Sai Kumar: ₹38 ಲಕ್ಷ ಬಜೆಟ್ಟಿನ ‘ಪೊಲೀಸ್ ಸ್ಟೋರಿ’ ಬಾಚಿದ್ದು ₹23 ಕೋಟಿ: ಸಾಯಿಕುಮಾರ್ ಪಡೆದ ಸಂಭಾವನೆ ಎಷ್ಟು? | Did you know how much Sai Kumar was paid for Police story

bredcrumb

Features

oi-Narayana M

|

ಡೈಲಾಗ್
ಕಿಂಗ್
ಸಾಯಿಕುಮಾರ್
ಹುಟ್ಟುಹಬ್ಬದ
ಸಂಭ್ರಮದಲ್ಲಿದ್ದಾರೆ.
ದಕ್ಷಿಣ
ಭಾರತ
ಕಂಠದಾನ
ಕಲಾವಿದರಾದ
ಪಿಜೆ
ಶರ್ಮಾ
ಪುತ್ರ
ಸಾಯಿಕುಮಾರ್
ಆಂಧ್ರದಲ್ಲಿ
ಹುಟ್ಟಿದರು.
ಮುಂದೆ
ಚೆನ್ನೈನಲ್ಲಿ
ಅವರ
ಕುಟುಂಬ
ಸೆಟ್ಲ್
ಆಗಿತ್ತು.
ಆರಂಭದಲ್ಲಿ
ಕಂಠದಾನ
ಕಲಾವಿದರಾಗಿ,
ಪೋಷಕ
ಕಲಾವಿದರಾಗಿ
ಸಾಯಿಕುಮಾರ್
ಕೆಲಸ
ಮಾಡಿದರು.
ಆದರೆ
‘ಪೊಲೀಸ್
ಸ್ಟೋರಿ’
ಚಿತ್ರದಿಂದ
ಹೀರೋ
ಆಗಿ
ದೊಡ್ಡ
ಬ್ರೇಕ್
ಸಿಕ್ತು.

ಕನ್ನಡದ
ಕಲ್ಟ್
ಕ್ಲಾಸಿಕ್
ಸಿನಿಮಾಗಳ
ಸಾಲಿನಲ್ಲಿ
ಥ್ರಿಲ್ಲರ್
ಮಂಜು
ನಿರ್ದೇಶನದ
‘ಪೊಲೀಸ್
ಸ್ಟೋರಿ’
ಸಿನಿಮಾ
ಕೂಡ
ನಿಲ್ಲುತ್ತದೆ.
ಅಲ್ಲಿವರೆಗೂ
ಸಾಕಷ್ಟು
ಪೊಲೀಸ್
ಅಧಿಕಾರಿಗಳ
ಬಗ್ಗೆ
ಕನ್ನಡದಲ್ಲಿ
ಸಿನಿಮಾಗಳು
ಬಂದಿದ್ದವು.
ಆದರೆ
ಸಾಯಿಕುಮಾರ್
ಸ್ಯಾಂಡಲ್‌ವುಡ್‌ನಲ್ಲಿ
ಅಗ್ನಿ
ಆಗಿ
ಕಾಪ್
ಡ್ರಾಮಾಗಳಿಗೆ
ಒಳ್ಳೆ
ಖದರ್
ತಂದುಕೊಟ್ಟರು.
ಪೊಲೀಸರ
ಗತ್ತು
ಎಂಥದ್ದು
ಎಂದು
ತೋರಿಸಿದರು.
ಸಾಯಿ
ಖಡಕ್
ಡೈಲಾಗ್‌ಗಳಿಗೆ
ಸಿನಿರಸಿಕರು
ಫಿದಾ
ಆಗಿದ್ದರು.
1996ರಲ್ಲಿ
ಬಂದ
‘ಪೊಲೀಸ್
ಸ್ಟೋರಿ’
ಚಿತ್ರವನ್ನು
ಕನ್ನಡ
ಸಿನಿರಸಿಕರು
ಇಂದಿಗೂ
ಮರೆತ್ತಿಲ್ಲ.

