Rent in Bengaluru: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವವರಿಗಾಗಿ ‘ಹೌಸ್‌ ಹಂಟ್‌ ಪ್ಯಾಕೇಜ್‌’ ಆರಂಭಿಸಿದ ಬ್ರೋಕರ್‌ಗಳು- ಏನಿದ | Rent in Bengaluru: ‘House Hunt Package’ for rent house seekers- What is that?

Bengaluru

oi-Ravindra Gangal

|

Google Oneindia Kannada News

ಬೆಂಗಳೂರು, ಜುಲೈ 28: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಕೋವಿಡ್‌ ಅವಧಿಯಲ್ಲಿ ಬೆಂಗಳೂರು ತೊರೆದಿದ್ದ ಬಹುತೇಕ ಟೆಕ್ಕಿಗಳು ಮತ್ತೆ ಮಹಾನಗರಕ್ಕೆ ಮರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಗಳ ಬಾಡಿಗೆ ದರಗಳು ಹೆಚ್ಚುತ್ತಲೇ ಇವೆ. ಈಗ ಮನೆ ಹುಡುಕುವವರಿಗಾಗಿ ಬ್ರೋಕರ್‌ಗಳು ಹೊಸ ಐಡಿಯಾವೊಂದನ್ನು ಮಾಡಿದ್ದಾರೆ. ‘ಹೌಸ್‌ ಹಂಟ್‌ ಪ್ಯಾಕೇಜ್‌’ ಗಳನ್ನು ನೀಡುತ್ತಿದ್ದಾರೆ. ಇದೇನಿದು ಅಂತೀರಾ? ಈ ವರದಿ ಓದಿ.

ಹೌಸ್‌ ಹಂಟ್‌ ( ಮನೆ ಹುಡುಕುವುದು ) ಪ್ಯಾಕೇಜ್‌

ಬಾಡಿಗೆ ಮನೆಗಳಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ ಹೆಚ್ಚುತ್ತಿದೆ. ಬಾಡಿಗೆ ದರಗಳು ಮುಗಿಲು ಮುಟ್ಟುತ್ತಿವೆ. ಆದರೂ, ಬೆಂಗಳೂರಿನಲ್ಲಿ ಯೋಗ್ಯವಾದ ಬಾಡಿಗೆ ಮನೆಗಳನ್ನು ಹುಡುಕುವುದೇ ಕಷ್ಟದ ಕೆಲಸವೆಂದು ಹೇಳಬಹುದು. ಈ ಹಿನ್ನೆಲೆಯಲ್ಲಿ, ಬಾಡಿಗೆ ಮನೆ ಹುಡುಕಲು ಸರಳ ವಿಧಾನವೊಂದನ್ನು ಬ್ರೋಕರ್‌ಗಳು ಕಂಡುಕೊಂಡಿದ್ದಾರೆ.

Rent in Bengaluru: House Hunt Package for rent house seekers- What is that?

ಬೆಂಗಳೂರಿನಲ್ಲಿ ಅನೇಕ ಕಂಪನಿಗಳು ಹೈಬ್ರಿಡ್‌ ಕೆಲಸದ ವಿಧಾನವನ್ನು ಅಳವಡಿಸಿಕೊಳ್ಳುತ್ತಿವೆ. ವರ್ಕ್‌ ಫ್ರಂ ಹೋಮ್‌ ಹೆಚ್ಚು ಕಮ್ಮಿ ಕೊನೆಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಟೆಕ್ಕಿಗಳು ಬಾಡಿಗೆ ಮನೆಗಳ ಹುಡುಕಾಟದಲ್ಲಿದ್ದಾರೆ. ಅಂತವರಿಗಾಗಿ ಪಿಕ್-ಅಪ್ ಹಾಗೂ ಡ್ರಾಪ್ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಈ ಮೂಲಕ ಹೌಸ್‌ ಹಂಟ್‌ ಪ್ಯಾಕೇಜ್‌ಗಳನ್ನು ನೀಡಲು ಬ್ರೋಕರ್‌ಗಳು ಆರಂಭಿಸಿದ್ದಾರೆ.

ಮನಿಕಂಟ್ರೋಲ್ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಬಾಡಿಗೆ ಆಸ್ತಿಗಳು ಶೇಕಡಾ 40 ರಷ್ಟು ಹೆಚ್ಚಾಗಿದೆ. ಲಭ್ಯವಿರುವ ಉತ್ತಮ ಬಾಡಿಗೆ ಮನೆಗಳನ್ನು ಹುಡುಕಲು ಏಜೆಂಟ್‌ಗಳ ಸಹಾಯ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬ್ರೋಕರ್‌ಗಳು ‘ಹೌಸ್‌ ಹಂಟ್‌ ಪ್ಯಾಕೇಜ್‌’ ಎಂಬ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.

Rent in Bengaluru: House Hunt Package for rent house seekers- What is that?

