Tv
oi-Narayana M
By ಶೃತಿ ಹರೀಶ್ ಗೌಡ
|
ಚಾರು
ಮನೆಯವರನ್ನೆಲ್ಲ
ತನ್ನ
ಕಡೆ
ಸೆಳೆದುಕೊಳ್ಳಲು
ನಾನಾ
ಪ್ರಯತ್ನ
ಮಾಡುತ್ತಿದ್ದಾಳೆ.
ಆದರೆ
ಅದು
ಒಂದಲ್ಲ
ಒಂದು
ಸಮಸ್ಯೆ
ಹುಟ್ಟು
ಹಾಕುತ್ತಿದೆ.
ಚಾರು
ಶ್ರೀಮಂತರ
ಮನೆಯಲ್ಲಿ
ಬೆಳೆದ
ಹುಡುಗಿ.
ಆಚಾರ್ಯರ
ಮನೆಗೆ
ಹೊಂದಿಕೊಳ್ಳುವುದು
ಸ್ವಲ್ಪ
ಕಷ್ಟವಾಗಿದೆ
.
ಪದ್ದತಿ,
ಆಚಾರ
ವಿಚಾರದಲ್ಲಿ
ಬಹಳ
ಕಟ್ಟುನಿಟ್ಟು.
ಹಾಗಾಗಿ
ಆ
ಮನೆಗೆ
ಚಾರುಗೆ
ಹೊಂದುಕೊಳ್ಳುವುದು
ಅಷ್ಟು
ಸುಲಭವಲ್ಲ.
ಜಾನಕಿ,
ಚಾರು
ಕಷ್ಟಕ್ಕೆ
ಹೆಗಲಾಗಿದ್ದಾಳೆ.
ಅಮ್ಮನ
ಸ್ಥಾನದಲ್ಲಿ
ನಿಂತುಕೊಂಡು
ಆಕೆಯ
ಬೇಕು
ಬೇಡಗಳನ್ನ
ನೋಡಿಕೊಳ್ಳುತ್ತಿದ್ದಾಳೆ.
ಮನೆಯಲ್ಲಿ
ಯಾರೂ
ಸಹ
ಚಾರು
ಬಳಿ
ಸರಿಯಾಗಿ
ಮಾತನಾಡುವುದಿಲ್ಲ.
ಜಾನಕಿ
ಮಾತ್ರ
ಮಾತನಾಡುತ್ತಾಳೆ.
ಅದು
ಸಹ
ಕದ್ದು
ಮುಚ್ಚಿ.
ಆಚಾರ್ಯರು,
ಚಾರು
ಹಾಗೂ
ರಾಮಾಚಾರಿ
ಬಳಿ
ಯಾರೂ
ಮಾತನಾಡಬಾರದು
ಎಂದು
ತಾಕೀತು
ಮಾಡಿದ್ದಾರೆ.
ವೈಶಾಖಗೆ
ದಿನದಿಂದ
ದಿನಕ್ಕೆ
ಚಾರು
ಮೇಲೆ
ದ್ವೇಷ
ಹೆಚ್ಚಾಗುತ್ತಿದೆ.
ಹೇಗಾದರೂ
ಮಾಡಿ
ಚಾರುನ
ಮನೆ
ಬಿಟ್ಟು
ಆಚೆ
ಕಳುಹಿಸಬೇಕು
ಎಂದು
ಪ್ಲ್ಯಾನ್
ಮಾಡುತ್ತಿದ್ದಾಳೆ.
ಈ
ಕಡೆ
ಮಾನ್ಯತಾ,
ರಾಮಾಚಾರಿ
ಹೆಸರು
ಕೆಡಿಸಲು
ಪ್ಲ್ಯಾನ್
ಇಬ್ಬರನ್ನು
ದೂರ
ಮಾಡುವ
ಲೆಕ್ಕಾಚಾರದಲ್ಲಿದ್ದಾಳೆ.
ರಾಮಾಚಾರಿಗೆ
ಬಬ್ಲು
ಸಾಂತ್ವನ
ಈಗ
ರಾಮಾಚಾರಿಗೆ
ಒಂದೇ
ಚಿಂತೆ.
ಅದು
ಏನೆಂದರೆ
ತನ್ನ
ತಂದೆ
ನನ್ನ
ಬಗ್ಗೆ
ತಪ್ಪು
ಕಲ್ಪನೆ
ಮಾಡಿಕೊಂಡಿದ್ದಾರೆ.
