೂ
ಸಹ
ತನ್ನ
ಕಂಪನ್ನು
ಬೀರಲಿದೆ.
ಸಪ್ತಸಾಗರ
ದಾಟಿ
ಸ್ವರ
ಸಂಚಾರವನ್ನು
ಆರಂಭಿಸಲಿದೆ.
ವರ್ಲ್ಡ್
ವೈಡ್
ಆಡಿಷನ್
ಮಾಡುವ
ಮೂಲಕ
ಸರಿಗಮಪ
ಹೊಸ
ಇತಿಹಾಸವನ್ನು
ದಾಖಲಿಸಲಿದೆ.
ಸರಿಗಮಪ
ಈಗ
ವಿಶ್ವಕ್ಕೆ
ವಿಸ್ತರಿಸಲು
ಚಿಂತನೆಯನ್ನ
ನಡೆಸಿದೆ
ವಿಶ್ವದ
ಕನ್ನಡಿಗರಿಗಾಗಿ
ಸ್ವರ
ಸಂಚಾರ
ಆರಂಭವಾಗಲಿದೆ.
ಇದು
ಸಂಗೀತ
ಪರಂಪರೆಯಲ್ಲಿ
ಮೊತ್ತ
ಮೊದಲ
ಬಾರಿಗೆ
ವಿದೇಶದಲ್ಲೂ
ಸಹ
ಕನ್ನಡದ
ಕಂಪನ್ನು
ಬೀರುವ
ಕೆಲಸವಾಗಿದೆ.
ಇಲ್ಲಿ
ತನಕ
ಕನ್ನಡದ
ಹಿನ್ನೆಲೆ
ಗಾಯಕ
ಗಾಯಕಿಯರು
ವಿದೇಶದಲ್ಲಿ
ಹೋಗಿ
ಹಾಡನ್ನು
ಹಾಡಿ
ಮನರಂಜನೆಯನ್ನು
ನೀಡಿ
ಬರುತ್ತಿದ್ದರು.
ಈಗ
ವಿದೇಶದಲ್ಲಿ
ಇರುವ
ಕನ್ನಡಿಗರಿಗಾಗಿಯೇ
ಸ್ವರ
ಸಂಚಾರವನ್ನ
ಆರಂಭಿಸಲಾಗಿದ್ದು,
ಈ
ಬಾರಿಯ
ಸರಿಗಮಪ
ವಿಶ್ವದಾದ್ಯಂತ
ಆಡಿಶನ್
ಅನ್ನ
ನಡೆಸಲಿದೆ.
ಸದ್ಯಕ್ಕೆ
ಅತಿ
ಶೀಘ್ರದಲ್ಲಿ
ಸರಿಗಮಪ
ಸೀಸನ್
20
ವರ್ಲ್ಡ್
ವೈಡ್
ಆಡಿಶನ್
ನಡೆಸಲಿದೆ
ಎಂದು
ಪ್ರೋಮೋವನ್ನ
ಬಿಡುಗಡೆ
ಮಾಡಲಾಗಿದೆ.
ಆದರೆ
ವೀಕ್ಷಕರ
ಮಾತ್ರ
ವರ್ಲ್ಡ್
ವೈಡ್
ಬೇಡ
ನಮ್ಮ
ಭಾರತ
ದೇಶಕ್ಕೆ
ಇದು
ಇರಲಿ
ಎನ್ನುತ್ತಿದ್ದಾರೆ.
ನಮ್ಮ
ಹಳ್ಳಿಯಲ್ಲಿರುವ
ಪ್ರತಿಭೆಗಳ
ಮೂಲಕ
ಮತ್ತಷ್ಟು
ಕನ್ನಡದ
ಕಂಪನ್ನು
ಅರಳಿಸುವ
ಕೆಲಸ
ಮಾಡಲಿ
ಎಂದು
ಸಲಹೆ
ನೀಡುತ್ತಿದ್ದಾರೆ.
ನಮ್ಮವರಿಗೆ
ಅವಕಾಶ
ಸಿಗದೇ
ಅವಕಾಶ
ವಂಚಿತರಾಗಿದ್ದಾರೆ
ಅವರೇ
ತುದಿಗಾಲಿನಲ್ಲಿ
ನಿಂತಿದ್ದಾರೆ.
ಅಂತಹದ್ದರಲ್ಲಿ
ನಮ್ಮ
ದೇಶದ
ಪ್ರತಿಭೆಗಳನ್ನ
ಗುರುತಿಸುವುದು
ಬಿಟ್ಟು,
ಬೇರೆ
ದೇಶದ
ಪ್ರತಿಭೆಗಳಿಗೆ
ಚಾನ್ಸ್
ಕೊಡಲು
ಹೋಗುತ್ತಿದ್ದೀರಾ
ಇದು
ಯಾಕೋ
ಸರಿ
ಕಾಣುತ್ತಿಲ್ಲ
ಎಂದೆಲ್ಲಾ
ಹೇಳಿದ್ದಾರೆ.
ನಮ್ಮವರೇ
ನಿಮ್ಮನ್ನು
ಬೆಳೆಸಿದ್ದು,
ಮೊದಲು
ನಮ್ಮ
ರಾಜ್ಯದ
ಕಲಾವಿದರಿಗೆ
ಪ್ರೋತ್ಸಾಹ
ನೀಡಿ
ಎಂದೆಲ್ಲಾ
ಸಲಹೆ
ಸೂಚನೆ
ನೀಡುತ್ತಿದ್ದಾರೆ.
ಇದೆಲ್ಲದರ
ಆ
ನಡುವೆಯೂ
ಸಹ
ಸರಿಗಮಪ
ಸೀಸನ್
20ರನ್ನ
ಬಹಳ
ವಿಶೇಷವಾಗಿಸಬೇಕು
ಎನ್ನುವ
ಕಾರಣಕ್ಕೆ
ಜೀ
ಕನ್ನಡ
ತಂಡದವರು
ವರ್ಲ್ಡ್
ವೈಡ್
ಆಡಿಶನ್
ಅನ್ನ
ಮಾಡುತ್ತಿದ್ದಾರೆ
ಕೆಲವರಂತೂ
ಇದು
ಒಳ್ಳೆಯ
ಯೋಚನೆ
ಆಗಿದೆ
ಎಂದು
ಶುಭ
ಹಾರೈಸಿದ್ದಾರೆ.
ಇನ್ನು
ಕೆಲವರು
ನಾವು
ಮತ್ತೊಮ್ಮೆ
ವೇದಿಕೆಯಲ್ಲಿ
ಗಾಯಕ
ರಾಜೇಶ್
ಕೃಷ್ಣನ್
ರವರನ್ನ
ಜಡ್ಜ್
ಆಗಿ
ನೋಡಬೇಕು
ಎಂದಿಲ್ಲ
ಹೇಳಿದ್ದಾರೆ.
ವೀಕ್ಷಕರ
ಆಸೆಯನ್ನ
ಪೂರೈಸಲಿ
ಎಂಬುದೇ
ನಮ್ಮ
ಆಶಯವಾಗಿದೆ.
English summary
zee Kannada sarigamapa season 20 srgmp worldwide audition, coming soon, zee Kannada hamsalekha, arjunjanya , vijay prakash
Sunday, July 9, 2023, 12:30
Story first published: Sunday, July 9, 2023, 12:30 [IST]