ಇದು ಸುಮಾರು ₹10,000 ದಿಂದ ಪ್ರಾರಂಭವಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ಸುಮಾರು 5ರಿಂದ 6 ಮನೆಗಳಿಗೆ ಬ್ರೋಕರ್‌ಗಳು ಬಾಡಿಕೆ ಮನೆ ಹುಡುಕುವವರನ್ನು ಕರೆದುಕೊಂಡು ಹೋಗುತ್ತಾರೆ. ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್‌ಗಳಂತಹ ವಿವಿಧ ಕಾರುಗಳಲ್ಲಿ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ ಇರುತ್ತದೆ.

ಗ್ರಾಹಕರ ಆದ್ಯತೆಗೆ ಅನುಗುಣವಾಗಿ ಹೌಸ್ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ ಎಂದು ಬೆಂಗಳೂರು ಮೂಲದ ರಿಯಾಲ್ಟಿ ಕಾರ್ಪ್ಸ್ ಸಂಸ್ಥಾಪಕ ಸುನೀಲ್ ಸಿಂಗ್ ಹೇಳಿದ್ದಾರೆಂದು ಮನಿ ಕಂಟ್ರೋಲ್ ವರದಿ ಉಲ್ಲೇಖಿಸಿದೆ.

Rent in Bengaluru: House Hunt Package for rent house seekers- What is that?

ಸಿಂಗ್ಸ್ ರಿಯಲ್ ಕಾರ್ಪ್ ಕೂಡ ವಿಮಾನ ನಿಲ್ದಾಣದಿಂದ ಹೋಟೆಲ್‌ಗಳಿಗೆ ಹೆಚ್ಚಿನ ಬೆಲೆಯಲ್ಲಿ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯವನ್ನು ನೀಡುತ್ತದೆ. ವಿಶೇಷವಾಗಿ ವಲಸಿಗರು ಮತ್ತು ಕಾರ್ಪೊರೇಟ್ ಗ್ರಾಹಕರಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಹೌಸ್‌ ಹಂಟ್‌ ಪ್ಯಾಕೇಜ್‌ಗೆ ಬೇಡಿಕೆ ಹೆಚ್ಚಿದೆ ಮತ್ತು ಅನೇಕ ಸ್ಥಳೀಯರು ಅವರ ಸೇವೆಯನ್ನು ಬಾಡಿಗೆ ಮನೆ ಹುಡುಕುವುದಕ್ಕಾಗಿ ಬಳಸಿದ್ದಾರೆ ಎಂದು ಕಂಪನಿ ಹೇಳಿದೆ.

ಬೆಂಗಳೂರಿನಲ್ಲಿ ಹೆಚ್ಚಿದ ಬಾಡಿಗೆ ಮನೆ ಬೇಡಿಕೆ

ಬೆಂಗಳೂರಿನಲ್ಲಿ ಬಾಡಿಗೆ ಬೆಲೆಗಳು ಮತ್ತೊಮ್ಮೆ ಗಗನಕ್ಕೇರಿವೆ. ಪ್ರಮುಖ ಸ್ಥಳಗಳಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ಸುಮಾರು ₹ 35,000 ರಿಂದ ₹ 38,000 ಕ್ಕೆ ಲಭ್ಯವಿದೆ ಎಂದು ವರದಿ ಹೇಳಿದೆ. ಇದು ಮೊದಲು ₹ 25,000 ಕ್ಕೆ ಇತ್ತು. ಪ್ರತಿಷ್ಠಿತ ಪ್ರದೇಶಗಳಲ್ಲಿ 2 ಬಿಎಚ್‌ಕೆ ಫ್ಲಾಟ್‌ಗಳು ₹ 50,000 ಕ್ಕಿಂತ ಕಡಿಮೆಗೆ ಲಭ್ಯವಿಲ್ಲ.

Rent in Bengaluru: House Hunt Package for rent house seekers- What is that?

ಇದಲ್ಲದೆ, ಸರ್ಜಾಪುರ, ಇಂದಿರಾನಗರ, ಎಚ್‌ಎಸ್‌ಆರ್ ಲೇಔಟ್‌ನಂತಹ ನಗರದ ಪ್ರಮುಖ ಪ್ರದೇಶಗಳಲ್ಲಿ 3 ಬಿಎಚ್‌ಕೆ ಫ್ಲಾಟ್‌ಗಳು ₹ 80,000 ಕ್ಕಿಂತ ಹೆಚ್ಚಿದೆ. ಬಾಡಿಗೆದಾರರು ಬೇಗೂರು ಅಥವಾ ಹೊಸೂರು ರಸ್ತೆಯಂತಹ ಸ್ಥಳಗಳನ್ನು ನೋಡಲು ಆರಂಭಿಸಿದ್ದಾರೆ. ಅಲ್ಲಿ ಫ್ಲಾಟ್‌ಗಳು ಇನ್ನೂ ₹15,000- ₹20,000 ಕ್ಕೆ ಸಿಗುತ್ತವೆ.

English summary

Rent in Bengaluru: The demand for rental houses in Bangalore continues to increase. Most of the techies who left Bangalore during the Covid period are returning to the metropolis,

Story first published: Friday, July 28, 2023, 11:15 [IST]

Source link