ನಾನು
ಯಾವ
ಕಾರಣಕ್ಕೆ
ಮದುವೆಯಾದೆ
ಎಂಬ
ಸತ್ಯ
ಅವರಿಗೆ
ತಿಳಿಯಬೇಕು.
ಚಾರು
ನಮ್ಮ
ಮನೆಗೆ
ತಕ್ಕ
ಸೊಸೆಯಾಗಿ
ಬಾಳಬೇಕು
ಅನ್ನೋದು.
ಎಲ್ಲವನ್ನು
ಸಹ
ಬಬ್ಲು
ಸರ್
ಮುಂದೆ
ರಾಮಾಚಾರಿ
ಹೇಳಿದ್ದಾನೆ.
ಇದಕ್ಕೆ
ಬಬ್ಲು
ಸರ್
ಕಾಲವೇ
ಎಲ್ಲವನ್ನು
ನಿರ್ಧಾರ
ಮಾಡುತ್ತದೆ.
ನೀನು
ಸುಮ್ಮನೆ
ಚಿಂತೆ
ಮಾಡಬೇಡ
ಎಂದು
ಧೈರ್ಯದ
ಮಾತುಗಳನ್ನ
ಆಡಿ
ರಾಮಾಚಾರಿಗೆ
ಸಾಂತ್ವನ
ಹೇಳಿದ್ದಾರೆ.
ಅಳಿಯನ
ಭೇಟಿಯಾದ
ಜೈ
ಶಂಕರ್
ಎಲ್ಲಾ
ಮುಗಿದ
ಮೇಲೆ
ಜೈ
ಶಂಕರ್
ತನ್ನ
ಅಳಿಯ
ರಾಮಾಚಾರಿನ
ಭೇಟಿಯಾಗಿದ್ದಾನೆ.
ಇದೇ
ಸಂದರ್ಭದಲ್ಲಿ
ನನ್ನ
ಮಗಳ
ಹಾಗೂ
ನಿಮ್ಮ
ಸಂಬಂಧ
ಚೆನ್ನಾಗಿ
ಇದೆ
ತಾನೇ
ಎಂದು
ಕೇಳಿದ್ದಾನೆ.
ನಿಮ್ಮ
ಮತ್ತು
ಚಾರು
ಸಂಬಂಧ
ಗಟ್ಟಿಯಾಗಿದ್ದರೆ
ಮಾತ್ರ
ನಿಮ್ಮಿಬ್ಬರ
ದಾಂಪತ್ಯ
ಚೆನ್ನಾಗಿ
ಇರುತ್ತದೆ,
ಎಂಬ
ಮಾತನ್ನು
ಸಹ
ಜೈ
ಶಂಕರ್
ಎಂದಿದ್ದಾನೆ.
ಮಾನ್ಯತಾ
ಹೇಗಾದರೂ
ಮಾಡಿ
ನಿಮ್ಮಿಬ್ಬರನ್ನ
ದೂರ
ಮಾಡಿ
ವಾಪಸ್
ಚಾರುವನ್ನು
ನಮ್ಮ
ಮನೆಗೆ
ಕರೆದುಕೊಂಡು
ಬರಬೇಕು
ಎಂದುಕೊಂಡಿದ್ದಾಳೆ.
ನಿಮ್ಮಿಬ್ಬರ
ಸಂಬಂಧ
ಗಟ್ಟಿಯಾಗಿ
ಇದ್ದರೆ
ಮಾನ್ಯತಾ
ಮಾಡುವ
ಯಾವುದೇ
ಪ್ಲಾನ್
ವರ್ಕ್
ಔಟ್
ಆಗುವುದಿಲ್ಲ
ಎಂದು
ಹೇಳಿದ್ದಾರೆ.
ನಿಮ್ಮಿಬ್ಬರ
ಸಂಸಾರವನ್ನು
ಮುರಿದು
ಹಾಕಲು
ಅವಳ
ಫ್ರೆಂಡ್ಸ್
ಹಾಗೂ
ಲಾಯರ್
ಮುಖಾಂತರ
ಹಲವಾರು
ಐಡಿಯಾಗಳನ್ನ
ಮಾಡಿದ್ದಾಳೆ
ಎಂದು
ಅಳಿಯನ
ಮುಂದೆ
ಜೈ
ಶಂಕರ್
ವಿವರಿಸಿದ್ದಾರೆ.