Did you know how much Sai Kumar was paid for Police story

ಸಾಹಸ
ನಿರ್ದೇಶಕ
ಥ್ರಿಲ್ಲರ್
ಮಂಜು
‘ಪೊಲೀಸ್
ಸ್ಟೋರಿ’
ಚಿತ್ರಕ್ಕೆ
ಆಕ್ಷನ್
ಕಟ್
ಹೇಳಿದ್ದರು.
ಡೇವಿಡ್

ಚಿತ್ರಕ್ಕೆ
ಕಥೆ
ಒದಗಿಸಿದ್ದರು.
ಸಾಯಿಕುಮಾರ್
ತಂದೆ
ಪಿಜೆ
ಶರ್ಮಾ,
ಶೋಭರಾಜ್,
ಸತ್ಯಪ್ರಕಾಶ್,
ಅವಿನಾಶ್,
ಗಿರಿಜಾ
ಲೋಕೇಶ್,
ರಾಕ್‌ಲೈನ್
ವೆಂಕಟೇಶ್
ಚಿತ್ರದ
ತಾರಾಗಣದಲ್ಲಿದ್ದರು.
ಯಾವುದೇ
ನಿರೀಕ್ಷೆ
ಇಲ್ಲದೇ
ಬಂದಿದ್ದ
ಸಿನಿಮಾ
ಸೂಪರ್
ಹಿಟ್
ಆಗಿತ್ತು.
ಬಳಿಕ
ತೆಲುಗು,
ತಮಿಳು,
ಹಿಂದಿಗೂ
ಡಬ್
ಆಗಿ
ಸಕ್ಸಸ್
ಕಂಡಿತ್ತು.

ಕನ್ನಡ ಸಿನಿ ಕಾರ್ಮಿಕರ ನೆರವಿಗೆ ನಿಂತ ಸಾಯಿ ಕುಮಾರ್ ಸಹೋದರರುಕನ್ನಡ
ಸಿನಿ
ಕಾರ್ಮಿಕರ
ನೆರವಿಗೆ
ನಿಂತ
ಸಾಯಿ
ಕುಮಾರ್
ಸಹೋದರರು

ವಿಷ್ಣುವರ್ಧನ್
ಮಾಡಬೇಕಿದ್ದ
ಚಿತ್ರ

ಅಂದಹಾಗೆ
ಸಾಹಸಸಿಂಹ
ವಿಷ್ಣುವರ್ಧನ್
‘ಪೊಲೀಸ್
ಸ್ಟೋರಿ’
ಚಿತ್ರದಲ್ಲಿ
ಹೀರೊ
ಆಗಿ
ನಟಿಸಬೇಕು
ಅನ್ನೋದು
ಥ್ರಿಲ್ಲರ್
ಮಂಜು
ಆಸೆಯಾಗಿತ್ತು.
ಆದರೆ
ಬಜೆಟ್
ಕಾರಣಕ್ಕೆ

ಆಸೆ
ಕೈಗೂಡಲಿಲ್ಲ.
ಬಳಿಕ
ಕುಮಾರ್
ಗೋವಿಂದ್,
ಎಂದುಕೊಂಡರೂ
ಅವರು
ಬೇರೆ
ಸಿನಿಮಾಗಳಲ್ಲಿ
ಬ್ಯುಸಿ
ಆಗಿದ್ದರಿಂದ
ಸಾಧ್ಯವಾಗಿರಲಿಲ್ಲ.
ಕೊನೆಗೆ
ಶಾರ್ಟ್
ಟೆಂಪರ್
ಪೊಲೀಸ್
ಆಫೀಸರ್
ಅಗ್ನಿ
ಆಗಿ
ನಟಿಸುವ
ಅವಕಾಶ
ಸಾಯಿಕುಮಾರ್
ಪಾಲಾಗಿತ್ತು.

38
ಲಕ್ಷ
ರೂ.
ಬಜೆಟ್
ಸಿನಿಮಾ

ಅವತ್ತಿನ
ಕಾಲಕ್ಕೆ
38
ಲಕ್ಷ
ರೂ.
ಬಂಡವಾಳ
ಹೂಡಿ
‘ಪೊಲೀಸ್
ಸ್ಟೋರಿ’
ಸಿನಿಮಾ
ನಿರ್ಮಾಣ
ಮಾಡಲಾಗಿತ್ತು.
ಥ್ರಿಲ್ಲರ್
ಮಂಜು
ಸಹೋದರ
ಗುರುಮೂರ್ತಿ,
ನರಸಿಂಹ
ಮೂರ್ತಿ
ಚಿತ್ರಕ್ಕೆ
ಹಣ
ಹಾಕಿದ್ದರು.
ಜೆ.
ಜಿ
ಕೃಷ್ಣ
ಛಾಯಾಗ್ರಹಣ,
ಸಾಧು
ಕೋಕಿಲ
ಸಂಗೀತ
ಚಿತ್ರಕ್ಕೆ
ಪ್ಲಸ್
ಆಗಿತ್ತು.
ಸಿನಿಮಾ
ಕನ್ನಡದಲ್ಲಿ
ಶತದಿನೋತ್ಸವ
ಆಚರಿಸಿಕೊಂಡಿತ್ತು.
11
ವರ್ಷಗಳ
ಬಳಿಕ
ಚಿತ್ರದ
ಸೀಕ್ವೆಲ್
ಕೂಡ
ಪ್ರೇಕ್ಷಕರ
ಮುಂದೆ
ಬಂದಿತ್ತು.

