Sanjay Dutt: ಸಂಜಯ್ ದತ್ ಹುಟ್ಟುಹಬ್ಬದ ಪ್ರಯುಕ್ತ ಲಿಯೊ ಚಿತ್ರತಂಡದಿಂದ ವಿಶೇಷ ಟೀಸರ್ ರಿಲೀಸ್ | Sanjay Dutt: Leo movie team wished Sanjay Dutt on his birthday with special teaser

bredcrumb

Tamil

oi-Srinivasa A

|

ಇಂದು
(
ಜುಲೈ
29
)
ಭಾರತ
ಚಿತ್ರರಂದ
ಎವರ್‌ಗ್ರೀನ್
ಲೆಜೆಂಡರಿ
ನಟ
ಸಂಜಯ್
ದತ್‌ಗೆ
ಹುಟ್ಟುಹಬ್ಬದ
ಸಂಭ್ರಮ.
64ನೇ
ವಸಂತಕ್ಕೆ
ಕಾಲಿಟ್ಟಿರುವ
ಸಂಜಯ್
ದತ್
ಅವರಿಗೆ
ಅವರ
ಅಭಿಮಾನಿಗಳು,
ಸಿನಿಮಾ
ನಟ
ಹಾಗೂ
ನಟಿಯರು,
ಖ್ಯಾತ
ನಿರ್ದೇಶಕರು
ಹಾಗೂ
ಸಿನಿಮಾ
ರಸಿಕರು
ಹುಟ್ಟುಹಬ್ಬದ
ಶುಭಾಶಯವನ್ನು
ಕೋರಿದ್ದಾರೆ.

ಇನ್ನು
ಹೆಚ್ಚಾಗಿ
ಬಾಲಿವುಡ್
ಸಿನಿಮಾಗಳಲ್ಲಿ
ನಟಿಸಿರುವ
ಸಂಜಯ್
ದತ್
ಇದೀಗ
ಸೌತ್
ಚಿತ್ರರಂಗದತ್ತ
ಮುಖ
ಮಾಡಿದ್ದು,
ಕನ್ನಡದ
ಕೆಜಿಎಫ್
ಚಾಪ್ಟರ್
2
ಸೇರಿದಂತೆ
ತಮಿಳು
ಹಾಗೂ
ತೆಲುಗಿನ
ಚಿತ್ರಗಳಿಗಾಗಿ
ವಿಲನ್
ಆಗಿ
ಬಣ್ಣ
ಹಚ್ಚಿದ್ದಾರೆ.
ಹೀಗೆ
ಸಂಜಯ್
ದತ್
ಖಳ
ನಾಯಕನಾಗಿ
ನಟಿಸುತ್ತಿರುವ
ಸೌತ್‌ನ
ಚಿತ್ರಗಳ
ಪೈಕಿ
ಅತಿಹೆಚ್ಚು
ಗಮನ
ಸೆಳೆದಿರುವುದು
ತಮಿಳಿನ
ಚಿತ್ರ
ಲಿಯೊ.

leo-movie-team-wished-sanjay-dutt

ಹೌದು,
ದಳಪತಿ
ವಿಜಯ್
ಹಾಗೂ
ಲೋಕೇಶ್
ಕನಕರಾಜ್
ಕಾಂಬಿನೇಶನ್‌ನಲ್ಲಿ
ಮೂಡಿ
ಬರುತ್ತಿರುವ
ಲಿಯೊ
ಸಿನಿಮಾ
ಸದ್ಯ
ಸಿನಿ
ರಸಿಕರಲ್ಲಿ
ಅತಿದೊಡ್ಡ
ಮಟ್ಟದ
ನಿರೀಕ್ಷೆಯನ್ನು
ಹುಟ್ಟುಹಾಕಿದೆ.
ವಿಭಿನ್ನ
ಮಾಸ್
ಸಿನಿಮಾಗಳನ್ನು
ರೋಮಾಂಚನಕಾರಿ
ಅನುಭವ
ನೀಡುವ
ಮಟ್ಟಕ್ಕೆ
ಕಟ್ಟಿಕೊಡಬಲ್ಲ
ಹಿಟ್
ನಿರ್ದೇಶಕ
ಲೋಕೇಶ್
ಕನಕರಾಜ್
ನಿರ್ದೇಶನ
ಮಾಡುತ್ತಿರುವ

ಚಿತ್ರದ
ಮೇಲೆ
ಸಿನಿ
ರಸಿಕರಿಗೆ
ಬೆಟ್ಟದಷ್ಟು
ನಿರೀಕ್ಷೆ
ಇದೆ.