ಅಳಿಯನ
ಬಳಿ
ಮಾತು
ಪಡೆದ
ಜೈ
ಶಂಕರ್
ರಾಮಾಚಾರಿ
ಕೈಯಿಂದದ
ಜೈ
ಶಂಕರ್
ಪ್ರಾಮೀಸ್
ತೆಗೆದುಕೊಂಡಿದ್ದಾರೆ.
ನನ್ನ
ಮಗಳನ್ನು
ತುಂಬಾ
ಚೆನ್ನಾಗಿ
ನೋಡಿಕೊಳ್ಳಿ,
ಎಂತಹ
ಪರಿಸ್ಥಿತಿಯೇ
ಬಂದರು
ಸಹ
ಅವಳ
ಕೈ
ಬಿಡಬೇಡಿ
ಎಂದಿದ್ದಾರೆ.
ರಾಮಾಚಾರಿ
ಸಹ
ಮಾವನಿಗೆ
ಚಾರುವನ್ನ
ನಾನು
ಕೈ
ಬಿಡುವುದಿಲ್ಲ.
ಎಂತಹ
ಕಠಿಣ
ಪರಿಸ್ಥಿತಿಯೇ
ಬಂದರು
ಸಹ
ನಾನು
ಅವರ
ಜೊತೆ
ನಿಲ್ಲುತ್ತೇನೆ
ಎಂದು
ಮಾತು
ಕೊಟ್ಟಿದ್ದಾನೆ.
‘ಸೀತಾ
ರಾಮ’
ಧಾರಾವಾಹಿಯಲ್ಲಿ
ಜ್ಯೋತಿ
ಕಿರಣ್
ಹೊಸ
ವರಸೆ
ನೀವು
ನಿಮ್ಮ
ಮಗಳ
ಬಗ್ಗೆ
ಚಿಂತೆ
ಮಾಡಬೇಡಿ
ನಾನು
ಹಾಗೂ
ಚಾರು
ಮೇಡಂ
ತುಂಬಾ
ಚೆನ್ನಾಗಿ
ಇದ್ದೇವೆ
ಎಂದು
ಜೈ
ಶಂಕರ್
ಬಳಿ
ರಾಮಾಚಾರಿ
ಹೇಳಿದ್ದಾನೆ.
ನನಗೆ
ನನ್ನ
ಅಳಿಯನ
ಮೇಲೆ
ನಂಬಿಕೆ
ಇದೆ
ಎಂದು
ಜೈ
ಶಂಕರ್
ಹೇಳಿದ್ದಾನೆ.
ಇನ್ನು
ಇದೇ
ವೇಳೆ
ಮುಂದಿನ
ಸಲ
ಬಂದಾಗ
ನನ್ನನ್ನು
ಮಾವ
ಎಂದು
ಕರೆಯಿರಿ
ಎಂದು
ರಿಕ್ವೆಸ್ಟ್
ಮಾಡಿಕೊಂಡಿದ್ದಾರೆ.
ಇದಕ್ಕೆ
ರಾಮಾಚಾರಿ
ಸಹ
ಆಯ್ತು
ಸರ್
ಎಂದು
ಒಪ್ಪಿಗೆ
ಸೂಚಿಸಿ
ಮನೆ
ಕಡೆ
ಹೊರಟಿದ್ದಾನೆ.
ಚಾರುಗೆ
ತಂದೆ
ನೋಡುವ
ತವಕ
ಆಫೀಸ್‌ನಿಂದ
ಮನೆಗೆ
ಬಂದ
ರಾಮಚಾರಿ
ನಿಮ್ಮ
ತಂದೆ
ಸಿಕ್ಕಿದರು,
ಎಂದು
ಚಾರು
ಬಳಿ
ಹೇಳಿದ್ದಾನೆ.
ಇದಕ್ಕೆ
ನಾನು
ನನ್ನ
ತಂದೆಯನ್ನ
ನೋಡಬೇಕು
ಎಂದು
ಚಾರು
ಕಣ್ಣೀರು
ಹಾಕಿದ್ದಾಳೆ.
ನನ್ನ
ತಂದೆಯ
ಬಳಿ
ನನ್ನನ್ನು
ಕರೆದುಕೊಂಡು
ಹೋಗು
ಎಂದು
ರಾಮಾಚಾರಿಯ
ಬಳಿ
ರಿಕ್ವೆಸ್ಟ್
ಮಾಡಿದ್ದಾಳೆ.
English summary
Colors Kannada Ramachari serial today episode. know more.
Friday, July 28, 2023, 19:59
Story first published: Friday, July 28, 2023, 19:59 [IST]