Did you know how much Sai Kumar was paid for Police story

4
ಭಾಷೆಗಳಲ್ಲಿ
₹23
ಕೋಟಿ
ಗಳಿಕೆ

ಸದ್ಯ
ಎಲ್ಲಾ
ಕಡೆ
ಪ್ಯಾನ್
ಇಂಡಿಯಾ
ಟ್ರೆಂಡ್
ನಡೀತಿದೆ.
ಆದರೆ
ಅವತ್ತಿನ
ಕಾಲಕ್ಕೆ
‘ಪೊಲೀಸ್
ಸ್ಟೋರಿ’
ಚಿತ್ರವನ್ನು
ತೆಲುಗು,
ತಮಿಳು,
ಹಿಂದಿಗೆ
ಡಬ್
ಮಾಡಿ
ರಿಲೀಸ್
ಮಾಡಿದ್ದರು.
ಎಲ್ಲಾ
ಭಾಷೆಗಳಲ್ಲೂ
ಸಿನಿಮಾ
ಸೂಪರ್
ಹಿಟ್
ಆಗಿತ್ತು.
ಕನ್ನಡದಲ್ಲಿ
7.5
ಕೋಟಿ
ರೂ.
ಕಲೆಕ್ಷನ್
ಮಾಡಿದ್ದ
ಸಿನಿಮಾ
ತೆಲುಗಿನಲ್ಲಿ
8
ಕೋಟಿ
ರೂ.
ಹಿಂದಿ
3
ಕೋಟಿ
ರೂ.
ತಮಿಳು
2
ಕೋಟಿ
ರೂ.
ಸೇರಿ
ಬರೋಬ್ಬರಿ
ಕಲೆಕ್ಷನ್
20
ಕೋಟಿ
ಗಡಿ
ದಾಟಿತ್ತು
ಎಂದು
ಥ್ರಿಲ್ಲರ್
ಮಂಜು
ಫಿಲ್ಮಿಬೀಟ್‌ಗೆ
ಮಾಹಿತಿ
ನೀಡಿದ್ದಾರೆ.

ಸಾಯಿಕುಮಾರ್‌ಗೆ
₹55
ಸಾವಿರ
ಸಂಭಾವನೆ

‘ಪೊಲೀಸ್
ಸ್ಟೋರಿ’
ಚಿತ್ರದ
ಖಡಕ್
ಕಾಪ್
ಅಗ್ನಿ
ಪಾತ್ರ
ಸಂಚಲನ
ಸೃಷ್ಟಿಸಿತ್ತು.
ಅಲ್ಲಿಂದ
ಮುಂದೆ
ಹಲವು
ಸಿನಿಮಾಗಳಲ್ಲಿ
ಸಾಯಿಕುಮಾರ್
ಇಂತದ್ದೇ
ಪೊಲೀಸ್
ಆಫೀಸರ್
ಪಾತ್ರದಲ್ಲಿ
ಅಬ್ಬರಿಸಿದ್ದರು.

ಚಿತ್ರದಲ್ಲಿ
ಡೈಲಾಗ್‌
ಕಿಂಗ್
ಮ್ಯಾನರಿಸಂ,
ಡೈಲಾಗ್
ಡೆಲಿವರಿ
ಟ್ರೆಂಡ್
ಕ್ರಿಯೇಟ್
ಮಾಡಿತ್ತು.
ಅಂದಹಾಗೆ

ಚಿತ್ರಕ್ಕೆ
ಡೈಲಾಗ್
ಕಿಂಗ್
55
ಸಾವಿರ
ರೂ.
ಸಂಭಾವನೆ
ಪಡೆದಿದ್ದರು.
ಅವತ್ತಿನ
ಕಾಲಕ್ಕೆ
ಹೊಸ
ನಟನಿಗೆ
ಇದು
ದೊಡ್ಡ
ಮೊತ್ತದ
ಸಂಭಾವನೆ
ಎಂದು
ಥ್ರಿಲ್ಲರ್
ಮಂಜು
ಹೇಳಿದ್ದಾರೆ.

English summary

Happy Birthay Dialogue king: How much Sai Kumar was paid for Super hit Police story film. know more.

Thursday, July 27, 2023, 17:31

Story first published: Thursday, July 27, 2023, 17:31 [IST]

Source link