ಚಿತ್ರದಲ್ಲಿ
ವಿಜಯ್
ಎದುರು
ಖಳ
ನಾಯಕನಾಗಿ
ಬಾಲಿವುಡ್‌ನ
ಸಂಜಯ್
ದತ್
ತೊಡೆ
ತಟ್ಟಿದ್ದು,
ಇಂದು
ಸಂಜು
ಬಾಬಾ
ಹುಟ್ಟುಹಬ್ಬದ
ಪ್ರಯುಕ್ತ
ಲಿಯೊ
ತಂಡ
ವಿಶೇಷವಾದ
ಟೀಸರ್
ಒಂದನ್ನು
ಬಿಡುಗಡೆ
ಮಾಡುವ
ಮೂಲಕ
ಶುಭಕೋರಿದೆ.
ಹೌದು,
ಚಿತ್ರದಲ್ಲಿನ
ಸಂಜಯ್
ದತ್
ಅವರ
ದೃಶ್ಯಗಳನ್ನೊಳಗೊಂಡ
ವಿಶೇಷ
ಟೀಸರ್
ಎಡಿಟ್
ಮಾಡಿಸಿ
ಬಿಡುಗಡೆ
ಮಾಡಲಾಗಿದ್ದು,
ಸಂಜಯ್
ದತ್
ಸಿಕ್ಕಾಪಟ್ಟೆ
ರಿಚ್
ರಗಡ್
ವಿಲನ್
ಲುಕ್‌ನಲ್ಲಿ
ಮಿಂಚಿದ್ದಾರೆ.

ಸಿಗರೇಟ್
ಸೇದುತ್ತಾ
ಸ್ವಾಗ್
ಆಗಿ
ಸಿನಿ
ರಸಿಕರ
ಮುಂದೆ
ಬಂದಿರುವ
ಸಂಜಯ್
ದತ್
ಅವರು

ಚಿತ್ರದಲ್ಲಿ
‘ಆಂಟನಿ
ದಾಸ್’
ಎಂಬ
ವಿಲನ್
ಪಾತ್ರವನ್ನು
ನಿರ್ವಹಿಸಿದ್ದಾರೆ
ಎಂಬುದು
ಟೀಸರ್
ಮೂಲಕ
ಬಹಿರಂಗಗೊಂಡಿದೆ.

ಇನ್ನು
ಲಿಯೊ
ಚಿತ್ರ
ಕಳೆದ
ವರ್ಷದ
ಕೊನೆಯಲ್ಲಿ
ಸೆಟ್ಟೇರಿ,
ಕೆಲವೇ
ತಿಂಗಳುಗಳಲ್ಲಿ
ಚಿತ್ರೀಕರಣ
ಮುಗಿಸಿದೆ.
ಲೋಕೇಶ್
ಕ‌‌ನಕರಾಜ್
ಇಷ್ಟು
ಬೇಗ
ಚಿತ್ರೀಕರಣ
ಮುಗಿಸಿರುವುದು
ಸದ್ಯ
ಸಾಮಾಜಿಕ‌
ಜಾಲತಾಣದಲ್ಲಿ
ಭಾರೀ
ಚರ್ಚೆಗೆ
ಕಾರಣವಾಗಿದೆ.

ಹೌದು,
ಲಿಯೊ
ಚಿತ್ರದ
ಸಂಪೂರ್ಣ
ಚಿತ್ರೀಕರಣವನ್ನು
ಕೇವಲ
129
ದಿನಗಳಲ್ಲಿ
ಮುಗಿಸಿದ್ದು,
ಸಿಕ್ಕಾಪಟ್ಟೆ
ಹೈಪ್
ಇರುವ
ಚಿತ್ರವನ್ನು
ಇಷ್ಟು
ಬೇಗ
ಮುಗಿಸುವುದು
ಸಾಹಸವೇ
ಸರಿ
ಎಂದು
ಸಿನಿ‌
ರಸಿಕರು
ಆಶ್ಚರ್ಯ
ಹೊರಹಾಕಿದ್ದಾರೆ.
ಆದರೆ
ಲೋಕೇಶ್
ಕನಕರಾಜ್
ಲಿಯೋ
ಚಿತ್ರಕ್ಕಿಂತ
ವೇಗವಾಗಿ
ವಿಕ್ರಮ್
ಚಿತ್ರದ
ಚಿತ್ರೀಕರಣವನ್ನು
ಮುಗಿಸಿದ್ದರು
ಎಂಬುದನ್ನು
ಇಲ್ಲಿ
ಗಮನಿಸಬೇಕಿದೆ.

ಹಾಗಾದರೆ
ಲೋಕೇಶ್
ಕನಕರಾಜ್
ನಿರ್ದೇಶನದ
ಎಲ್ಲಾ
ಚಿತ್ರಗಳ
ಚಿತ್ರೀಕರಣ
ಎಷ್ಟು
ದಿನಗಳವರೆಗೆ
ನಡೆದಿವೆ
ಎಂಬ
ಮಾಹಿತಿ

ಕೆಳಕಂಡಂತಿವೆ..

ಮಾನಗರಂ:
45
ದಿನಗಳು

ಖೈದಿ
:
62
ರಾತ್ರಿಗಳು

ಮಾಸ್ಟರ್
:
129
ದಿನಗಳು

ವಿಕ್ರಮ್
:
110.
ದಿನಗಳು

ಲಿಯೊ
:
125
ದಿನಗಳು

English summary

Sanjay Dutt: Leo movie team wished Sanjay Dutt on his birthday with special teaser

Saturday, July 29, 2023, 21:35

Story first published: Saturday, July 29, 2023, 21:35 [IST]

Source link